ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ

ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವ
ಧಾರವಾಡ- ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ 93 ನೇ ಜಾತ್ರಾ ಮಹೋತ್ಸವ, ಗ್ರಂಥ ಲೋಕಾರ್ಪಣೆ ಹಾಗೂ 2023 ರ ಶ್ರೀ ಮೃತ್ಯುಂಜಯ ಮಹಾಂತ ಪ್ರಶಸ್ತಿ ಪ್ರಧಾನ, ಶಿವಾನುಭ ಚಿಂಥನ, ವಚನ ನೃತ್ಯ ಹಾಗೂ ಗಾಯನ ಸಮಾರಂಭ ಜ.22 ರಿಂದ 26 ರವರೆಗೆ ಶ್ರೀ ಮುರಘಾಮಠದಲ್ಲಿ ಜರುಗಲಿವೆ ಎಂದು ಮುರಘಾಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ಮಲ್ಲಿಮಾರ್ಜುನ ಸ್ವಾಮಿಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಬಸವ” ಮಾರ್ಗದಲ್ಲಿಯೇ ನಡೆದು, “ಬಸವ” ಮಾರ್ಗದಲ್ಲಿಯೇ ದುಡಿದು, ಬಸವಾದರ್ಶದ ಪರಿಭಾಷೆಯಲ್ಲಿಯೇ ಸತ್ವಪೂರ್ಣ ಬದುಕು ಸವೆಸಿದ ಪೂಜ್ಯ ಲಿಂ. ಅಥಣಿ ಮುರುಘೇಂದ್ರ ಮಹಾಶಿವಯೋಗೀಶ್ವರರ ಜಾತ್ರೆ ಮುರುಘಾಮಠದ ಅತೀಮುಖ್ಯ ವಾರ್ಷಿಕ ಸಮಾರಂಭ. ಇದನ್ನು ಪ್ರತಿವರ್ಷ ಅತ್ಯಂತ ವೈಭವದಿಂದ ನಡೆಸುತ್ತ ಬಂದಿದೆ. ಜ.22 ರ ಬೆಳಗ್ಗೆ 9 ಕ್ಕೆ ಅಗಡಿ ಶ್ರೀ ಗುರುಸಿದ್ದ ಸ್ವಾಮಿಜಿ ಸಾನಿಧ್ಯದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಲಿದ್ದು ಶ್ರೀ ನಿಜಗುಣ ಶಿವಯೋಗಿ ಸ್ವಾಮಿಜಿ ಸಮ್ಮುಖವಹಿಸುವರು. ಸಂಜೆ 07 ಕ್ಕೆ ಜಾತ್ರಾ ಮಹೋತ್ಸವ ಉದ್ಘಾಟನೆ, ಚನ್ನಬಸವ ಪುರಾಣ ಲೋಕಾರ್ಪಣೆಯು ಮೂರಸಾವಿಮಠದ ಶ್ರೀ ಗುರುಸಿದ್ದ ರಾಜಯೋಗೇಂದ್ರ ಸ್ವಾಮಿಜಿ, ಮುಂಡರಗಿ ಡಾ. ಅನ್ನದಾನೇಶ್ವರ ಸ್ವಾಮಿಜಿ ಸಾನಿಧ್ಯದಲ್ಲಿ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಜಾತ್ರಾ ಮಹೋತ್ಸವ ಸಮಾರಂಭ ಉದ್ಘಾಟಿಸುವರು. ಅವರಾದಿ ಶ್ರೀ ಶಿವಮೂರ್ತಿ ಸ್ವಾಮಿಜಿ ಸಮ್ಮುಖದಲ್ಲಿ ಶ್ರೀ ಶಿವಬಸವ ಸ್ವಾಮಿಜಿ ಪಟ್ಟಾಧಿಕಾರದ ಗುರುವಂದನಾ ಕಾರ್ಯಕ್ರಮ ಜರುಗಲಿದೆ. ಮಾಜಿ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆವಹಿಸಲಿದ್ದು ಸಭಾಪತಿ ಬಸವರಾಜ ಹೊರಟ್ಟಿ, ಉದ್ಯಮಿ ವಿಜಯ ಸಂಕೇಶ್ವರ, ಶಾಸಕ ಅರುಣಕುಮರ ಗುತ್ತೂರ ಅತಿಥಿಯಾಗಿ ಭಾಗವಹಿಸುವರು. ಜಯದೇವ ಅಗಡಿ, ಡಾ.ಎಸ್.ಸಿ.ಚವಡಿ ಇವರನ್ನು ಸನ್ಮಾನಿಸಲಾಗುವುದು ಎಂದರು.
               23 ರ ಸಂಜೆ 6 ಕ್ಕೆ ಶಿವಾನುಭವ ಚಿಂಥನ-೧ ಸಾನಿಧ್ಯವನ್ನು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಜಿ, ಪ್ರಭುಚನ್ನಬಸವ ಸ್ವಾಮಿಜಿ ಸಮ್ಮುಖವಹಿಸುವರು. ಶ್ರೀ ಮಹಾಂತ ಸ್ವಾಮಿಜಿಯವರಿಗೆ ಗುರುವಂದನೆ ನೆರವೇರಲಿದೆ. ಶರಣರ ದೃಷ್ಠಿಯಲ್ಲಿ ಪೂಜೆ ಕುರಿತು ಡಾ. ಗುರುದೇವಿ ಹುಲೆಪ್ಪನವರಮಠ ಉಪನ್ಯಾಸ ನೀಡುವರು, ಶಾಸಕ ಪ್ರಸಾದ ಅಬ್ಬಯ್ಯ, ಶಾಸಕಿ ಕುಸುಮಾ ಶಿವಳ್ಳಿ ಅತಿಥಿಯಾಗಿ ಪಾಲ್ಗೊಳ್ಳಲಿದ್ದು ಡಾ. ಶ್ರೀಶೈಲ ಹುದ್ದಾರ, ಎಸ್.ಎಸ್.ಕೆಳದಿಮಠ ಅವರನ್ನು ಸನ್ಮಾನಿಸಲಾಗುವದು ಎಂದರು.
