*ಪೆÇಲೀಸ್ ವಸತಿ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ*
*ಧಾರವಾಡ (ಕರ್ನಾಟಕ ವಾರ್ತೆ)ಮಾ.14*: ಕರ್ನಾಟಕ ರಾಜ್ಯ ಪೆÇಲೀಸ್ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗ, ಆಗ್ನಿಶಾಮಕ ದಳ ಹಾಗೂ ಖಾಯಂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರ ಮಕ್ಕಳಿಗಾಗಿ ಪೆÇಲೀಸ್ ಕಲ್ಯಾಣ ಕಾರ್ಯಕ್ರಮದ ಅಂಗವಾಗಿ ಧಾರವಾಡ ಜಿಲ್ಲೆಯಲ್ಲಿ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೆÇಲೀಸ್ ಮಕ್ಕಳ ವಸತಿ ಶಾಲೆಯನ್ನು 1997 ರಲ್ಲಿ ಪ್ರಾರಂಭಿಸಿದ್ದು, ಕಳೆದ 25 ವರ್ಷದಿಂದ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು 6 ರಿಂದ 10 ನೇ ತರಗತಿಯವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ತರಗತಿಗಳಿದ್ದು
ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಫಲಿತಾಂಶ ಹೊಂದಿದ್ದು, ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ರಾಜ್ಯಮಟ್ಟದಲ್ಲಿ ಹಾಗೂ ಕ್ರೀಡೆಗಳಲ್ಲಿ ರಾಜ್ಯಮಟ್ಟ, ರಾಷ್ಟ್ರಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ.
ಇದು ರಾಜ್ಯದ ಏಕೈಕ ಪೆÇಲೀಸ್ ಮಕ್ಕಳ ವಸತಿ ಶಾಲೆಯಾಗಿ ಹೊರಹೊಮ್ಮಿದೆ. ಪ್ರಸ್ತುತ 2023-24 ನೇ ಸಾಲಿಗೆ 6 ರಿಂದ 9 ನೇ ತರಗತಿಗಳಿಗೆ ಕನ್ನಡ ಮಾಧ್ಯಮ - 25 ಹಾಗೂ ಆಂಗ್ಲ ಮಾಧ್ಯಮ-25 ಪೆÇಲೀಸ್ ಅಧಿಕಾರಿ, ಸಿಬ್ಬಂದಿ ವರ್ಗ, ಅಗ್ನಿಶಾಮಕ ದಳ ಹಾಗೂ ಖಾಯಂ ಗೃಹರಕ್ಷಕ ದಳದ ಸಿಬ್ಬಂದಿ ವರ್ಗದವರ ಮಕ್ಕಳಿಗಾಗಿ ಪ್ರವೇಶ ಆರಂಭವಾಗಿದೆ. ಉಚಿತ ವಸತಿ, ಊಟ ಹಾಗೂ ಸಮವಸ್ತ್ರ ನೀಡಲಾಗುತ್ತದೆ. ಇಚ್ಛೆಯುಳ್ಳ ಅಭ್ಯರ್ಥಿಗಳು ಖುದ್ದಾಗಿ ಅಂಚೆ ಮುಖಾಂತರ ಅರ್ಜಿಯನ್ನು, ಪ್ರಾಚಾರ್ಯರು, ಎನ್. ಎ. ಮುತ್ತಣ್ಣ ಸ್ಮಾರಕ ಪೆÇಲೀಸ್ ಮಕ್ಕಳ ವಸತಿ ಶಾಲೆ, ಧಾರವಾಡ ರವರಿಗೆ ತಲುಪಿಸಬೇಕು ಎಂದು ಪೆÇಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
**************
ಜಾಹೀರಾತು ಹಾಗೂ ಸುದ್ದಿಗಾಗಿ ಸಂರ್ಪಕಿಸಿರಿ: 9945564891