*ಜೀವನವೂ ಒಂದು ಕ್ರೀಡೆ ಇದ್ದಂತೆ: ಆಕ್ರಮಣಶೀಲ ಆಟವಾಡಿ ಗೆಲುವು ನಮ್ಮದಾಗಿಸಿಕೊಳ್ಳಬೇಕು*
*-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಧಾರವಾಡ(ಕರ್ನಾಟಕ ವಾರ್ತೆ) ಜ.16:
ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ.ಗ್ರಾಮೀಣ ಯುವಸಂಘಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿ ಐದು ಲಕ್ಷ ಜನರಿಗೆ ಉದ್ಯೋಗ ಒದಗಿಸುವ ಹೊಂದಲಾಗಿದೆ.ಯುವನೀತಿಯಲ್ಲಿ ಶಿಕ್ಷಣ,ಕ್ರೀಡೆ,ಸಂಸ್ಕೃತಿ,ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಲಾಗಿದೆ.ಜೀವನವೂ ಒಂದು ಕ್ರೀಡೆಯಾಗಿದೆ ಇಲ್ಲಿ ಸೋಲದಂತೆ ಎಚ್ಚರಿಕೆಯ ಆಕ್ರಮಣಕಾರಿ ಆಟ ಆಡಿ ಗೆಲ್ಲಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಕೃಷಿ ವಿವಿಯಲ್ಲಿ ಆಯೋಜಿಸಿದ್ದ 26 ನೇ ರಾಷ್ಟ್ರೀಯ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು,
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯುವಜನರ ಸಮಗ್ರ ವಿಕಾಸಕ್ಕಾಗಿ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ರಾಜ್ಯಸರ್ಕಾರವೂ ಸ್ವಾಮಿ ವಿವೇಕಾನಂದ ಯೋಜನೆ ಅನುಷ್ಠಾನ ಮಾಡುತ್ತಿದೆ.ಯುವಜನರ ಸರ್ವಾಂಗೀಣ ಅಭಿವೃದ್ಧಿಗೆ ಯುವನೀತಿ ರೂಪಿಸಲಾಗಿದೆ ಎಂದರು.
ರಾಷ್ಟ್ರೀಯ ಯುವಜನೋತ್ಸವವನ್ನು ಅತ್ಯಂತ ಯಶಸ್ವಿಗೊಳಿಸಿರುವುದು ಅಭಿನಂದನೀಯ ಕಾರ್ಯವಾಗಿದೆ.ಐದು ದಿನಗಳ ಈ ಉತ್ಸವ ಸ್ಮರಣೀಯವಾಗಿದೆ.ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಯುವ ಜನರಲ್ಲಿ,ವೈವಿಧ್ಯಮಯ ಸಂಸ್ಕೃತಿ,ಜೀವನ ವಿಧಾನಗಳಿವೆ ಎಲ್ಲರ ಹೃದಯಗಳು ಭಾರತಮಾತೆಗೆ ಮಿಡಿಯುತ್ತಿವೆ.ಆ ಭಾವನೆಯೇ ನಮ್ಮೆಲ್ಲರನ್ನೂ ಒಂದುಗೂಡಿಸಿದೆ.ದೇಶಕ್ಕಾಗಿ ಪ್ರಾಣವನ್ನು ಕೊಡುವ ಕಾಲ ಈಗಿಲ್ಲ,ಜೀವನ ಮುಡಿಪಾಗಿಡುವ ಕಾಲ ಇದಾಗಿದೆ.ಸಮಯ ಯಾರಿಗಾಗಿಯೂ ಕಾಯುವುದಿಲ್ಲ.ದೇಶವೂ ಕೂಡ ಯಾರಿಗಾಗಿ ಕಾಯುವುದಿಲ್ಲ ನಾವು ನಮ್ಮ ದಕ್ಷತೆ,ಸಕ್ಷಮತೆ ಹೆಚ್ಚಿಸಿಕೊಳ್ಳಬೇಕು.ಯೌವ್ವನದಲ್ಲಿ ಏನಾದರೂ ಸಾಧಿಸದಿದ್ದರೆ ಭವಿಷ್ಯದಲ್ಲಿಯೂ ಕೂಡ ವಿಶೇಷ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ.ಇಂದು ಇಚ್ಛಿಸಿದ ಕಾರ್ಯಗಳು ನಾಳೆಗೆ ಕೈಗೂಡಬೇಕಾದರೆ ಸತತ ಪ್ರಯತ್ನಶೀಲತೆ ಬೇಕು.ದೇಶದ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಎವರೆಸ್ಟ್ ಏರಿದ ತೇನ್‌ಸಿಂಗ್ ಭಾರತದ ತ್ರಿವರ್ಣಧ್ವಜ ಹಾರಿಸಿದ ಅವರ ಶ್ರಮದ ಹಿಂದೆ ಆತನ ತಾಯಿಯ ಪ್ರೇರಣೆ,ಸ್ಫೂರ್ತಿ ಇತ್ತು.ಅವರು ತಮ್ಮ 42 ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದಾಗ ಪ್ರತಿಕ್ರಿಯೆ ನೀಡಿ, ಇದು ಒಂದು ದಿನಕ್ಕೆ ಸಾಧ್ಯವಾದುದಲ್ಲ ತನ್ನ 10 ನೇ ವಯಸ್ಸಿನಿಂದ ಆ ನಿಟ್ಟಿನಲ್ಲಿ ಪ್ರಾರಂಭಿಸಿದ ಪ್ರಯತ್ನ ಇದಕ್ಕೆ ಕಾರಣವೆಂಬುದನ್ನು ಒತ್ತಿ ಹೇಳಿದರು.ಯುವಜನರು ತಾವು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಬೇಕು,ಗುರಿ ಮುಟ್ಟುವ ತನಕ ವಿರಮಿಸಬಾರದು.ಭಾರತದ ಜನಸಂಖ್ಯೆಯೇ ನಮ್ಮ ಮಾನವ ಸಂಪನ್ಮೂಲವಾಗಿದೆ.ಭಾರತದ ಮಕ್ಕಳ ಕಲಿಕೆಯ ಬೌಧ್ಧಿಕ ಮಟ್ಟ ಉನ್ನತವಾಗಿದೆ.
ಭಾರತದಂತಹ ಬೃಹತ್ ರಾಷ್ಟ್ರವು ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಕೋವಿಡ್ ವಿಷಮ ಪರಿಸ್ಥಿತಿಯಲ್ಲಿಯೂ ಎಲ್ಲರಿಗೂ ಆಹಾರ,ಉದ್ಯೋಗ,ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ.ಶಿಕ್ಷಣದೊಂದಿಗೆ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಾಗಿದೆ.ಮುದ್ರಾ ಯೋಜನೆ,ಸ್ವನಿಧಿ ಯೋಜನೆಗಳ ಮೂಲಕ ಸ್ವ ಉದ್ಯೋಗಕ್ಕೆ ದೊಡ್ಡ ಪ್ರೋತ್ಸಾಹ ದೊರೆತಿದೆ.ನಮ್ಮ ಏಕತೆಯಲ್ಲಿಯೇ ನಮ್ಮ ಶಕ್ತಿ ಇದೆ ಎಂದು ಮುಖ್ಯಮಂತ್ರಿ ಹೇಳಿದರು.
SUBSCRIBE OUR STAR 74 NEWS CHANNEL LIKE & SHARE