ನಮ್ಮ ವಾರ್ಡ ಸ್ವಚ್ಛ ವಾರ್ಡನಮ್ಮ ವಾರ್ಡ ನಂಬರ ಒನ ವಾರ್ಡ ಅಭಿಯಾನ.ಸ್ಪರ್ಧಾಕೂಟ ಅಕ್ಟೋಬರ 1ರಿಂದ.

ನಮ್ಮ ವಾರ್ಡ ಸ್ವಚ್ಛ ವಾರ್ಡ
ನಮ್ಮ ವಾರ್ಡ ನಂಬರ ಒನ ವಾರ್ಡ ಅಭಿಯಾನ.
ಸ್ಪರ್ಧಾಕೂಟ ಅಕ್ಟೋಬರ 1ರಿಂದ.

ಇಂದು ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಇಂದು ವಾರ್ಡ ಸಂಖ್ಯೆ 3ರಲ್ಲಿ ಸ್ಥಳೀಯ ನಾಗರಿಕರು ಹಿರಿಯರ ಸಮ್ಮುಖದಲ್ಲಿ ಪೌರಕಾರ್ಮಿಕರನ್ನ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿ ಶುಭ ಕೋರಲಾಯಿತು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರು ಈರೇಶ ಅಂಚಟಗೇರಿ ಮಾತನಾಡಿ ಆರೋಗ್ಯ ಸ್ವಚ್ಚತೆ ಎರಡು ಒಂದೆ ನಾಣ್ಯದ ಎರಡು ಮುಖಗಳು ಸ್ವಚ್ಚತಾ ಎಲ್ಲಿದಿಯೊ ಜನರ ಆರೋಗ್ಯ ಸ್ಥಿರವಾಗಿರುತ್ತದೆ ಕಾರಣ ಪೌರಕಾರ್ಮಿಕರು ನಮ್ಮ ನಗರದ ಸ್ವಚ್ಚತೆಗೆ ತಮ್ಮ ಆರೋಗ್ಯದ ಹಂಗು ಬಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ ಅವರಿಗೆಲ್ಲ ಅಭಿನಂದನೆಗಳು ಹಾಗು ಸ್ಥಳಿಯ ಜನತೆ ಕೂಡ ಪೌರಕಾರ್ಮಿಕರೊಂದಿಗೆ ಕೈ ಜೋಡಿಸಿ ನಗರದ ಸ್ವಚ್ಚತೆಗೆ ಆದ್ಯತೆ ನೀಡಬೇಕೆಂದು ನುಡಿದರು..
ಇದೆ ಬರುವ ಅಕ್ಟೋಬರ್1ರಿಂದ ನಮ್ಮ ವಾರ್ಡ ಸ್ವಚ್ಛ ವಾರ್ಡ 
ನಂಬರ ಒನ ವಾರ್ಡ ಸ್ಪರ್ಧೆ ಆರಂಭವಾಗಲಿದ್ದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡಗಳಲ್ಲಿ ಅತ್ಯಂತ ಸ್ವಚ್ಚತಾ ಹಾಗು ಶುಭ್ರ ವಾರ್ಡಗಳನ್ನು ಆಯ್ಕೆಮಾಡಿ ಪ್ರಥಮ ದ್ವಿತೀಯ ತೃತೀಯ ಬಹುಮಾನ ವಿತರಿಸಲಾಗುವದು.ಈ ಆಯ್ಕೆ ನಾಗರಿಕರ ಒಳಗೊಂಡ  ಸಮಿತಿಯ ತೀರ್ಮಾನದ ಪ್ರಕಾರ ಪ್ರಶಸ್ತಿಯನ್ನು ನೀಡಲಾಗುವದು..ಮುಂಬರುವ
 ದಿನಮಾನಗಳಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ದೇಶದಲ್ಲಿ ಸ್ವಚ್ಚತೆಗೆ ಮಾದರಿಯಾಗಲೆಂದು ಹಾರೈಸುತ್ತೇನೆ ಹಾಗು ಪೌರಕಾರ್ಮಿಕರಿಗೆ ಅಭಿನಂದನೆಗಳು ಸಲ್ಲಿಸುತ್ತೇನೆ ಅಂತ ನುಡಿದರು ಹಾಗು ಇದೆ ದಿನಾಂಕ 26/9/2022 ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಆಗಮಿಸಲಿದ್ದು ಅವರಿಗೆ ಪೌರ ಸನ್ಮಾನ ನೀಡಿ ಗೌರವಿಸಲಿದ್ದು ಸಮಸ್ತ ಹುಬ್ಬಳ್ಳಿ ಧಾರವಾಡ ನಗರ ಜನತೆಗೆ ಹೆಮ್ಮೆಯ ವಿಷಯವಿದು ಹಾಗು ಎಲ್ಲರೂ ಆಗಮಿಸಿ ಕಾರ್ಯಕ್ರಮ  ಯಶಸ್ವಿಯಾಗಿಸಬೇಕಾಗಿ ಆಹ್ವಾನ ನೀಡಿದರು.
ಈ ಸಂದರ್ಭದಲ್ಲಿ ಡಾ ಎಸ ಆರ ರಾಮನಗೌಡರ ಹಿರಿಯರು ಸಿ ಎಸ ಪಾಟೀಲ ಅಶೋಕ ಶೆಟ್ಟರ ಶೇಖರ ಕವಳಿ ಪರಿಟ ತವನಪ್ಪ ಅಷ್ಟಗಿ ನಿತಿನ ಹಂಜಿ ಯಡಾಳ ರಾಮದುರ್ಗ ಕಡಕೋಳ ಬಾಳೆದಮಠ ಹಾಗು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು
ನವೀನ ಹಳೆಯದು

نموذج الاتصال