ಕುಡಿದ್ದ ಮತ್ತಿನಲ್ಲಿ ಪತ್ನಿಯನ್ನು ಹತ್ಯೆ ಮಾಡಿದ ಆರೋಪಿ ಬಂಧನ: ಧಾರವಾಡದಲ್ಲಿ ಕೊಲೆ ಮಾಡಿ ಬೆಳಗಾವಿಗೆ ಪರಾರಿಯಾಗಿದ್ದ ಆರೋಪಿ
ಧಾರವಾಡ: ಕಳೆದ ಸೆಪ್ಟೆಂಬರ್ 15 ರಂದು ಕುಡಿದ್ದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳ ತೆಗೆದು ಕಲ್ಲಿನಿಂದ ಹೊಡೆದು, ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಹಿಡಿದು ತರುವಲ್ಲಿ ಧಾರವಾಡ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಹೊಸಾಯಲ್ಲಾಪುರನ ನವಲೂರ ಅಗಸಿ ಹೊರವಲಯದಲ್ಲಿ ಗದಿಗೆಪ್ಪ ಪಠಾದ್ ಪತ್ನಿ ಮಂಜ್ಜವ್ವಾ ಪಠಾದ್ ಮೂಲಂಗಿ ಸೊಪ್ಪು ತೊಳೆಯಿತ್ತಿರುವ ಸಂದರ್ಭದಲ್ಲಿ, ಪತಿ ಗದಿಗೆಪ್ಪ ಕಲ್ಲಿನಿಂದು ಹೊಡೆದು ಹತ್ಯೆ ಮಾಡಿ ಪರಾರಿಗಿದ್ದ.
ಆರೋಪಿ ಪತ್ತೆಗಾಗಿ ಶಹರ ಠಾಣೆಯ ಪೊಲೀಸರು ಬಲೆ ಬಿಸಿದ್ದರು. ಕೊನೆಗೂ ಈಗ ಹತ್ಯೆಯ ಆರೋಪಿ ಗದಿಗೆಪ್ಪನನ್ನು ಇಂದು ಮುಂಜಾನೆ ಬೆಳಗಾವಿಯಲ್ಲಿ ಪೊಲೀಸರು ಬಂಧನ ಮಾಡಿದ್ದಾರೆ.