ಸುವರ್ಣಾ ಎಜ್ಯುಕೇಶನ್ ಟ್ರಸ್ಟ್ (ರಿ) ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಮಹಿಳಾ ಸಾಧಕಿಯರಿಗೆ ಸನ್ಮಾನ’ ಕಾರ್ಯಕ್ರಮವನ್ನು

*ಮಾಜಿ ರೇಷ್ಮೆ ಇಲಾಖೆಯ ಅಧ್ಯಕ್ಷರು ಹಾಗೂ ಧಾರವಾಡ ಗ್ರಾಮೀಣ ಕ್ರೇತ್ರದ ಬಿಜೆಪಿ ಟೀಕೇಟ್ ಪ್ರಬಲ್ ಆಕಾಂಕ್ಷೆಯಗಿರುವ ಶ್ರೀಮತಿ ಸವಿತಾ ಅಮರಶೇಟ್ಟಿ 
ಅವರು ತಮ್ಮ ಸುವರ್ಣಾ ಎಜ್ಯುಕೇಶನ್ ಟ್ರಸ್ಟ್ (ರಿ) ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಮಹಿಳಾ ಸಾಧಕಿಯರಿಗೆ ಸನ್ಮಾನ’ ಕಾರ್ಯಕ್ರಮವನ್ನು ಧಾರವಾಡ ಜಿಲ್ಲೆಯ ಲೋಕುರು ಗ್ರಾಮದ ಗ್ರಾಮದೇವತೆ ದೇವಸ್ಥಾನ ಸಮುದಾಯ ಭವನದಲ್ಲಿ ಆಯೋಜಿಸಿದರು.* 
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿಗಳೊಂದಿಗೆ ಶ್ರೀಮತಿ ಸವಿತಾ ಅಮರಶೇಟ್ಟಿ ಅವರು ಧಾರವಾಡ ಗ್ರಾಮೀಣ ಪ್ರದೇಶದ ವಿವಿಧ ಗ್ರಾಮಗಳಿಂದ ಆಗಮಿಸಿದ ಎಲ್ಲ ಮಹಿಳಾ ಸಾಧಕಿಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು. ನಂತರದಲ್ಲಿ ಮಾತನಾಡಿದ ಅವರು ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ ಅಪಾರವಾದದ್ದು.
 ಸಂಸಾರವನ್ನು ಸರಿಯಾಗಿ ಮುನ್ನಡೆಸುವುದರ ಜೊತೆಗೆ ಅನೇಕ ಸಾಧನೆಗಳನ್ನು ಮಾಡುತ್ತಿರುವ ಮಹಿಳೆಯರು ಎಲ್ಲರಿಗೂ ಆದರ್ಶ. ಜೀವನದಲ್ಲಿ ಗಂಡು ಹೆಣ್ಣಿನ ಒಳಗೊಳ್ಳುವಿಕೆಯಿದ್ದಾಗ ಮಾತ್ರ ಯಾವುದೇ ಕಾರ್ಯ ಪರಿಪೂರ್ಣವಾಗುತ್ತದೆ. ಈ ಮೂಲಕ ಸಮಾನತೆಯ ಭಾವದಿಂದ ಅರ್ಥಪೂರ್ಣವಾದ ಬದುಕನ್ನು ನಡೆಸಬೇಕು. ಅಷ್ಟೇ ಅಲ್ಲದೆ ಜಗತ್ತಿನ ಅಭಿವೃದ್ಧಿಯಲ್ಲಿ ಮಹಿಳೆ ಪುರುಷನಷ್ಟೇ ಸರಿ ಸಮಾನಳು ಎಂದು ನುಡಿದರು. 

ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ನೆರವೇರಿಸಿದ ರಾಷ್ಟ್ರೀಯ ಸೇವಾ ಸಮಿತಿಯ ಪ್ರಾಂತ್ಯ ಕಾರ್ಯವಾಹಿಕಿ ಶ್ರೀಮತಿ ವೇದಾ ಕುಲಕರ್ಣಿಯವರು ಇಲ್ಲಿ ನೇರೆದ ಎಲ್ಲ ನನ್ನ ಮಹಿಳಾ ಬಳಗಕ್ಕೆ ಮಹಿಳಾ ದಿನಾಚರಣೆಯ ಶುಭಾಶಯಗಳು, ವರ್ಷದಲ್ಲಿ ಒಂದು ದಿನ ಮಾತ್ರ ಮಹಿಳೆಯರದಲ್ಲ, ಎಲ್ಲ 365 ದಿನವೂ
 ಮಹಿಳೆಯರದ್ದೇ ಆಗಿದೆ. ಮಹಿಳೆಯರಿಲ್ಲದೆ ಯಾವುದೇ ಮನೆ, ಸಮಾಜ, ದೇಶ ನಡೆಯಲು ಸಾಧ್ಯವೇ ಇಲ್ಲ ಎಂದು ನುಡಿದರು. ಮಹಿಳೆಯರು ಪುರುಷರಿಗೆ ಸರಿ ಸಮಾನವಾದ ಹಕ್ಕುಗಳನ್ನು ಹೊಂದಿದ್ದು, ಅವುಗಳ ಸದುಪಯೋಗ ಪಡೆದು, ಮುಂದೆ ಬರಬೇಕು. ಈ ಮೂಲಕ ಕುಟುಂಬವಷ್ಟೇ ಅಲ್ಲದೆ, ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ತಂದ ನಂತರ ಧಾರವಾಡ ಗ್ರಾಮೀಣ ಭಾಗದ ಸುತ್ತ-ಮುತ್ತ ಹಳ್ಳಿಗಳಿಂದ ಆಗಮಿಸಿದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಸನ್ಮಾನವನ್ನು ನೇರೆವೆರಿಸಲಾಯಿತು. ಹಿರಿಯ ತಾಯಂದಿರಿಗೆ, ಗ್ರಾಮೀಣ ಭಾಗದ ರೈತ ಮಹಿಳಿಯರಿಗೆ, ದೇಶದ ಗಡಿ ಕಾಯುವ ಯೋಧರ ಮನೆಯವರಿಗೆ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕಿಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಮಹಿಳಾ ಗ್ರಾಮೀಣ ನಾಯಕಿಯರಿಗೆ, ಗ್ರಾಂ ಪಂಚಾಯತ್ ಸದಸ್ಯರಿಗೆ, ಶಾಲಾ-ಕಾಲೇಜುಗಳಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರಿಗೆ, ಕ್ರೀಡೆಯಲ್ಲಿ ಸಾಧನೆಗೈದ ಮಹಿಳಾ ಕ್ರೀಡಾಪಟುಗಳಿಗೆ, ಕೋವಿಡ್ ಸಂದರ್ಭದಲ್ಲಿ ಹಗಲಿರುಳು ದುಡಿದ ನರ್ಸ್ ಗಳಿಗೆ, ಪೋಲಿಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಮಹಿಳೆಯರಿಗೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗ್ರಾಮೀಣ ಮಟ್ಟದಿಂದ ಹಿಡಿದು ರಾಜ್ಯ, ರಾಷ್ಟ್ರ ಮಟ್ಟದ ವರೆಗೂ ಸಾಧನೆಗೈದ ಸುಮಾರು 120ಕ್ಕೂ ಹೆಚ್ಚು ಮಹಿಳೆಯರಿಗೆ ಗುರುತಿಸಿ ಸನ್ಮಾನಿಸಿದರು. 


ನಂತರದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿಶ್ವನಾಥ ಅಮರಶೇಟ್ಟಿ ಅವರು ಜಗತ್ತಿನಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಹೆಣ್ಮಕ್ಕಳು ಶಿಕ್ಷಣ, ಸಾಹಿತ್ಯ ಮತ್ತಿತರ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸಂಸ್ಕೃತಿ ಉಳಿಸಿಕೊಂಡು ಬರುತ್ತಿದ್ದು, ಅವರಿಂದ ಮಾತ್ರ ಭಾಷೆಯ ಭವಿಷ್ಯ ನಿರೀಕ್ಷಿಸಬಹುದು ಎಂದು ಅವರು ಹೇಳಿದರು. 

ಈ ಸಂದರ್ಭದಲ್ಲಿ, ಮಲ್ಲವ್ವ ಶೇ ರಂಗಣ್ಣವರ (ಲೋಕುರು ಗ್ರಾಮ ಪಂಚಾಯತ್ ಅಧ್ಯಕ್ಷೆ), ವಿರಪ್ಪ ಏ ನರಸಿಂಗನವರ (ಲೋಕುರು ಗ್ರಾಮ ದೇವತೆ ಟ್ರಸ್ಟಿನ ಅದ್ಯಕ್ಷರು), ಮಲ್ಲಪ್ಪ ರೊಡ್ಡನವರ (ಉಪಾಧ್ಯಕ್ಷರು) , ವಿರುಪಾಕ್ಷಪ್ಪ ರು. ಮಡಿವಾಳರ (ನೀರ್ದೆಶಕರು),  ರುದ್ರಪ್ಪ ಬಾ ಕರಡಿಗುಡ್ಡ (ಪ್ರಧಾನ ಕಾರ್ಯದರ್ಶಿ), ಶಾಂತಪ್ಪ ಬಿಲ್ನವರ (ಸದಸ್ಯ), ಮಡಿವಾಳಪ್ಪ ಗ. ಬಾಗಲಕೋಟೆ (ಸದಸ್ಯರು), ಮಂಜುನಾಥ ಚಿಕನೇರಿ (ಸದಸ್ಯರು), ಸುವರ್ಣಾ ಎಜ್ಯುಕೇಶನ್ ಟ್ರಸ್ಟ್ ಸದಸ್ಯರಾದ ಪ್ರೀಯಾ ಅವರು, ಕರ್ನಾಟಕ ಸರ್ಕಾರ ರಾಜ್ಯ ಎನ್.ಎಸ್.ಎಸ್ ಪ್ರಶಸ್ತಿ ಪುರಸ್ಕೃತರಾದ ಸಂಜಯಕುಮಾರ ಬಿರಾದಾರ ಹಾಗೂ ಊರಿನ ಇನ್ನಿತರ ಹಿರಿಯರು, ಹಾಗೂ ಸುವರ್ಣಾ ಎಜ್ಯುಕೇಶನ್ ಟ್ರಸ್ಟ್ (ರಿ) ಇದರ ಸಿಬ್ಬಂದಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವರದಿ - ಸಂಜಯ ಬಿರಾದಾರ
ನವೀನ ಹಳೆಯದು

نموذج الاتصال