ಕುವೆಂಪು ಕನ್ನಡ ಜನತೆಯ ಮೇಲೆ ಬೀರಿರುವ ಪ್ರಭಾವ ಬಹಳ ದೊಡ್ಡದು-ಸಾಹಿತಿ ಶ್ರೀಧರ ಹೆಗಡೆ ಭದ್ರನ್
ಕುವೆಂಪು ಕನ್ನಡ ಜನತೆಯ ಮೇಲೆ ಬೀರಿರುವ ಪ್ರಭಾವ ಬಹಳ ದೊಡ್ಡದು. ಅಕ್ಷರ ಗೊತ್ತಿರುವವರ ಮೇಲೆ ಒಂದು ರೀತಿಯ ಪ್ರಭಾವವಾದರೆ, ಗೊತ್ತಿಲ್ಲದವರ ಮೇಲೆ ಇನ್ನೊಂದು ರೀತಿಯಲ್ಲಿ. ಅವರ ಕವಿತೆಗಳನ್ನು ಹಾಡಿದವರು ನೂರಾರು ಜನ. ಅವರ ಕವಿತೆಯೊಂದು ನಾಡಗೀತೆಯಾಗಿ ಕಿವಿಯ ಮೇಲೆ ಬೀಳುತ್ತಲೇ ಇರುತ್ತದೆ. ಅವರ ಬರಹಗಳು ಎಷ್ಟು ಮಧುರ ಕಂಠಗಳನ್ನು ಹಾದು ಬಂದಿವೆ. ಅವರ ಕಾದಂಬರಿಗಳು, ನಾಟಕಗಳು, ಕಥೆಗಳು ರಂಗದ ಮೇಲೆ, ಸಿನಿಮಾ ಪರದೆಯ ಮೇಲೆ ಕಾಣಿಸಿಕೊಂಡು ಜನರನ್ನು ತಲುಪಿವೆ. ವಿದ್ವತ್ ವಲಯದ ಮೇಲೆ ಕುವೆಂಪು ಬರಹಗಳು, ಚಿಂತನೆಗಳು, ವಿಮರ್ಶೆಯ ನೋಟಗಳು ಬೀರಿರುವ ಪ್ರಭಾವವೂ ದೊಡ್ಡದೇ ಎಂದು ಸಾಹಿತಿ ಶ್ರೀಧರ ಹೆಗಡೆ ಭದ್ರನ್ ಹೇಳಿದರು
ಅವರು ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡ ಹಾಗೂ ಶ್ರೀ ಸಿದ್ದರಾಮೇಶ್ವರ ಪ್ರೌಢ ಶಾಲೆಯ ವತಿಯಿಂದ ಮಾನವ ಧರ್ಮ ಪ್ರತಿಷ್ಠಾನದ ದತ್ತಿ ಹಾಗೂ ಎಸ್. ಎಸ್. ವಿದ್ವಾನ್ ಮತ್ತು ಎಸ್ ಗುರುಕುಮಾರ ದತ್ತಿ ಅಂಗವಾಗಿ ದತ್ತಿ ಉಪನ್ಯಾಸ ಹಾಗೂ ವಿಶ್ವ ಮಾನವ ದಿನಾಚರಣೆಯನ್ನು ಸಿದ್ದರಾಮೇಶ್ವರ ಪ್ರೌಢ ಶಾಲೆಯ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ
ಇದೆಲ್ಲದರ ಜೊತೆಗೆ ಕುವೆಂಪು ಕರ್ನಾಟಕದಲ್ಲಿ ವೈಚಾರಿಕ ಎಚ್ಚರವನ್ನು ಮೂಡಿಸಿದವರು ಮಕ್ಕಳ ಬಹರದ ಮೇಲೆ ಬೆಳಕು ಚೆಲ್ಲಿದವರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ ಮಾತನಾಡಿ ಕುವೆಂಪು ತಮ್ಮ ಬರಹದಲ್ಲಿ ಮೌಡ್ಯಗಳನ್ನು ತೊರೆಯಲು ಹೇಳಿದವರು. ಯಾರ ಅಂಕುಶದ ಕೆಳಗೂ ಬದುಕನ್ನು ಕಟ್ಟಿಕೊಳ್ಳಬಾರದು; ಮುಕ್ತ ಮನಸ್ಸಿನಿಂದ ಯೋಚಿಸಬೇಕೆಂದು ತರುಣರಿಗೆ ಕಿವಿ ಮಾತು ಹೇಳಿದವರು. ಅಂತಹ ಆಲೋಚನೆಗಳಿಂದ ಮಕ್ಕಳು ಆದರ್ಶದ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಮಾನವ ಧರ್ಮ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಬಿ.ಜಿ.ಭಟ್ ದತ್ತಿಯ ಕುರಿತು ಮಾತನಾಡಿದರು. ಡಾ. ಗೀರಿಜಾ ಹಿರೇಮಠ ವೇದಿಕೆಯಲ್ಲಿ ಇದ್ದರು.
ತಾಲೂಕಾ ಗೌರವ ಕಾರ್ಯದರ್ಶಿ ಮಹಾಂತೇಶ ನರೇಗಲ್ಲ ನಿರೂಪಿಸಿದರು. ಸಂಘಟಕ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಪ್ರಧಾನಗುರುಗಳಾದ ಶ್ರೀ ನಾಗಯ್ಯ ಹಿರೇಮಠ ಪ್ರಸ್ತಾವಿಕ ಮಾತನಾಡಿದರು.ಶ್ರೀಮತಿ ಕವಿತಾ ಬಳ್ಳಾರಿ ವಂದಿಸಿದರು. ನಂತರ ಡಾ.ಡಿ.ಪಿ.ತಿಪ್ಪೇಸ್ವಾಮಿ ಹಾಗೂ ಕು. ವಿನಯಶ್ರೀ ಕೂಡ್ಲಗಿ ಅವರಿಂದ ಕುವೆಂಪು ಕಾವ್ಯಗಳ ಗಾಯನವನ್ನು ನಡೆಸಿಕೊಟ್ಟರು. ಇದಕ್ಕೆ ರಘು ತಬಲಾ ಸಾಥನೀಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘಟಕನಾ ಕಾರ್ಯದರ್ಶಿ ಎಸ್.ಎಮ್.ದಾನಪ್ಪಗೌಡರ, ಡಾ.ಆರ್.ಎಸ್ ಜಾಧವ, ಶಕುಂತಲಾ ಕುಂದೂರ, ನರಸಪ್ಪ ಭಜಂತ್ರಿ,ಪ್ರೌಢಶಾಲೆಯ ಶಿಕ್ಷಕರ ವೃಂದ ಹಾಗೂ ಸಿಬ್ಬಂದಿ ಮತ್ತು ಮಕ್ಕಳು ಇದ್ದರು
SUBSCRIBE OUR CHANNEL STAR 74 NEWS LIKE SHARE