ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯ ಗ್ರಾಮದಲ್ಲಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶತಮಾನೋತ್ತರ ಸುವರ್ಣ ಮಹೋತ್ಸವ ಸಮಾರಂಭವನ್ನು

ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯ ಗ್ರಾಮದಲ್ಲಿ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶತಮಾನೋತ್ತರ ಸುವರ್ಣ ಮಹೋತ್ಸವ ಸಮಾರಂಭವನ್ನು 
Pp lಮಾ.19 ಮತ್ತು 20 ರಂದು ಶಾಲೆಯ ಆವರಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು
ಶತಮಾನೋತ್ತರ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಕರ್ನಾಟಕ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ ಹೇಳಿದರು.
ನಗರದ ಸರಕ್ಯೂಟ್ ಹೌಸನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
157 ವಸಂತ ಪೂರೈಸಿರುವ ಸರಕಾರಿ ಶಾಲೆಯು ಅಕ್ಷರ ಜ್ಞಾನದ ಜತೆಗೆ ಲಕ್ಷಾಂತರ ಜನರ ಬದುಕು ನಿರ್ಮಿಸಿ, ಈಗಲೂ ಜ್ಞಾನ ದಾಸೋಹ ಮಾಡುತ್ತಿದ್ದು, ಇದೀಗ ಶತಮಾನೋತ್ತರ ಸುವರ್ಣ ಸಂಭ್ರಮದಲ್ಲಿದೆ. ಕನ್ನಡದ ಪ್ರಥಮ ಕಾದಂಬರಿಕಾರ ‘ಗಳಗನಾಥ’ ಎಂಬ ಕಾವ್ಯ ನಾಮದಿಂದ ಖ್ಯಾತರಾಗಿದ್ದ ಸಾಹಿತಿ ವೆಂಕಟೇಶ ತಿರಕೋ ಕುಲಕರ್ಣಿ 1889 ರಲ್ಲಿ ಹಾಗೂ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ತಂದೆ ಗುರಪ್ಪ ಹಳಕಟ್ಟಿ ಅವರು ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಈ ಶಾಲೆಯ ಹೆಮ್ಮೆಯಾಗಿದೆ. ಸದ್ಯ ಈ ಶತಮಾನೋತ್ತರ ಸುವರ್ಣ 
ಸಂಭ್ರಮವನ್ನು ಶಾಲೆಯಲ್ಲಿ ಅದ್ದೂರಿಯಾಗಿ ಆಚರಿಸಲು ಇಡೀ ಗ್ರಾಮವೇ ಕೈ ಜೋಡಿಸಿದೆ. ಗುಡ್ಡದ ಮೇಲೆ ಇರುವ ಕಾರಣ ಗುಡ್ಡದ ಶಾಲೆಯೆಂಬ ಹೆಣೆಪಟ್ಟಿ ಪಡೆದಿರುವ ಈ ಶಾಲೆಯಿಂದ ಈಗ ಇಡೀ ಗ್ರಾಮದಲ್ಲಿಯೇ ಸಂಭ್ರಮ ಮನೆ ಮಾಡಿದೆ. ಕನ್ನಡ ಶಾಲೆಯ ಹಬ್ಬವಾಗಿ ಮಾರ್ಪಟ್ಟು, ಇಡೀ ಗ್ರಾಮವೇ ಈ ಹಬ್ಬದ ಆಚರಣೆಯ ತಯಾರಿ ಜೋರಾಗಿಯೇ ಸಾಗಿದೆ ಎಂದರು.

