ಭಾರತ ಮಾತೆಯ ಹಮ್ಮೆಯ ಸ್ವತಂತ್ರ ಹೋರಾಟಗಾರರಿಗೆ “ವೀರ ನಮನಗಳ” ಅರ್ಪಣೆ ಹಾಗೂ SSಐಅ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು

ಧಾರವಾಡ : ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೂ  ಹೊಂಬೆಳಕು ಪ್ರತಿಷ್ಠಾನ ಧಾರವಾಡ 
ಇವರ ವತಿಯಿಂದ  ಸ್ವಾತಂತ್ರö್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ನಗರದ ರಂಗಾಯಣ ಭವನದಲ್ಲಿ “ಭಾರತ ಮಾತೆಗೆ ಸ್ವಾತಂತ್ರö್ಯದಾರತಿ” ಕಾರ್ಯಕ್ರಮ ಹಾಗೂ ಭಾರತ ಮಾತೆಯ ಹಮ್ಮೆಯ ಸ್ವತಂತ್ರ ಹೋರಾಟಗಾರರಿಗೆ “ವೀರ ನಮನಗಳ” ಅರ್ಪಣೆ ಹಾಗೂ SSಐಅ  ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು  ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಶ್ರೀ ಈರೇಶ ಅಂಚಟಗೇರಿ, ಪೂಜ್ಯ ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಧಾರವಾಡ ಇವರು ಮಾತನಾಡಿ ಇಂದಿನ ಯುವ ಪೀಳಿಗೆಯು ಸ್ವಾತಂತ್ರö್ಯದ ಮಹತ್ವ ಹಾಗೂ ಅದರ ಮೌಲ್ಯವನ್ನು ತಿಳಿದುಕೊಂಡು ಯುವ ಜನರು ಸತ್ಪ್ರಜೆಗಳಾಗಿ ಬದುಕಬೇಕೆಂದು ನುಡಿದರು, ಹಾಗೂ ಶ್ರೀ ಸಾಯಿ ಕಾಲೇಜಿನ ಇಂತಹ ವಿಶಿಷ್ಠ ರೀತಿಯ ಕಾರ್ಯಕ್ರಮದ ಕುರಿತು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾದ ಡಾ. ಶ್ರೀಮತಿ ಎ. ಎನ್. ತಾಮ್ರಗುಂಡಿ, ಪ್ರಾಧ್ಯಾಪಕರು, ವಾಣಿಜ್ಯ ಅಧ್ಯಯನ ವಿಭಾಗ, ಹಾಗೂ ಹಣಕಾಸು ಅಧಿಕಾರಿಗಳು, ಕ ವಿ ವಿ ಧಾರವಾಡ ಇವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ದೇಶ ನಿಷ್ಠೆ, ಶಿಸ್ತು, ಹಿರಿಯರಿಗೆ ಗೌರವ ಕೊಡುವುದು ಹಾಗೂ ದೇಶಾಭಿಮಾನ ಇರಬೇಕು ಎಂದು ನುಡಿದರು. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳಸಿಕೊಂಡು, ದೇಶದ ಸತ್ಪ್ರಜೆಗಳಾಗಿ ರಾಷ್ಟ್ರದ ನವನಿರ್ಮಾಣದ ಕಾರ್ಯದಲ್ಲಿ ಕೈ ಜೋಡಿಸಬೇಕೆಂದು ಹಾಗೂ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ವ್ಯವಸ್ಥಾಪಕರು ಹಾಗೂ ಅಧ್ಯಕ್ಷರಾದ ಡಾ ಶ್ರೀಮತಿ ವೀಣಾ ಬಿರಾದಾರ  ಸ್ವಾತಂತ್ರö್ಯ ಹೋರಾಟ ನಡೆದು ಬಂದ ಹಾದಿಯನ್ನು ವಿವರಿಸಿ, ನಿಸ್ವಾರ್ಥದಿಂದ ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದ ಮಹಾತ್ಮ
 ಗಾಂಧೀಜಿಯವರ,ನೇತಾಜಿ ಸುಭಾಸ್ ಚಂದ್ರ ಭೋಸ್, ವಲ್ಲಭಾಯಿ ಪಟೇಲ್, ಜವಾಹರಲಾಲ್ ನೆಹರು ಮುಂತಾದ ಮಹನೀಯರ ತ್ಯಾಗ ಬಲಿದಾನವನ್ನು ಸ್ಮರಿಸಿದರು. ಅವಿರತ ಪರಿಶ್ರಮ, ಸತತ ಪ್ರಯತ್ನ, ದೃಢ ನಿರ್ಧಾರ, ಸಮಯದ ಸದುಪಯೋಗ, ಒಳ್ಳೆಯ ಮನೋಭಾವ, ರಾಷ್ಟ್ರಪ್ರೇಮ ಹಾಗೂ ದೇಶಭಕ್ತಿ ಬೆಳಸಿಕೊಂಡು  ದೇಶದ ಪ್ರಗತಿಗಾಗಿ ದುಡಿದು ಮಹಾವಿದ್ಯಾಲಯಕ್ಕೆ, ರಾಷ್ಟ್ರಕ್ಕೆ  ಹಾಗೂ ಪಾಲಕರಿಗೆ ಗೌರವವನ್ನು ತರಬೇಕೆಂದು ನುಡಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ನೃತ್ಯ, ದೇಶಭಕ್ತಿ ಗೀತೆ, ವಿವಿಧ ಮಹಿಳಾ ಮಂಡಳಗಳಿಂದ ದೇಶಪ್ರೇಮ ಸಾರುವ ದೇಶಭಕ್ತಿ ಗೀತೆಗಳಿಗೆ ನೃತ್ಯ ಹಾಗೂ ವಿವಿಧ  ಶಾಲೆಯ ಮಕ್ಕಳಿಂದ ವೇಷ಼ಭೂಷಣ ಪ್ರದರ್ಶನ ಜರುಗಿದವು.
ವೇದಿಕೆಯ ಮೇಲೆ ಡಾ ಎಸ್ ಬಿ ಗಾಡಿ, ಪ್ರಾಚಾರ್ಯರಾದ ಶ್ರೀ ನಾಗರಾಜ ಶಿರೂರ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಮಹಿಳಾ ಮಂಡಳಗಳು, ಕಾಲೇಜಿನ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಮೌನೇಶ್ವರ್ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಬಿ ವಿ ಮೊರಂಕರ್ ಸ್ವಾಗತಿಸಿದರು, ಶ್ರೀಮತಿ ಸುಧಾ ಕಬ್ಬೂರ ವಂದಿಸಿದರು.
ನವೀನ ಹಳೆಯದು

نموذج الاتصال