ಹತ್ತಿಗೆ ಪ್ರತಿ ಕ್ವಿಂಟ್‌ಲ್ಗ್ 15೦೦೦ ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ.

ಹತ್ತಿಗೆ ಪ್ರತಿ ಕ್ವಿಂಟ್‌ಲ್ಗ್ 15೦೦೦ ಬೆಂಬಲ ಬೆಲೆ  ನಿಗದಿ ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ.       
   ಧಾರವಾಡ :     ಇಳಿಯುತ್ತಿರುವ ಹತ್ತಿ ಬೆಲೆಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕೆಂದು ಮತ್ತು ಹತ್ತಿಗೆ ಪ್ರತಿ ಕ್ವಿಂಟ್‌ಲ್ಗ್ 15೦೦೦ ಬೆಂಬಲ ಬೆಲೆ  ನಿಗದಿ ಮಾಡಬೇಕೆಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಛೇರಿಯವರೆಗೆ ಮೆರವಣೆಗೆ ನೆಡೆಸಿ, ಜಿಲ್ಲಾಧಿಕಾರಿ ಕಛೇರಿ ಎದರು ಪ್ರತಿಭಟನಾ ಸಭೆ ನಡೆಯಿತು.
   
ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ  ಜಡಗನ್ನರ ಮಾತನಾಡಿ  ಧಿಡೀರನೇ ಹತ್ತಿ ಬೆಲೆ ಇಳಿಕೆಯಾಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳಾದ ತಾವು ಕೂಡಲೇ ಮಧ್ಯೆ ಪ್ರವೇಶ ಮಾಡಿ ಬೆಲೆ ನಿಯಂತ್ರಿಸಲು ತುರ್ತು ಕ್ರಮಕೈಗೊಳ್ಳಬೇಕೆಂದು ನಮ್ಮ ಅಖಿಲ ಭಾರತ ರೈತ ಕೃಷಿಕಾರ್ಮಿಕರ ಸಂಘಟನೆ(ಎಐಕೆಕೆ ಎಂಎಸ್) ತಮ್ಮನ್ನು ಆಗ್ರಹಪೂರ್ವವಾಗಿ ಒತ್ತಾಯಿಸುತ್ತದೆ.
      ಸರ್ಕಾರವೇ ಬೆಳೆಗಳನ್ನು ಖರೀದಿಸಿ ರೈತರಿಗೆ ಪ್ರತಿ ಎಕರೆಗೆ ತಗಲುವ ವೆಚ್ಚವನ್ನು ಒಳಗೊಂಡು ಒಂದುವರೆ ಪಟ್ಟು ಬೆಂಬಲ ಬೆಲೆಯನ್ನು ಸೇರಿಸಿ ಬೆಲೆ ನಿಗದಿ ಮಾಡಲು ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸಬೇಕೆಂದು ಅಖಿಲ ಭಾರತ ರೈತ  ಕೃಷಿಕಾರ್ಮಿಕರ ಸಂಘಟನೆ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದೆ. ಆದರೆ ಸರ್ಕಾರಗಳು ಕಾನೂನು ಮಾಡಲು ಹಿಂದೇಟು ಹಾಕುತ್ತಿವೆ. ಕಳೆದ ವರ್ಷ 13 ರಿಂದ 14 ಸಾವಿರದ ವರಗೆ ಮಾರಾಟವಾಗಿದೆ, ರೈತರು ಪ್ರಸ್ತುತ ಕೆಲವೇ ದಿನಗಳ ಹಿಂದೆ ಅಂದರೆ ನವೆಂಬರ್ ತಿಂಗಳ ಕೊನೆ ಮತ್ತು ಡಿಸೆಂಬರ್ ಆರಂಭದಲ್ಲಿ ಹತ್ತಿಯ ಬೆಲೆ ಪ್ರತಿ ಕ್ವಿಂಟಲ್ಗೆ  10 ಸಾವಿರದಿಂದ 12 ಸಾವಿರ ಮಾರಾಟವಾಗುತ್ತಿತ್ತು. ಆದರೆ ಇತ್ತೀಚಿನ ಕೆಲವೇ ದಿನಗಳಲ್ಲಿ 8 ಸಾವಿರಕ್ಕೆ ಅಸುಪಾಸು ಇಳಿಸಲಾಗಿದೆ. ಇದಕ್ಕೆ ಕಾರಣ  ಖರೀದಿದಾರರ ಮೇಲೆ ಯಾವುದೇ ನೀಯಂತ್ರಣ ಇಲ್ಲವಾಗಿದೆ. ತಮ್ಮ ಗರಿಷ್ಟ ಲಾಭದಿಂದಾಗಿ ಮನಸ್ಸಿಗೆ ಬಂದಂತೆ  ಬೆಲೆ ಏರಿಳಿಕೆ ಮಾಡುತ್ತಿದ್ದಾರೆ. ಇದರಿಂದಾಗಿ ನಮ್ಮ ರೈತರಿಗೆ ಸಿಡಿಲು ಬಡಿದಂತಾಗಿ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದೊದಗಿದೆ. ಎಲ್ಲಾ ಹಳ್ಳಿಗಳಲ್ಲಿ ಹತ್ತಿಯನ್ನು ಬಿಡಿಸಿಕೊಂಡು ಒಂದು-ಎರಡು ತಿಂಗಳಿನಿoದ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಇನ್ನೇನು ಇನ್ನೇನು ಬೆಲೆ ಹೆಚ್ಚಳ ಆಗುತ್ತದೆ ಎಂದು ದಾರಿ ಕಾಯುತ್ತ ಕುಳುತ್ತಿದ್ದಾರೆ. 
     
