ವೀರ ರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕ ಪ್ರದರ್ಶನ

ವೀರ ರಾಣಿ ಕಿತ್ತೂರು
  ಚೆನ್ನಮ್ಮ ಮೆಗಾ ನಾಟಕ ಪ್ರದರ್ಶನ
  
    ಧಾರವಾಡ 15 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಂಗಾಯಣವು
ಭಾರತ ಸ್ವಾತಂತ್ರ್ಯದ 75ನೇ ವರ್ಷದ(ಅಮೃತ ಮಹೋತ್ಸವ) ಸಂಭ್ರಮಾಚರಣೆಯ ಅಂಗವಾಗಿ ಸ್ವಾತಂತ್ರ್ಯ ಸಂಗ್ರಾಮದ 'ಬೆಳ್ಳಿಚುಕ್ಕಿ ವೀರ ರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕ ಪ್ರದರ್ಶನದವನ್ನು ಇದೇ ದಿ 24- ರಿಂದ 25 ರ ವರೆಗೆ ಕರ್ನಾಟಕ ಕಲಾ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ಹಮ್ಮಿಕೊಳ್ಳಲಾಗಿದೆ ಎಂದು ರಂಗಾಯಣದ ನಿದೇ೯ಶಕರಾದ ರಮೇಶ ಪರವಿ ನಾಯ್ಕರ್  ತಿಳಿಸಿದರು.
     ಪತ್ರಿಕಾಗೋಷ್ಟಿಯಲ್ಲಿ  ಮಾತನಾಡಿದ ಅವರು,ಕರ್ನಾಟಕ ಕಲಾ ಕಾಲೇಜು ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣಕ್ಕೆ ಸಿದ್ಧತೆಗಳು ಪ್ರಾರಂಬಗೊಂಡಿವೆ. ಈ ನಾಟಕವನ್ನು ವೀಕ್ಷಿಸಲು ಸುಮಾರು ಹದಿನೈದು ಸಾವಿರ ಜನ ಆಗಮಿಸುವ ನೀರಿಕ್ಷೆಯಲ್ಲಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದ ನೈಜ ಸನ್ನಿವೇಶಗಳನ್ನು ತೋರಿಸಲು ಜೀವಂತ ಆನೆ, ಕುದರೆ, ನೂರಾರು ಸೈನಿಕರು ದೃಶ್ಯಗಳನ್ನು ಕಟ್ಟಲಾಗಿದೆ. ನಾಟಕದ ಕುರಿತಂತೆ ಸುಳ್ಳದ ದೇಸಾಯಿ ಅವರ ವೃತ್ತಿ ರಂಗಭೂಮಿಯ ನಾಟಕ ಪ್ರತಿ, ಹೆಳವರ ದಾಖಲೆ, ಸಂಗೋಳ್ಳಿ, ಕಿತ್ತೂರು, ತುರುಮರಿ ಹೀಗೆ ಹಲವು ಪ್ರದೇಶಗಳಲ್ಲಿ ಸಂಶೋಧನೆ, ಜಾನಪದ ಇತಿಹಾಸ, ಲಂಡನ್‌ನಲ್ಲಿರುವ ಗೆಝಟಿಯರ್ ಹೀಗೆ ಹಲವು ದಾಖಲೆಗಳನ್ನು ಪರಿಶೀಲಿಸಿ ನಾಟಕವನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ನಾಟಕ ರಚನೆ/ಸಂಶೋಧನೆ ಮತ್ತು ಪರಿಷ್ಕರಣಾ ಸಮಿತಿಯನ್ನು ಮಾಡಿ ಅತ್ಯಂತ ಮುತುವರ್ಜಿಯಿಂದ ನಾಟಕವನ್ನು ಸಿದ್ಧಪಡಿಸಲಾಗಿದೆಎಂದರು.
      ಪ್ರಧಾನಮಂತ್ರಿ ಮೋದಿ ಅವರು ಕರೆಕೊಟ್ಟಿರುವಂತೆ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ'ವನ್ನು ಆಚರಿಸುವ ಸಂಭ್ರಮದಲ್ಲಿ ಇಡೀ ದೇಶವೇ ಪಾಲ್ಗೊಂಡಿದೆ. ಈ ಐತಿಹಾಸಿಕ ಸಂದರ್ಭವನ್ನು ನಮ್ಮ ರಂಗಾಯಣವು ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ 1824ರಲ್ಲಿ ಸಮರಸಾರಿ ಅವರನ್ನು ಅಕ್ಟೋಬರ್‌ 23ರಂದು ಸದೆಬಡಿದು ಪ್ರಪ್ರಥಮವಾಗಿ ವಿಜಯ ದುಂದುಭಿ ಮೊಳಗಿಸಿದವಳು ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ. ಹಾಗೆಯೇ ಅವಳನ್ನು 'ಭಾರತ ಸ್ವಾತಂತ್ರ್ಯ ಸಂಗ್ರಾಮದ 'ಬೆಳ್ಳಿಚುಕ್ಕಿ' ಎಂದೇ ಇತಿಹಾಸದಲ್ಲಿ ದಾಖಲಿಸಲಾಗಿದೆ. ಅವಳೊಂದಿಗೆ ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚನ್ನಬಸಪ್ಪ, ಅಮಟೂರ ಬಾಳಪ್ಪ, ಅವರಾದಿ ವೀರಪ್ಪ, ಸರ್ದಾರ ಗುರುಸಿದ್ದಪ್ಪ, ವಡ್ಡರ ಯಲ್ಲಣ್ಣ ಮುಂತಾದವರ ತ್ಯಾಗ, ಬಲಿದಾನ ದೇಶಾಭಿಮಾನ ಜನಮಾನಸಕ್ಕೆ ಅದರಲ್ಲೂ ಮುಖ್ಯವಾಗಿ ಯುವಜನತೆಗೆ ತಲುಪುವುದು ಅವಶ್ಯವಾಗಿದೆ. ಮತ್ತು ಅಷ್ಟೇ ಸಂದರ್ಭೋಚಿತವಾಗಿದೆ ಎಂದರು.
     ಈ ಉದ್ದೇಶದಿಂದ ಪ್ರಸ್ತುತ ರಂಗಾಯಣವು ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ ಮತ್ತು ದೇಶಾಭಿಮಾನದ ಇತಿಹಾಸವನ್ನು ಸಾರುವ ನಿಟ್ಟಿನಲ್ಲಿ, ಮಹಾರಾಷ್ಟ್ರ ಸರ್ಕಾರದ 'ಜಾಣತಾ ರಾಜಾ' ನಾಟಕದ ಮಾದರಿಯಲ್ಲಿ ಧ್ವನಿ-ಬೆಳಕಿನ ತಂತ್ರಜ್ಞಾನವನ್ನು ಬಳಸಿಕೊಂಡು ವಿಶಾಲ ರಂಗಮಂಚದ ಮೇಲೆ ಜೀವಂತ ಆನೆ, ಕುದುರೆ, ಒಂಟೆಗಳನ್ನು ತರುವ ಮೂಲಕ ಒಂದು ಅತ್ಯದ್ಭುತವಾದ ಮೆಗಾ ನಾಟಕವನ್ನು ಪ್ರದರ್ಶಿಸಲು ಸಿದ್ಧತೆ ಮಾಡಿಕೊಂಡಿದೆ. ಈ ರಂಗರೂಪದಲ್ಲಿ 150 ಜನ ಕಲಾವಿದರು, 50 ಜನ ತಂತ್ರಜ್ಞರು, ನಾಲ್ಕು ನಿರ್ದೇಶಕರು, ಹೀಗೆ ಒಟ್ಟು 250ಕ್ಕೂ ಹೆಚ್ಚು ಜನ ತೊಡಗಿಕೊಂಡಿದ್ದಾರೆ. ಅಲ್ಲದೆ ಇಂತಹ ಪ್ರಯೋಗ ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಪ್ರಯತ್ನವಾಗಿದೆ ಎಂದರು.
    ಈ ನಾಟಕವು ಮೂರುವರೆ ಗಂಟೆಯ ಅವಧಿಯಾಗಿದ್ದು , ವೇದಿಕೆ ಮೇಲೆ 10 ಕುದರೆ , ಆನ . ಹಸುಗಳನ್ನು ತಂದು ನೈಜ ದೃಶ್ಯವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ . ಚೆನ್ನಮ್ಮರ ಯುದ್ಧ ರಾಯಣ್ಣನ ಹೋರಾಟ ಜತೆಗೆ ಹಲವು ಸಮುದಾಯಗಳ ವೀರ ಯೋಧರನ್ನು ಈ ನಾಟಕದ ಮೂಲಕ ತೋರಿಸಲಾಗುತ್ತದೆ . ಧಾರವಾಡದಲ್ಲಿ ಎರಡು ಪ್ರದರ್ಶನ , ಕಲಬುರ್ಗಿಯಲ್ಲಿ 5 ಪ್ರದರ್ಶನ , ಬೆಳಗಾವಿಯಲ್ಲಿ 03 ಪ್ರದರ್ಶನಗಳನ್ನು ಆರಂಭಿಕವಾಗಿ ಏರ್ಪಡಿಸಲಾಗುವದು . ಈ ನಾಟಕದ ವೀಕ್ಷಣೆಗೆ ರೂ . 250 / -ಗಳ ಗೌರವ ಪಾಸ್ ಇಡಲಾಗಿದೆ . ಈ ನಾಟಕವನ್ನು ಪ್ರಧಾನ ನಿರ್ದೇಶಕರಾಗಿ ರಮೇಶ ಎಸ್ ಪರವಿನಾಯ್ಕರ , ಸಹ ನಿರ್ದೇಶಕರಾಗಿ ಕಲ್ಲಪ್ಪ ಪೂಜೇರ , ಸೂರಕಲಾ ಎಸ್ ಹಾಗೂ ವಿಶ್ವರಾಜ ಪಾಟೀಲ ಮಾಡುತ್ತಿದ್ದಾರೆ . ಸಂಗೀತದಲ್ಲಿ ಅರುಣ  ಭಟ್ , ರಾಘವ ಕಮ್ಮಾರ ನಿರ್ವಹಿಸಿದ್ದಾರೆ . ರಂಗಸಜ್ಜಿಕೆ ವಿಶ್ವನಾಥ ಮಂಡಿ ಮತ್ತು ರಂಗಪರಿಕರ ಮಹೇಶ ಆಚಾರಿಯವರು ಸಿದ್ಧಗೊಳಿಸಿದ್ದಾರೆ ಎಂದು ತಿಳಿಸಿದರು. 
    ಪತ್ರಿಕಾಗೋಷ್ಟಿಯಲ್ಲಿ ಸುರೇಶ್ ಹಿರೆಮಠ, ಬಾಳಣ್ಣ ಶಿಗಿಹಳ್ಳಿ, ಕೆ ಎಚ್ ನಾಯಕ್, ಶಶಿಕಲಾ ಹುಡೇದ ಉಪಸ್ಥಿತರಿದ್ದರು.
STAR 74 NEWS DO SUBSCRIBE. LIKE & SHARE
ನವೀನ ಹಳೆಯದು

نموذج الاتصال