ಶಾಲಾ ಸಂಘಗಳು ಹಾಗೂ ನೂತನ ಕೊಠಡಿಗಳ ಉದ್ಘಾಟನೆ

*ಶಾಲಾ ಸಂಘಗಳು ಹಾಗೂ ನೂತನ ಕೊಠಡಿಗಳ ಉದ್ಘಾಟನೆ* 
 *ಧಾರವಾಡ :* ಸಮೀಪದ ಅಮ್ಮಿನಬಾವಿ ಗ್ರಾಮದ ಶ್ರೀ ಶಾಂತೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತಿನ ಅಡಿಯಲ್ಲಿ ಶಾಲೆಯ ವಿವಿಧ ಸಂಘಗಳು ಹಾಗೂ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭ ಮಂಗಳವಾರ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ  ಮಾತನಾಡಿ, ಕಷ್ಟ ಪಟ್ಟವನು ಮಾತ್ರ ಇಷ್ಟ ಪಟ್ಟಿದ್ದನ್ನು ಸಾಧಿಸೋಕೆ ಸಾಧ್ಯ. ಅದರಂತೆ ವಿದ್ಯಾರ್ಥಿಗಳ ಸೂಕ್ತ ಶಿಕ್ಷಣಕ್ಕೆ ಶಿಕ್ಷಕರ ಮತ್ತು ಶಾಲಾ ಆಡಳಿತ ಮಂಡಳಿಯ ಪಾತ್ರವೂ ಅತೀ ಮಹತ್ವದ್ದಾಗಿದೆ ಎಂದರು.

 ಶಾಲಾ ಆವರಣದ ಬಯಲು ರಂಗ ಮಂದಿರದಲ್ಲಿ ಬಿಸಿಲಿನಲ್ಲಿ ಕುಳಿತಿದ್ದ ಮಕ್ಕಳ ಬವಣೆಗೆ ಮರುಗಿ ಪೂರ್ಣ ರಂಗ ಮಂದಿರಕ್ಕೆ ಮೇಲ್ಛಾವಣಿ ನಿರ್ಮಿಸಿಕೊಡುವ ಕುರಿತು ಭರವಸೆ ನೀಡಿದರು.

ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಶಾಲಾ ಸಂಘಗಳನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶಾಲೆಯ ವಿವಿಧ ಸಂಘಗಳ ಸದುಪಯೋಗದ ಕುರಿತು ಸೂಕ್ತ ಸಲಹೆ ನೀಡಿದರು.

ಶಾಲಾ ಆಡಳಿತ ಮಂಡಳಿಯ ನಿರ್ದೇಶಕ, ನ್ಯಾಯವಾದಿ ಸುನಿಲ್ ಎಲ್. ಗುಡಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಂಯಮದ ಅವಶ್ಯಕತೆ, ತಂತ್ರಜ್ಞಾನದ ಸೂಕ್ತ ಬಳಕೆ ಮತ್ತು ನಮ್ಮ ಮೇಲೆ ಆಸೆ-ಆಕಾಂಕ್ಷೆಗಳನ್ನು ಹೊತ್ತ ಹೆತ್ತವರ ಮೇಲೆ ನಮಗಿರಬೇಕಾದ ಕಳಕಳಿಯ ಕುರಿತಾಗಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು. 
ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಜಿ.ಎಂ.ಹಂಚಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.  
ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಎಂ.ವ್ಹಿ.ಹೊಸೂರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಎಂ.ಎಂ.ಅಮರಶೆಟ್ಟಿ, ನಿರ್ದೇಶಕರುಗಳಾದ ಬಿ.ಎನ್.ನವಲಗುಂದ, ಎಸ್.ಎಸ್.ಬೆಟಗೇರಿ, ಎಸ್.ಎಸ್.ಕರ್ಕಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕ ವರ್ಗ ಇದ್ದರು.

ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಂ.ವ್ಹಿ.ಅಂಗಡಿ ಸ್ವಾಗತಿಸಿದರು. ಶಾಲಾ ಸಂಸತ್ತಿನ ಮುಖ್ಯಸ್ಥ ಎನ್.ಬಿ.ಅಮರಗೋಳ ವಂದಿಸಿದರು. ಶಿಕ್ಷಕ ಡಿ. ಆದಿತ್ಯ ನಿರೂಪಿಸಿದರು.
ನವೀನ ಹಳೆಯದು

نموذج الاتصال