ಖ್ಯಾತ ಶಿಕ್ಷಣ ತಜ್ಞರಾದ ಶ್ರೀ ಸುರೇಶ ಕುಲಕರ್ಣಿ ರವರ ನಿವಾಸಕ್ಕೆ ಇಂದು ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಭೇಟಿ ನೀಡಿ ಅವರಿಗೆ ಕರ್ನಾಟಕ ರಾಜ್ಯೋತ್ಸವದ ಧೀಮಂತ ಸನ್ಮಾನ ನೀಡಿ ಗೌರವಿಸಿ ಸನ್ಮಾನಿಸಿ, ಅಭಿನಂದಿಸಿದರು.

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ 
ಧೀಮಂತ ಸನ್ಮಾನವನ್ನು ನೀಡಿ ಗೌರವಿಸುವ ಕಾರ್ಯಕ್ರಮದಲ್ಲಿ ಅನಾರೋಗ್ಯ ಕಾರಣದಿಂದ ಅನುಪಸ್ಥಿತರಾಗಿದ್ದ ಖ್ಯಾತ ಶಿಕ್ಷಣ ತಜ್ಞರಾದ ಶ್ರೀ ಸುರೇಶ ಕುಲಕರ್ಣಿ ರವರ ನಿವಾಸಕ್ಕೆ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀ ಈರೇಶ ಅಂಚಟಗೇರಿ ರವರು ಭೇಟಿ ನೀಡಿ ಅವರಿಗೆ ಮಹಾನಗರ ಪಾಲಿಕೆಯ ಕರ್ನಾಟಕ ರಾಜ್ಯೋತ್ಸವದ ಧೀಮಂತ ಸನ್ಮಾನ ನೀಡಿ ಗೌರವಿಸಿ ಸನ್ಮಾನಿಸಿ, 
ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ ಬೆದರೆ ರವರು, ಪಾಲಿಕೆಯ ಸದಸ್ಯರಾದ ಶ್ರೀ ಮಂಜುನಾಥ ಬಟ್ಟೆನ್ನವರ ರವರು, ಪಾಲಿಕೆಯ ಸಹಾಯಕ ಆಯುಕ್ತರಾದ ಶ್ರೀ ಆರ್.ಎಂ. ಕುಲಕರ್ಣಿ ರವರು, ಶ್ರೀ ವಿನಾಯಕ ಜೋಷಿ ರವರು, ಶ್ರೀ ರಾಘು ಶೆಟ್ಟಿ ರವರು, ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال