ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125ನೇ ಜನ್ಮ ವಾರ್ಷಿಕದ ಸಮಾರೋಪ ಸಮಾರಂಭ 23 ರಂದು .

ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125ನೇ ಜನ್ಮ ವಾರ್ಷಿಕದ ಸಮಾರೋಪ ಸಮಾರಂಭ 23 ರಂದು .
ಧಾರವಾಡ 20 : 
 ನೇತಾಜಿ ಸುಭಾಷ್ ಚಂದ್ರ ಬೋಸ್‌ರ 125ನೇ ಜನ್ಮ ವಾರ್ಷಿಕದ ಸಮಾರೋಪ ಕಾರ್ಯಕ್ರಮವನ್ನು ಕಲಾಭವನ  ಆವರಣದ ಕಡಪಾ  ಮೈದಾನದಲ್ಲಿ   23  ರಂದು, ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ಆಯೋಜಿಸಿಲಾಗಿದೆ.

ಸ್ವಾತಂತ್ರ್ಯ ಸಂಗ್ರಾಮದ ಸಮರಶೀಲ ನೇತಾರ, ತಮ್ಮ ಧೀರೋದಾತ್ತ ಹೋರಾಟದಿಂದ ಬ್ರಿಟಿಷರ ಎದೆ ನಡುಗಿಸಿ, ಭಾರತೀಯರ ಹೃದಯದಲ್ಲಿ ಹೋರಾಟದ ಕಿಡಿಯನ್ನು ಹೊತ್ತಿಸಿ, ಸ್ವಾತಂತ್ರ್ಯ ಹೋರಾಟದ ಜ್ವಾಲೆಯಾಗಿ ಬೆಳಗಿದ ಮಹಾನ್ ನಾಯಕ 'ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ 125ನೇ ಜನ್ಮವಾರ್ಷಿಕವನ್ನು ಶ್ರದ್ಧೆಯಿಂದ ಆಚರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ನೇತಾಜಿಯವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರ್ನಾಟಕಕ್ಕೆ, ಅದರಲ್ಲೂ ಮುಖ್ಯವಾಗಿ ಧಾರವಾಡಕ್ಕೆ ಭೇಟಿ ನೀಡಿದ್ದರು. ಇಲ್ಲಿಯ ಸುಭಾಷ್ ರಸ್ತೆಯಲ್ಲಿ ಮೆರವಣಿಗೆ ಮಾಡಿ ಸುಪ್ರಸಿದ್ದ ಕಡಪಾ ಮೈದಾನದಲ್ಲಿ ಅಪಾರ ಜನಸ್ತೋಮವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಹಾಗಾಗಿ ಧಾರವಾಡದ ಜನತೆಗೆ ನೇತಾಜಿಯವರೊಂದಿಗೆ ಭಾವನಾತ್ಮಕ ನಂಟಿದೆ.
ನೇತಾಜಿಯವರಂತಹ ಮಹಾನ್ ವ್ಯಕ್ತಿಯ ಜನ್ಮದಿನವನ್ನು ಆಚರಿಸುವುದು ಕೇವಲ ಒಂದು ಸಂಪ್ರದಾಯವಲ್ಲ. ಅದು ನಮ್ಮ ಸ್ಫೂರ್ತಿಯನ್ನು ಜಾಗೃತಗೊಳಿಸುವ ದಿನ, ಅವರ ತತ್ವ, ಆದರ್ಶ-ಸಿದ್ಧಾಂತಗಳನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ಸಂಕಲ್ಪ ಕೈಗೊಳ್ಳುವ ದಿನ. ಅವರ ನಿರ್ವೈಯಕ್ತಿಕ ಜೀವನ, ಮಾನವಪ್ರೇಮ, ಸರ್ವರ ಏಳಿಗೆಗಾಗಿಯ ತುಡಿತ ಮೊದಲಾದ ಉನ್ನತ ಚಿಂತನೆಗಳ ಮಾರ್ಗದಲ್ಲಿ ಮುನ್ನಡೆಯಲು ದೀಕ್ಷೆಯನ್ನು ತೊಡುವ ದಿನ. ನಮ್ಮ ಮುಂದೆ ನಡೆಯುತ್ತಿರುವ ಅನ್ಯಾಯ ಅಸತ್ಯದ ವಿರುದ್ಧ ಧ್ವನಿ ಎತ್ತಲು ನಿರ್ಧಾರ ಮಾಡಬೇಕಾದ ದಿನ.