   ಜಿಲ್ಲಾ ಅಧ್ಯಕ್ಷರಾದ ದೀಪಾ ಧಾರವಾಡ ಮಾತನಾಡಿ ರೈತರು ನೋವಿನಿಂದ ಹೇಳುತ್ತಿರುವುದೇನೆಂದರೆ, ಕೃಷಿ ಒಳಸುರಿಗಳ ಬೆಲೆ ಏರಿಕೆಯಿಂದಾಗಿ ಪ್ರತಿ ಎಕರೆಗೆ 3೦ ರಿಂದ 4೦ ಸಾವಿರ ರೂಪಾಯಿ ಖರ್ಚುಮಾಡಿದ್ದೇವೆ. ಈ ಬಾರಿ ಹಸಿ ಬರದಿಂದ ಇಳುವರಿ ಬಹಳ ಕಡಿಮೆ ಬಂದಿದೆ. ಅಂದರೆ ಮೊದಲು ಎಕೆರೆಗೆ 10  ರಿಂದ 14  ಕ್ವಿಂಟಲ್ ಬರುತ್ತಿತ್ತು. ಆದರೆ ಈಗ   ೩ರಿಂದ ೬ಕ್ವಿಂಟಲ್‌ಗೆ ಇಳಿಕೆಯಾಗಿದೆ. ನಮಗೆ ಈಗಿರುವ ಕಡಿಮೆ ಬೆಲೆ ಅಂದರೆ 6000 ರೂಪಾಯಿಗೆ ಒಂದು ಕ್ವಿಂಟಲ್ ಹತ್ತಿ ಮಾರಿದರೆ ಬರುವ ಆದಾಯ ಒಂದು ಎಕರೆಗೆ 36 000 ರೂ  ಆಗುತ್ತದೆ. ಒಂದು ಎಕರೆಗೆ 40 ಸಾವಿರ ರೂಪಾಯಿ ಖರ್ಚು ಕಳೆದರೆ ಆತನಿಗೆ ಏನು ಉಳಿಯುವುದಿಲ್ಲ. ಐದಾರು ತಿಂಗಳು ಹೊಲವೇ ಮನೆಯೆಂಬಂತೆ ದುಡಿದು ಒಂದು ಪುಡಿ ಗಾಸು ಸಿಗದಂತಹ ಪರಿಸ್ಥಿತಿ ಬಂದೊದಗಿದೆ.  ಇನ್ನೊಂದು ಕಡೆ ಹೊಲಗಳನ್ನು ಪಾಲಿಗೆ ಮಾಡಿದ ಬೆಳೆಗಾರರ ಪರಿಸ್ಥಿತಿಯಂತೂ ಅಯೋಮಯವಾಗಿದೆ. ಇವು ಬರೀ ಲೆಕ್ಕಾಚಾರಗಳಲ್ಲ ರೈತರ ನೋವಿನ ಕತೆಗಳು. 
     ಪರಿಸ್ಥಿತಿ ಈಗಿರುವಾಗ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾದ ಅಧಿಕಾರಿಗಳ. ಎಪಿಎಂಸಿ ಆಡಳಿತ ಮಂಡಳಿಯವರು ಯಾವುದೇ ಕ್ರಮ ಜರುಗಿಸಿಲ್ಲ. ಇಷ್ಟು ದಿನಗಳಾದರೂ ಖರೀದಿ ಕೇಂದ್ರವನ್ನು ತೆರೆದಿಲ್ಲ.    ಅದಕ್ಕಾಗಿ ನಮ್ಮ ರೈತ ಸಂಘಟನೆಯು ಕೂಡಲೇ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರವನ್ನು ತೆರೆದು, ಪ್ರತಿ ಕ್ವಿಂಟಲ್ ಗೆ  15ಸಾವಿರ ರೂಪಾಯಿ ನಿಗದಿಪಡಿಸಬೇಕೆಂದು ಒತ್ತಾಯಿಸುತ್ತೇವೆ. ಹಾಗೆಯೇ ಕೂಡಲೇ ಜಿಲ್ಲಾಧಿಕಾರಿಗಳಾದ ತಾವು, ತಮ್ಮ ಉಪಸ್ಥಿತಿಯಲ್ಲಿ ಎಪಿಎಂಸಿ ಅಧಿಕಾರಿಗಳು, ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾದ ಅಧಿಕಾರಿಗಳು, ವ್ಯಾಪಾರಸ್ಥರು ಸಭೆ ಕರೆದು ಬೆಲೆ ನಿಯಂತ್ರಿಸಲು ತುರ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದರು.
ಮನವಿ ಸ್ವೀಕರಿ ಮಾತನಾಡಿದ ಜಿಲ್ಲಾಧಿಕಾರಿಗಳಾದ  ಗುರುದತ್ತ ಹೆಗಡೆ ಮಾತನಾಡಿ ಎಪಿಎಂಸಿ ಅಧಿಕಾರಿಗಳು, ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾದ ಅಧಿಕಾರಿಗಳು, ವ್ಯಾಪಾರಸ್ಥರು ಸಭೆಯನ್ನು ಕರೆಯುವದಾಗಿ, ಎರಡು ಮೂರು ದಿನಗಳ ನಂತರ,  ಸಭೆಯ ದಿನಾಂಕನ್ನು ನಿಗದಿ ಮಾಡುವುದಾಗಿ ಭರವಸೆ ನೀಡಿದ್ದರು.       
   ಈ ಸಂದರ್ಭದಲ್ಲಿ ಶರಣು ಗೋನವಾರ ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದರು, ಜಿಲ್ಲಾ ಉಪಾಧ್ಯಕ್ಷರಾದ ಹನುಮೇಶ ಹುಡೇದ , ಜಿಲ್ಲಾ ಸಮಿತಿ ಸದಸ್ಯರಾದ ಅಣ್ಣಪ್ಪ ಕುಲಕರ್ಣಿ ,ರಾಮಣ್ಣ ಗಾಣಗೇರ, ಮಹಾದೇವಪ್ಪ ದೊಡ್ಡಮನೆ, ಸಿದ್ದಪ್ಪ ಬೆಲವಟೆಗೆ, ಜಗದೀಶ ಗಾಣಗೇರ , ಕೆ ಎಚ್ ಕಿತ್ತೂರ, ಎಸ್ ಕೆ ಹುಲಿ, ಮಲ್ಲಪ್ಪ ಮೊರಬದ, ರಾಚಪ್ಪ, ರುದ್ರಪ್ಪ ಬುಡರಕಟ್ಟೆ,ಶಿವಾನಂದ, ಈಶ್ವರ  ಮುತಾದವರು ಇದ್ದರು. 
ಸಮಸ್ಯೆ ಪರಿಹಾವಾಗದ್ದಿದಲ್ಲಿ ಮುಂದಿನ ದಿನಗಳಲ್ಲಿ ಉನ್ನತ ಹಂತದ ಹೋರಾಟಕ್ಕೆ ಮುಂದಾಗಬೇಕೆಂದು ಎಐಕೆಕೆಎಂಎಸ್ ಜಿಲ್ಲಾ ಸಮಿತಿ ಕರೆ ನೀಡಿತು. 
ಧನ್ಯವಾದಗಳೊಂದಿಗೆ 
ಸುದ್ದಿ ಇವರಿಂದ
ಹನುಮೇಶ ಹುಡೇದ

SUBSCRIBE OUR STAR 74 NEWS CHANNEL
ನವೀನ ಹಳೆಯದು

نموذج الاتصال