ಎರಡು ದಿನಗಳ ಸಂಭ್ರಮ : ಗ್ರಾಮದಲ್ಲಿ ಹಿರಿಯರಿಂದ ಹಿಡಿದು ಕಿರಿಯರು ಸೇರಿದಂತೆ ಎಲ್ಲರೂ ಈ ಸಂಭ್ರಮಕ್ಕೆ ಅಕ್ಷರ ಕಲಿಸಿದ ಗುರುಗಳ ಸಮ್ಮಿಲನದಲ್ಲಿ ಮಾ.19 ಮತ್ತು 20 ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸುತ್ತಿದ್ದು, ಇದಕ್ಕಾಗಿ ಇಲ್ಲಿ ಕಲಿತವರು ತನು-ಮನದಿಂದ ಕೈ ಜೋಡಿಸಿದ್ದಾರೆ. ಅಗತ್ಯ ಸಹಕಾರದೊಂದಿಗೆ ಆರ್ಥಿಕ ನೆರವು ನೀಡಿ, ಕಾರ್ಯಕ್ರಮದ ಯಶಸ್ವಿಗೆ ಜತೆಯಾಗಿದ್ದಾರೆ. ಹೀಗಾಗಿ ಎರಡು ದಿನಗಳ ಕಾಲ ಗ್ರಾಮದಲ್ಲಿ ಕನ್ನಡ ಶಾಲೆಯ ಹಬ್ಬ ನಡೆಯಲಿದ್ದು, ಈ 
ಸಂದರ್ಭದಲ್ಲಿ ಶಾಲೆಯಲ್ಲಿ ಈವರೆಗೆ ಕಲಿತವರು ಹಾಗೂ ಕಲಿಸಿದ ಗುರುಗಳ ಸಮ್ಮಿಲನಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ. ಇದಲ್ಲದೇ ಕಲಿಸಿದ ಗುರುಗಳಿಗೆ ಗುರುವಂದನೆ ನೆರವೇರಲಿದೆ ಎಂದರು.