ಸಮಿತಿಯ ಮೂಲಕ ವಿದ್ಯಾರ್ಥಿ-ಯುವಜನರಲ್ಲಿ ನೇತಾಜಿಯವರಂತಹ ಮಹಾನ್ ನೇತಾರರ ವಿಚಾರ ಮತ್ತು ಹೋರಾಟಗಳನ್ನು ಎತ್ತಿಹಿಡಿಯುವ ಹಾಗೂ ಸಮಾಜದ ಎಲ್ಲಸ್ತರದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಚಳುವಳಿಯನ್ನು ರೂಪಿಸುತ್ತಿರುವ ನಮ್ಮ ಸಂಘಟನೆಗಳು ನೇತಾಜಿಯವರ 125ನೇ ಜನ್ಮ ವಾರ್ಷಿಕೋತ್ಸವ ಸಂದರ್ಭದಲ್ಲಿ ಆಚರಣಾ ನೇತಾಜಿಯವರ ವಿಚಾರಗಳನ್ನು, ಆದರ್ಶಗಳನ್ನು ಜಿಲ್ಲೆಯ ಮೂಲೆ-ಮೂಲೆಗೆ ಕೊಂಡೊಯ್ಯಲು ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವರ್ಷಪೂರ್ತಿ ಶಾಲಾ-ಕಾಲೇಜು, ಹಾಸ್ಟೆಲ್, ಬಡಾವಣೆಗಳಲ್ಲಿ, ಕೊಳಗೇರಿಗಳಲ್ಲಿ, ಹಳ್ಳಿಗಳಲ್ಲಿ ಕಾರ್ಯಕ್ರಮಗಳು, ವಿವಿಧ ಸ್ಪರ್ಧೆಗಳು, ಸಿನಿಮಾ ಪ್ರದರ್ಶನ, ಸೆಮಿನಾರ್‌ಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಮಾರೋಪ ಕಾರ್ಯಕ್ರಮದ ಅಂಗವಾಗಿ ಜನೇವರಿ 23 ರಂದು ಕಲಾಭವನ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು, ಆ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಸಮಾರೋಪ ಕಾರ್ಯಕ್ರಮದ ಸಾರ್ವಜನಿಕ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದು. ನೇತಾಜಿ ಸುಭಾಷ್ ಚಂದ್ರ ಬೋಸ್ 125ನೇ ಜನ್ಮ ವಾರ್ಷಿಕ ಆಚರಣಾ ಸಮಿತಿಯ ಸಲಹೆಗಾರರಾಗಿರುವ  ರಾಮಾಂಜನಪ್ಪ ಅಲ್ಲಳ್ಳಿಯವರು ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಲಿದ್ದಾರೆ, ಕಾರ್ಯಕ್ರಮಕ್ಕೆ ಹಳ್ಳಿ-ಬಡಾವಣೆ-ಕಾಲೇಜುಗಳಿಂದ ವಿದ್ಯಾರ್ಥಿ-ಯುವಜನರು-ಮಹಿಳೆಯರು-ದುಡಿಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ನೇತಾಜಿ ಸುಭಾಷ್‌ಚಂದ್ರ ಬೋಸ್ 125ನೇ ಜನ್ಮ ವಾರ್ಷಿಕ ಧಾರವಾಡ ಆಚರಣಾ ಸಮಿತಿ ತಮ್ಮಲ್ಲಿ ಮನವಿ ಮಾಡುತ್ತದೆ.
ಮಧುಲತಾ ಗೌಡರ್ ಪತ್ರೀಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

SUBSCRIBE OUR STAR 74 NEWS CHANNEL
ನವೀನ ಹಳೆಯದು

نموذج الاتصال