*ಹೆಬ್ಬಳ್ಳಿಯ ಗ್ರಂಥಾಲಯ ಪ್ರೇರಕ ಫಕೀರಪ್ಪ ಬಸಪ್ಪ ಸುಂಕದ ಅವರಿಗೆ ಒಲಿದು ಬಂದ ಶ್ರಮಿಕರತ್ನ ರಾಜ್ಯ ಪ್ರಶಸ್ತಿ.*

*ಹೆಬ್ಬಳ್ಳಿಯ ಗ್ರಂಥಾಲಯ ಪ್ರೇರಕ ಫಕೀರಪ್ಪ ಬಸಪ್ಪ ಸುಂಕದ ಅವರಿಗೆ ಒಲಿದು ಬಂದ ಶ್ರಮಿಕರತ್ನ ರಾಜ್ಯ ಪ್ರಶಸ್ತಿ.*
 ಬಸಪ್ಪ ಸುಂಕದ ಗ್ರಂಥಾಲಯ ಪ್ರೇರಕ ಹೆಬ್ಬಳ್ಳಿ ಇವರಿಗೆ ಶ್ರಮಿಕರತ್ನ ರಾಜ್ಯ ಪ್ರಶಸ್ತಿ ಲಭಿಸಿದ್ದು, ಧಾರವಾಡ ಜಿಲ್ಲೆಯಲ್ಲಿಯೇ ಅತ್ಯಂತ ಸುಸಜ್ಜಿತವಾದ ಕಟ್ಟಡದಲ್ಲಿ, ತುಂಬಾ ಅಚ್ಚುಕಟ್ಟಾಗಿ ಗ್ರಂಥಾಲಯವನ್ನು ಅತ್ಯುತ್ತಮ ರೀತಿಯಲ್ಲಿ ಪುಸ್ತಕಗಳ ಜೋಡಣೆ, ಮತ್ತು ಶಾಲಾ ಮಕ್ಕಳಿಗೆ ಓದುವ ಬೆಳಕು ಕಾರ್ಯಕ್ರಮದಲ, ಮಕ್ಕಳಿಗೆ ವಿವಿಧ ಸ್ಪರ್ದೆಗಳಾದ ಗ್ರಾಮ ಚದುರಂಗ, ಪ್ರಬಂಧ ಸ್ಪರ್ದೆ,ರಸಪ್ರಶ್ನೆ, ಪತ್ರಬರೆಯುವುದು, ಏಡ್ಸ್ ಕುರಿತು ಜಾಗ್ರತೆ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡಿ ಜಿಲ್ಲಾ ಪಂಚಾಯತ ಕಾರ್ಯನಿರತ ಅಧಿಕಾರಿ ಡಾ, ಸುರೇಶ ಇಟ್ನಾಳ ಅವರಿಂದ ಮೆಚ್ಚುಗೆಯನ್ನು ಪಡೆದಿರುವ ಇವರಿಗೆ ಡಿಸೆಂಬರ್ 8 ರಂದು ಮದ್ಯಾಹ್ನ 3  ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ, ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ, ಇವರಿಗೆ ಸಮಾಜವಾದಿ ಚಿಂತಕರು ಶಾಂತವೇರಿ ಗೋಪಾಲಗೌಡರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ, ಚೇತನ ಫೌಂಡೇಶನ್ ಕರ್ನಾಟಕ ಇವರು ಪಕ್ಕಿರಪ್ಪ ಸುಂಕದ ಅವರಿಗೆ ಶ್ರಮಿಕರತ್ನ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಶಿಕ್ಷಕ ಎಲ್ ಐ ಲಕ್ಕಮ್ಮನವರ ತಿಳಿಸಿದರು, ಮಾಜಿ ತಾಲ್ಲೂಕು ಪಂಚಾಯತ ಅದ್ಯಕ್ಷರಾದ ಸುಮಂಗಲಾ ಕೌದೆಣ್ಣವರ ಫಕೀರಪ್ಪ ಸುಂಕದ ಇವರು ವಿಕಲಚೇತನ ಮಕ್ಕಳ ಬಗ್ಗೆ ಅವರ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ, ಶಾಲಾ ಮಕ್ಕಳ ಕಲಿಕೆ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಉತ್ತೇಜಿಸುವ ಸಲುವಾಗಿ, ಮಕ್ಕಳ ಕಲಿಕಾ‌ ಗುಣಮಟ್ಟ ಹೆಚ್ಚಿಸುವ ಸಲುವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಅತ್ಯುತ್ತಮ ಪುಸ್ತಕಗಳ ಸಂಗ್ರಹ ಮಾಡಿದ್ದಾರೆ, ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿ ಮಕ್ಕಳಿಗೆ ಶೈಕ್ಷಣಿಕ ಏಳಿಗೆಗಾಗಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ.

STAR 74 NEWS ಚಾನಲ್ ಸಬ್ಸಕ್ರೈಬ್ ಮಾಡಿ
ನವೀನ ಹಳೆಯದು

نموذج الاتصال