ಮಾ.19 ರಂದು ಬೆಳಿಗ್ಗೆ 8 :೦೦ ಗಂಟೆಗೆ ಶಾಲಾ ಧ್ವಜಾರೋಹಣವನ್ನು ಗ್ರಾ.ಪಂ.ಅಧ್ಯಕ್ಷರಾದ ಸಾಯಿರಾಬಾನು ನೆರವೇರಿಸಲಿದ್ದಾರೆ. ಭುವನೇಶ್ವರಿ ಮೆರವಣಿಗೆಗೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ವೀರಣ್ಣ ಪರಾಂಡೆ ಚಾಲನೆ ನೀಡಲಿದ್ದಾರೆ. ಈ ವೇಳೆ ಮುಖ್ಯ ಅತಿಥಿಗಳಾಗಿ ಗಣ್ಯರು, ಎಸ್‌ಡಿಎಂಸಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಬೆಳಿಗ್ಗೆ 11:೦೦ ಗಂಟೆಗೆ ಶತಮಾನೋತ್ತರ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭವು ನಡೆಯಲಿದ್ದು, ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೀಪ ಪ್ರಜ್ವಲನಗೊಳಿಸಲಿದ್ದು, ಕೇಂದ್ರ ಸಂಸದೀಯ ವ್ಯವಹಾರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು, ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು,  ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ, ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ದಿ ಮತ್ತು ಸಕ್ಕರ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಿಎಂ, ಶಾಸಕರಾದ ಜಗದೀಶ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಸಿ.ಎಂ.ನಿಂಬಣ್ಣವರ, ಕುಸುಮಾವತಿ ಶಿವಳ್ಳಿ,  ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್, ಸಲೀಂ ಅಹ್ಮದ, ಮೇಯರ್ ಈರೇಶ ಅಂಚಟಗೇರಿ, ಮಾಜಿ ಶಾಸಕರಾದ ಸೀಮಾ ಮಸೂತಿ, ಧಾರವಾಡದ ಕೆಎಂಎಫ್ ಅಧ್ಯಕ್ಷ ಶಂಕರ ಮುಗದ, ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ಜಿ.ಪಂ. ಮಾಜಿ ಅಧ್ಯಕ್ಷರಾದ ಚೈತ್ರಾ ಶಿರೂರ, ವಿಜಯಲಕ್ಷೀ ಪಾಟೀಲ, ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ಮಧ್ಯಾಹ್ನ 3:೦೦ ಘಂ, ಕಲಿತ ಶಾಲೆಗೆ ನಮನಗಳು: ನೆನೆ ನೆನೆ ಆ ದಿನ ಕಾರ್ಯಕ್ರಮ ಜರುಗಲಿದ್ದು, ಖ್ಯಾತ ಜ್ಯೋತಿಷಿ ಮಹಾದೇವಪ್ಪ ಅಷ್ಟಗಿ ಸಾನಿಧ್ಯದಲ್ಲಿ ಚಿಕ್ಕೋಡಿಯ ಸೋಮಶೇಖರ ಜುಟ್ಟಲ ಉದ್ಘಾಟಿಸಲಿದ್ದಾರೆ. ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಹಾದೇವ ಕೂಡವಕ್ಕಲಿಗೇರ ಅಧ್ಯಕ್ಷತೆ ವಹಿಸಲಿದ್ದು, ಕೆಎಸ್‌ಆರ್‌ಟಿಸಿ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ಬಸಲಿಂಗಪ್ಪ ಬೀಡಿ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ. ಇದಾದ ಬಳಿಕ ಸಂಜೆ 5 00 ಘಂ, ಉಪ್ಪಿನಬೆಟಗೇರಿ ಗ್ರಾಮದ ಹಿರಿಮೆ-ಗರಿಮೆ : ಚಿಂತನಾ ಗೋಷ್ಠಿ ಜರುಗಲಿದ್ದು, ಮುನಿ ಮುರಘೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ನಮ್ಮ ಶಾಲೆ-ನಮ್ಮೂರ ಹೆಮ್ಮೆ ವಿಷಯ ಕುರಿತು ಎನ್.ಟಿ.ಉಪಾಧ್ಯೆ ಮಂಡಿಸಲಿದ್ದು,  ವಿವಿಧ ಕ್ಷೇತ್ರಗಳಲ್ಲಿ ಉಪ್ಪಿನಬೆಟಗೇರಿಯ ಸಾಧನೆ ಹಜ್ಜೆ ಗುರುತುಗಳು ಎಂಬ ವಿಷಯ ಕುರಿತು ರಂಗನಾಥ ವಾಲ್ಮೀಕಿ ಉಪನ್ಯಾಸ ನೀಡಲಿದ್ದಾರೆ. ತೆಲಂಗಾಣದ ಆದಿ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ.ತೇಜಸ್ವಿನಿ ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಲಿಸ್ದು, ಬೀದರ ಜಿಲ್ಲೆಯ ಡಿಡಿಪಿಐ ಗಿರೀಶ ಪದಕಿ 
ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿದ್ಯಾದಾನ ಸಮಿತಿಯ ಗೌರವ ಕಾರ್ಯದರ್ಶಿ ಗಂಗಪ್ಪ ಜವಳಗಿ, ಕವಿಸಂ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 7:೦೦ ಘಂ, ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ. ಬೆಳಗಾವಿಯ ಆರ್‌ಟಿಓ ಹಿರಿಯ ಮೋಟಾರ ವಾಹನ ನಿರೀಕ್ಷಕ ಶಿವಾನಂದ ಕೇಸರಿ ಅವರು ಚಾಲನೆ ನೀಡಲಿದ್ದು, ಚನ್ನಬಸಪ್ಪ ಮಸೂತಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ್ಪಿನಬೆಟಗೇರಿಯ ಸರಕಾರಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದ್ದು, ಹಾಸ್ಯ ಕಲಾವಿದರಾದ ಮಹಾದೇವ ಸತ್ತಿಗೇರಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಮಹಾಂತೇಶ ಕುನ್ನಾಳ, ಗಿರಿಜಾ ಕರಪೂರ ಅವರಿಂದ ಹಾಸ್ಯ ಸಂಜೆ ನೆರವೇರಲಿದೆ ಎಂದರು.

