ಡಾ.ಫ.ಗು.ಹಳಕಟ್ಟಿ ಸ್ಮಾರಕ ಭವನ ಭೂಮಿ ಪೂಜಾ ಕಾರ್ಯಕ್ರಮ.
ಬಸವತತ್ವ ಪ್ರಸಾರ ಸಂಸ್ಥೆಯು ಬಸವತತ್ವ ಪ್ರಚಾರ ಹಾಗೂ ವಚನ ಸಾಹಿತ್ಯವನ್ನು ಪ್ರಸಾರ ಮಾಡುತ್ತಿದ್ದು 1978 ರಿಂದ ಸಂಸ್ಥೆ ಆರಂಭಗೊಂಡಿದ್ದು ಅನೇಕ ಹಿರಿಯರು ಇದಕ್ಕೆ ಶ್ರಮಿಸಿದ್ದಾರೆ. ವಚನ ಪಿತಾಮಹ ಹಳಕಟ್ಟಿಯವರ ಮಾರ್ಗದರ್ಶನ ದಂತೆ ಸಂಸ್ಥೆ ಕೆಲಸ ಮಾಡುತ್ತಿದೆ. ಈಗ ಅವರ ಹೆಸರಿನಲ್ಲಿ ಭವನ ನಿರ್ಮಿಸಲು ಬಸವಾಭಿಮಾನಿಗಳು ಹೆಚ್ಚಿನ ಆಸಕ್ತಿ ತೋರಿದ್ದಾರೆ. 2016 ನೇ ಇಸ್ವಿಯಲ್ಲಿ ಸಪ್ತಗಿರಿ ಲೇಔಟ ಅಲ್ಲಮ ಪ್ರಭುನಗರದಲ್ಲಿ ಜಾಗೆ ಪಡೆದಿದೆ. ಸ್ಮಾರಕ ಭವನಕ್ಕೆ ಸರ್ಕಾರ ಸಹಾಯ ಮಾಡಲಿ ಎಂದು ಸಂಸ್ಥೆ ವತಿಯಿಂದ 2021 ರಲ್ಲಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿತು. ಸರ್ಕಾರ ಆರ್ಥಿಕ ಸಹಾಯ ಮಾಡಿದರೆ ಉತ್ತಮ ಇಲ್ಲದಿದ್ದರೆ ದಾಸೋಹಿಗಳಿಂದ ದೇಣಿಗೆ ಸಂಗ್ರಹಿಸಿ ಸ್ಮಾರಕ ರಚಿಸಲು ಸಿದ್ದರಾಗಿದ್ದೇವೆ. ಇದೀಗ ಭೂಮಿ ಪೂಜೆ ಹಮ್ಮಿಕೊಂಡಿದ್ದು ಈಗಾಗಲೇ ಬಸವ ಭಕ್ತರು ಡಾ. ಹಳಕಟ್ಟಿಯವರ ಅಭಿಮಾನಿಗಳು ಧನ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ಸರ್ಕಾರದ ಸಹಾಯವನ್ನು ನಿರೀಕ್ಷೆ ಮಾಡುವುದರ ಜೊತೆಗೆ ನಮ್ಮ ಕಾರ್ಯವನ್ನು ನಾವು ಮುಂದುವರೆಸಲು ಸಿದ್ದರಾಗಿದ್ದೇವೆ ಎಂದರು.
ಅಂದಿನ ಸಮಾರಂಭವು ತೋಂಟದಾರ್ಯ ಸಂಸ್ಥಾನಮಠದ ಶ್ರೀ ಡಾ. ತೋಂಟದ ಸಿದ್ದರಾಮ ಸ್ವಾಮಿಜಿ ದಿವ್ಯ ಸಾನಿಧ್ಯದಲ್ಲಿ ಜಮಖಂಡಿ ಓಲೆಮಠದ ಶ್ರೀ ಡಾ. ಅಭಿನವಕುಮಾರ ಚನ್ನಬಸವ ಸ್ವಾಮಿಜಿ ಭೂಮಿ ಪೂಜೆ ನೆರವೇರಿಸುವರು. ಹುಬ್ಬಳ್ಳಿ ಮೂರಸಾವಿರ ಮಠದ ಶ್ರೀ ಗುರುಸಿದ್ದರಾಜ ಯೋಗೇಂದ್ರ ಸ್ವಾಮಿಜಿ, ಮುರಘಾಮಠದ ಶ್ರೀ ಡಾ. ಮಲ್ಲಿಕಾರ್ಜುನ ಸ್ವಾಮಿಜಿ, ಚಿತ್ತರಗಿ ಇಳಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮಿಜಿ, ಮನಗುಂಡಿ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮಿಜಿ, ಬೈಲೂರ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮಿಜಿ ಸಾನಿಧ್ಯವಹಿಸುವರು. ಸಂಶೋಧಕ ಡಾ.ವೀರಣ್ಣ ರಾಜೂರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದು ಬಸವತತ್ವ ಪ್ರಸಾರ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಆರ್. ಗುಂಜಾಳ, ಗೌರವಾಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆವಹಿಸುವರು. ಕಾರ್ಯದರ್ಶಿ ಡಾ. ಸುಲೋಚನಾ ಮಟ್ಟಿ ಕೋಶಾಧ್ಯಕ್ಷ ಕೂಡಲಪ್ಪ ಕೊಪ್ಪದ, ಕಾರ್ಯಾಧ್ಯಕ್ಷ ಮಹೇಶ ಬೆಲ್ಲದ ಉಪಸ್ಥಿತರಿರುವರು. ಈ ಸಮಾರಂಭದಲ್ಲಿ ಬಸವತತ್ವ ಪ್ರಸಾರ ಸಂಸ್ಥೆಯ ಸರ್ವ ಸದಸ್ಯರು ಹಾಗೂ ಬಸವ ಭಕ್ತರು ಮತ್ತು ಡಾ.ಫ.ಗು.ಹಳಕಟ್ಟಿ ಅವರ ಅಭಿಮಾನಿ ಬಳಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೂಡಲಪ್ಪ ಕೊಪ್ಪದ. ಮಾರ್ಕಾಂಡೆಯ ದೊಡಮನಿ. ಡಾ ಸುಲೋಚನಾ ಮಟ್ಟಿ. ಸರ್ವಮಂಗಲ ಕಲಿವಾಳ ಇದ್ದರು.