ಚುನಾವಣಾ ಪ್ರಚಾರದ ಅನುಮತಿಗಾಗಿ ಸು-ವಿಧಾ ತಂತ್ರಾಂಶ ಆನ್ ಲೈನ್ ಬಳಸಿ; ಅನಗತ್ಯ ಅಲೆದಾಟ, ಒತ್ತಡ ತಪ್ಪಸಿ:* *ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ*

*ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-23*
*ಚುನಾವಣಾ ಪ್ರಚಾರದ ಅನುಮತಿಗಾಗಿ ಸು-ವಿಧಾ ತಂತ್ರಾಂಶ ಆನ್ ಲೈನ್ ಬಳಸಿ; ಅನಗತ್ಯ ಅಲೆದಾಟ, ಒತ್ತಡ ತಪ್ಪಸಿ:* *ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ*

ಧಾರವಾಡ (ಕ.ವಾ) ಏ.02: ನಿಗಧಿತ ಅವಧಿಯೋಳಗೆ ಚುನಾವಣಾ ಸಂಭಂದಿತ ಕಾರ್ಯ ಚಟುವಟೆಗಳನ್ನು ಮುಗಿಸುವ ಕಾರ್ಯ ಒತ್ತಡ ಚುನಾವಣಾ ಸಿಬ್ಬಂದಿ ಮತ್ತು ರಾಜಕೀಯ ಪಕ್ಷಗಳಿಗೆ ಇರುವುದು ಸಾಮಾನ್ಯ. 
ಚುನಾವಣಾ ಪ್ರಚಾರ ಕಾರ್ಯಕ್ಕೆ ಅಗತ್ಯವಿರುವ ಅನುಮತಿಗಳನ್ನು  ಸರಳವಾಗಿ ನೀಡಲು ಭಾರತ ಚುನಾವಣಾ ಆಯೋಗ ಸು-ವಿಧಾ ತಂತ್ರಾಂಶದ ಆನ್ ಲೈನ್ ಅಪ್ಲೀಕೇಶನ್ ನೀಡಿದೆ. ಇದನ್ನು ಬಳಸಿಕೊಳ್ಳುವ ಮೂಲಕ ಚುನಾವಣಾ ಪ್ರಚಾರಕ್ಜೆ ಅಗತ್ಯವಿರುವ ಅನುಮತಿಗಳನ್ನು ಪಡೆದುಕೊಳ್ಳಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ÍÏ Aಅವರು, ಸುವಿಧಾ ತಂತ್ರಾಂಶದಲ್ಲಿ ರಾಜಕೀಯ ಪಕ್ಷ, ಪಕ್ಷದ ಅಭ್ಯರ್ಥಿ, ಏಜಂಟ್, ಕಾರ್ಯಕರ್ತ ಅಥವಾ ಇತರು ತಮಗೆ ಬೇಕಿರುವ ಚುನಾವಣಾ ಪ್ರಚಾರ ಕಾರ್ಯಗಳಿಗೆ ಅನುಮತಿ ಪಡೆಯಲು ಆನ್ ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. 
  
ಆದರೆ ಆನ್ ಲೈನ್ ಅರ್ಜಿಯನ್ನು 48 ಗಂಟೆ ಮೊದಲು ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಯನ್ನು ಸಂಭಂದಿಸಿದ ಇಲಾಖೆಗಳು ಪರಿಶೀಲಿಸಿ, ಒಪ್ಪಿಗೆ ನೀಡಿದ ನಂತರ ಆಯಾ ಚುನಾವಣಾಧಿಕಾರಿಗಳು ಅನುಮತಿ ಪತ್ರ ನೀಡುತ್ತಾರೆ.


ಚುನಾವಣಾ ಸಭೆ, ರ ್ಯಾಲಿ , ಜಾಥಾ, ಪ್ರಚಾರ ಸಾಮಗ್ರಿ ಅಳವಡಿಕೆ, ವೇದಿಕೆ, ಮೈಕ್, ವಾಹನ, ಸಮಾರಂಭ ಮುಂತಾದ ರೀತಿಯ ಕಾರ್ಯಗಳಿಗೆ ( ಗೂಗಲ್ ಪ್ಲೇಸ್ಟೋರ್ ಇಸಿಐದಿಂದ SUVIDHA online Application) ಸು-ವಿಧಾದಲ್ಲಿ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಅನುಮತಿ ಪತ್ರ ಪಡೆಯಬಹುದು.

ವಿವಿಧ ರೀತಿಯ ಚುನಾವಣಾ ಪ್ರಚಾರ ಕಾರ್ಯ ಮತ್ತು ಅವುಗಳಿಗೆ ಸಂಬಂದಿಸಿದಂತೆ ಮತಕ್ಷೇತ್ರ ವ್ಯಾಪ್ತಿಗೆ ಆಯಾ ಚುನಾವಣಾ ಅಧಿಕಾರಿಗಳು, ಜಿಲ್ಲಾ ವ್ಯಾಪ್ತಿಗೆ ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ರಾಜ್ಯಮಟ್ಟಕ್ಕೆ ರಾಜ್ಯ ಚುನಾವಣಾ ಆಯೋಗ  ಅನುಮತಿಪತ್ರ ನೀಡುತ್ತದೆ. 

ಕಡಿಮೆ ಅವಧಿಯಲ್ಲಿ ಆಪ್ ಲೈನ್ ಅರ್ಜಿ ಸಲ್ಲಿಸಿ,  ಅವಸರ, ಒತ್ತಡ ಮಾಡುವ ಬದಲು  ಸು-ವಿಧಾ ಬಳಸಿ ಆನ್ ಲೈನ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ನಿಯಮಾನುಸಾರ ಅನುಮತಿ ಪಡೆದುಕೊಳ್ಳಬೇಕು ಮತ್ತು ಅನುಮತಿ ಪತ್ರದ ಅನುಗುಣವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನವೀನ ಹಳೆಯದು

نموذج الاتصال