ಮಾ.20 ರಂದು ಬೆಳಿಗ್ಗೆ 10 ಘಂ,  ಉಪ್ಪಿನಬೆಟಗೇರಿಯ ಮೂರು ಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಗುರು ವಂದನೆ ಕಾರ್ಯಕ್ರಮ ನೆರವೇರಲಿದೆ. ಬೆಳಗಾವಿಯ ಇಂಜನೀಯರ್ ಶ್ರೀಶೈಲ ಪುಡಕಲಕಟ್ಟಿ ಉದ್ಘಾಟಿಸಲಿದ್ದು, ಈ ಸಂದರ್ಭದಲ್ಲಿ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶಿಕ್ಷಕರಿಗೆ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿದ ಮತ್ತು ಸಲ್ಲಿಸುತ್ತಿರುವ ಶಿಕ್ಷಕರಿಗೆ ಗೌರವ ಸನ್ಮಾನ ನೆರವೇರಲಿದೆ. ಇದಲ್ಲದೇ ಎಸ್‌ಜಿವಿ ಕಾಲೇಜು ಹಾಗೂ ಪ್ರೌಢಶಾಲೆಯಿಂದ ಸೇವಾ 
ನಿವೃತ್ತಿಯಾದ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರು ಸೇರಿದಂತೆ ಗಣ್ಯರಿಗೆ ವಿಶೇಷ ಗೌರವ ಸನ್ಮಾನ ಜರುಗಲಿದೆ. ಅಂದು ಮಧ್ಯಾಹ್ನ 3 ಘಂ, ಸಮಾರಂಭದ ಯಶಸ್ಸಿಗೆ ಕೈ ಜೋಡಿಸಿದ ಮಹನೀಯರಿಗೆ ಹಾಗೂ ಸೈನಿಕರಿಗೆ ಸನ್ಮಾನ ನಡೆಯಲಿದೆ. ಇದಾದ ಬಳಿಕ ಸಂಜೆ 5ಘಂ, ವಿಜಯಪುರ ಮಮದಾಪುರ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಽಕಾರಿ ಗುರುದತ್ತ ಹೆಗಡೆ, ಜಿ.ಪಂ.ಸಿಇಓ ಡಾ.ಸುರೇಶ ಇಟ್ನಾಳ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಜಯಶ್ರೀ ಶಿಂತ್ರಿ, ಧಾರವಾಡ ಉಪವಿಭಾಗಾಽಕಾರಿ ಅಶೋಕ ತೇಲಿ ಆಗಮಿಸಲಿದ್ದು, ಜಿ.ಪಂ.ಮಾಜಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಹುಗ್ಗಿ, ಹುಕ್ಕೇರಿಯ ಕ್ಷೇತ್ರ ಶಿಕ್ಷಣಾಽಕಾರಿ ಮೋಹನ ದಂಡಿನ, ನಿವೃತ್ತ ಡಿವೈಎಸ್‌ಪಿ ಸುರೇಶ ಮಸೂತಿ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದಾದ ಬಳಕ ಸಂಜೆ 7 ಘಂ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಶಂಭಯ್ಯ ಹಿರೇಮಠ ಹಾಗೂ ತಂಡದಿಂದ ಜಾನಪದ ಗೀತೆಗಳು, ಹೇಮಂತ ಲಮಾಣಿ ತಂಡದಿಂದ ವಚನ ಗಾಯನ ನೆರವೇರಲಿದೆ. ಇದಾದ ಬಳಿಕ ಮಕ್ಕಳಿಂದ ಪ್ರತಿಭೋತ್ಸವ ಹಾಗೂ ಗ್ರಾಮದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಕಾರ್ಯಧ್ಯಕ್ಷ ವೀರಣ್ಣ ಪರಾಂಡೆ, ಕೋಶಾಧ್ಯಕ್ಷ ರಾಮಲಿಂಗಪ್ಪ ನವಲಗುಂದ, ಗೌರವಾಧ್ಯಕ್ಷ ಚನಬಸಪ್ಪ‌ ಮಸೂತಿ, ಉಪಾಧ್ಯಕ್ಷರಾದ ಅಶೋಕ ಮಸೂತಿ, ಗಿರೀಶ ಪದಕಿ, ಮಂಜುನಾಥ ಸಂಕಣ್ಣನವರ, ರವೀಂದ್ರ ಯಲಿಗಾರ, ಪ್ರಧಾನ ಕಾರ್ಯದರ್ಶಿಗಳಾದ ಗುರು ತಿಗಡಿ, ಕಾಶಪ್ಪ ದೊಡವಾಡ ಸೇರಿದಂತೆ ಪದಾಧಿಕಾರಿಗಳು ಇದ್ದರು. 
------ಬಾಕ್ಸ ಮಾಡಿರಿ----

