ಶ್ರೀ ಬನಶಂಕರಿ ದೇವಿ ಜಾತ್ರಾ ಮಹೋತ್ಸವ, ಪಲ್ಲಕ್ಕಿ ಉತ್ಸವ
ಧಾರವಾಡ....
...ಬನದ ಹುಣ್ಣಿಮೆ ನಿಮಿತ್ಯವಾಗಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ಪಲ್ಲಕ್ಕಿ ಉತ್ಸವವು ಜ, 6 ರಂದು ಬೆಳಗ್ಗೆ 11 ಕ್ಕೆ ಶಹರದ ಕಾಮನಕಟ್ಟಿ ಚರಂತಿಮಠ ಗಾರ್ಡನದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಜರುಗಲಿದೆ.
- ಬೆಳಗ್ಗೆ ೦6 ಕ್ಕೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ, ಹೋಮ, ಹವನ ಜರುಗಲಿದ್ದು ದೇವಿಗೆ ವಿಶೇಷ ಪೂಜೆ ಹಾಗೂ ಮಂತ್ರ ಪಠಣ ನಡೆಯಲಿದೆ. ಆಯುವೇದ ತಜ್ಞ ವೈದ್ಯೆ ಡಾ. ಶ್ರೀಮತಿ ರಾಜೇಶ್ವರಿ ನವಲೂರ ಪಲ್ಲಕ್ಕಿ ಉತ್ಸವದ ಪೂಜೆ ಹಾಗೂ ಧಾರ್ಮಿಕ ವಿಧಿ ವಿಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕುಂಭಮೇಳ ಹಾಗೂ ಪಂಜಿನ ಪ್ರದಕ್ಷಿಣಿ ನಂತರ ದೇವಸ್ಥಾನದ ಆವರಣದಿಂದ ವಾದ್ಯ ಮೇಳದೊಂದಿಗೆ ದೇವಿ ವಿಗ್ರಹ ಹಾಗೂ ಗೃಂಥಗಳ ಮೆರವಣಿಗೆಯು ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿರುವ ಜ್ಯೋತಿಬಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮರಳಿ ಶ್ರೀ ಬನಶಂಕರಿ ದೇವಸ್ಥಾನ ತಲುಪಲಿದೆ. ನಂತರ ಸುಮಂಗಲೆಯರಿAದ ಮಂತ್ರ ಪಠಣ ಪೂಜೆ ನೆರವೇರಿಸಿ ಮಹಾಪ್ರಸಾದ ಆರಂಭಿಸಲಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ಸದ್ಭಕ್ತರು ಹಾಗೂ ಉತ್ಸವ ಸಮಿತಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿ ಕೃಪೆಗೆ ಪಾತ್ರರಾಗಬೇಕು ಎಂದು ಜಾತ್ರಾ ಮಹೋತ್ಸವ ಕಮೀಟಿ ಅಧ್ಯಕ್ಷ ರಾಘವೇಂದ್ರ ಲೋಲೆನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUBSCRIBE OUYR CHANNEL STAR 74 NEWS LIKE SHARE (m)9945564891