           ಜ. 24 ಸಂಜೆ 07 ಕ್ಕೆ ಅಖಿಲ ಭಾರತ ಶಿವಾನುಭವ ಸಂಸ್ಥೆಯ 81 ನೇ ಸಮ್ಮೇಳನದಲ್ಲಿ ನಿಡಸೂಸಿ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಸ್ವಾಮಿಜಿ ಸಾನಿಧ್ಯದಲ್ಲಿ ಶ್ರೀ ನೀಲಕಂಠ ಸ್ವಾಮಿಜಿ ಗುರುವಂದನೆ ನಡೆಯಲಿದೆ. ಶ್ರೀ ಚನ್ನಬಸವ ಸ್ವಾಮಿಜಿ ಸಮ್ಮುಖದಲ್ಲಿ ಡಾ.ಜೆ.ಎನ್.ರಾಮಕೃಷ್ಣ, ಕುಲಪತಿ ಪಿ.ಎಲ್.ಪಾಟೀಲ, ಡಾ.ಅಜೀತಪ್ರಸಾದ ಅವರನ್ನು ಸನ್ಮಾನಿಸಲಾಗುವುದು. ಪ್ರಸಾದ ನಿಲಯ ಮತ್ತು ಆಧುನಿಕ ಸಂದರ್ಭ ಕುರಿತು ಡಾ.ವಿ.ಎಸ್.ಮಾಳಿ ಉಪನ್ಯಾಸ ನೀಡುವರು. ಮಹಾಪೌರ ಈರೇಶ ಅಂಚಟಗೇರಿ, ಕೆ.ಸಿ.ಸಿ.ಬ್ಯಾಂಕ್ ಅಧ್ಯಕ್ ಮಲ್ಲಿಕಾರ್ಜುನ ಹೊರಕೇರಿ, ಮೋಹನ ಲಿಂಬಿಕಾಯಿ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
            ಜ.25 ರ ಸಂಜೆ 07 ಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಶ್ರೀ ಮೃತ್ಯುಂಜಯ-ಮಹಾAತ ಪ್ರಶಸ್ತಿ ಪ್ರಧಾನ ಮಾಡಲಿದೆ. ಡಾ.ಶ್ರೀ ತೋಂಟದ ಸಿದ್ದರಾಮ ಸ್ವಾಮಿಜಿ ಸಾನಿಧ್ಯವಹಿಸಲಿದ್ದು ಶ್ರೀ ಗುರುಮಹಾಂತ ಸ್ವಾಮಿಜಿ ಸಮ್ಮುಖವಹಿಸುವರು. ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಅಧ್ಯಕ್ಷತೆವಹಿಸಲಿದ್ದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಅತಿಥಿಯಾಗಿ ಪಾಲ್ಗೊಳ್ಳುವರು ಎಂದರು. 
            26 ರಂದು ಬೆಳಿಗ್ಗೆ 04 ಗಂಟೆಗೆ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಜಿ ನೇತೃತ್ವದಲ್ಲಿ ಚನ್ನಬಸವ ಸ್ವಾಮಿಜಿ ಸಾನಿಧ್ಯವಹಿಸುವರು ವಿವಿಧ ಮಠಾಧೀಶರು ಉಪಸ್ಥಿತರಿರುವರು. ಸಂಜೆ 4 ಕ್ಕೆ ಶ್ರೀ ಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ ರಥೋತ್ಸವವು ನಡೆಯಲಿದ್ದು ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮಿಜಿ, ಶ್ರೀ ಅಲ್ಲಮಪ್ರಭು ಸ್ವಾಮಿಜಿ, ಶ್ರೀ ಕುಮಾರ ವಿರುಪಾಕ್ಷ ಸ್ವಾಮಿಜಿ, ಶ್ರೀ ಗುದ್ಲೇಶ್ವರ ಸ್ವಾಮಿಜಿ, ಶ್ರೀ ಸಿದ್ದರಾಮ ಸ್ವಾಮಿಜಿ ಸೇರಿದಂತೆ ವಿವಿಧ ಮಠಾಧೀಶರು ಸಮ್ಮುಖವಹಿಸುವರು. ಈ ಸಮಾರಂಭದಲ್ಲಿ ಶ್ರದ್ಧಾಭಕ್ತಿಯಿಂದ ಸಕಲ ಸದ್ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಪಟ್ಟಣಶೆಟ್ಟಿ.ಡಿ ಬಿ ಲಕಮನಹಳ್ಳಿ. ಶಿವಶಂಕರ ಹಂಪಣ್ಣವರ. ಸಿದ್ದರಾಮಣ್ಣ ಲಕ್ಷ್ಮೇಶ್ವರ. ಸಿ.ಎಸ್ ಪಾಟೀಲ. ವಿರುಪಾಕ್ಷಪ್ಪ ಕಟಗಿ ಇದ್ದರು


SUBSCRIBE OUR STAR 74 NEWS CHANNEL
ನವೀನ ಹಳೆಯದು

نموذج الاتصال