ಕರ್ನಾಟಕ ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿಯಿಂದ 30 ಲಕ್ಷ ರೂ.ಅನುದಾನ ಲಭಿಸಿದ್ದು, ಅದರ ಅಡಿ ಅಭಿವೃದ್ದಿ ಕಾರ್ಯಗಳು ಸಾಗಿವೆ. ಈಗಾಗಲೇ ಸುಸಜ್ಜಿತ ಕಂಪೌಂಟ್, ಮೈದಾನ ನಿರ್ಮಾಣವೂ ಆಗಿದ್ದು, ರಂಗಮಂದಿರ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಇದರ ಜತೆಗೆ ಸ್ಮಾರ್ಟ ಕ್ಲಾಸ, ಸ್ಮಾರ್ಟ ಬೋರ್ಡ ಸೇರಿದಂತೆ ಮೂಲಭೂತ ಸೌಲಭ್ಯಗಳಿಗೆ ಆದ್ಯತೆ ಸಿಗಲಿದೆ. ಎಲ್ಲ ವರ್ಗದ ಮಕ್ಕಳು ಈ ಶಾಲೆಗೆ ಬರಲು ಹೈಟೆಕ್ ಶಾಲೆಯನ್ನಾಗಿ ರೂಪಿಸಲು ಉದ್ದೇಶಿಸಲಾಗಿದ್ದು, ಜತೆಗೆ ಹಸಿರು ಉದ್ಯಾನವು ಕಂಗೊಳಿಸುವಂತೆ ಮಾಡಬೇಕಿದೆ. ಒಟ್ಟಿನಲ್ಲಿ ಮಾದರಿ ಶಾಲೆಯಾಗಿ ರೂಪಿಸುವತ್ತ ಹೆಜ್ಜೆ ಇಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ, ನೆರವೂ ಅಗತ್ಯವಿದೆ. 
ಪತ್ರಿಕಾಗೋಷ್ಠಿಯಲ್ಲಿ-ತವನಪ್ಪ ಅಷ್ಟಗಿ, ಅಧ್ಯಕ್ಷರು, ಶತಮಾನೋತ್ತರ ಸುವರ್ಣ ಸಮಿತಿ, ಉಪ್ಪಿನಬೆಟಗೇರಿ 

--------

*ಶಾಲೆಯ ಇತಿಹಾಸ ಇಂತಿಷ್ಟು*
ಈ ಕನ್ನಡ ಶಾಲೆಯಲ್ಲಿ ಕಲಿತ ಸಾಕಷ್ಟು ಹಿರಿಯ ಜೀವಗಳು ಮರೆಯಾಗಿ, ಮಣ್ಣಲ್ಲಿ ಮಣ್ಣಾಗಿ ಹೋಗಿದ್ದರೂ ಶಾಲೆಯ ಮಾರ್ಗದರ್ಶನ, ಅದರ ಕೊಡುಗೆ ಇಡೀ ಈ ಭಾಗಕ್ಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಪ್ರಾರಂಭಗೊಂಡು ಈಗ 157 ವಸಂತಗಳನ್ನು ಪೂರೈಸಿರುವ ಈ ಸರಕಾರಿ ಶಾಲೆಯು 1865 ಅಗಸ್ಟ್ 01 ರಂದು ಗ್ರಾಮದಲ್ಲಿ ಆರಂಭಗೊಂಡಿತು. ಆರಂಭದಲ್ಲಿ ಗ್ರಾಮದ ದೇವಸ್ಥಾನ, ಮನೆಯಲ್ಲಿ ಹಾಗೂ ಚಾವಡಿಗಳಲ್ಲಿ ತರಗತಿಗಳು ನಡೆದವು. ಕಾಲಕ್ರಮೇಣ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಗ್ರಾಮದ ಹಿರಿಯರೆಲ್ಲರೂ ಸೇರಿ ಊರಿನ ಗುಡ್ಡದ ಮೇಲೆ 1864 ಆ.15 ರಂದು ಈ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಿದರು. ಈ ಶಾಲೆಯಲ್ಲಿ ಕಲಿತ ಅನೇಕ ಮಹನೀಯರು ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಕೃಷಿ, ಸಾಂಸ್ಕೃತಿಕ, ಸಂಗೀತ, ಕಲೆ, ದೇಶ ಸೇವೆ ಮತ್ತು ಮಾಧ್ಯಮ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದು, ಈಗಲೂ ನೀಡುತ್ತಿದ್ದಾರೆ.

ನವೀನ ಹಳೆಯದು

نموذج الاتصال