ಕಿಟಲ್ ಕಾಲೇಜುನಲ್ಲಿ ಧ್ವಜಾರೋಹಣ
75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಣೆಯ ಈ ಸುಸಂದರ್ಭದಲ್ಲಿ ಬಾಸೆಲ್ ಮಿಶನ ಉಚ್ಛ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವ ಎಲ್ಲಾ ಸಂಸ್ಥೆಗಳು ಒಟ್ಟಾಗಿ, ಕಿಟೆಲ್ ವಿಜ್ಞಾನ ಮಹಾವಿದ್ಯಾಲಯದ ನೇತ್ರತ್ವದಲ್ಲಿ, ಧರ್ಮದರ್ಶಿಗಳ,
ಕಾರ್ಯದರ್ಶಿ, ಸಭಾಪಾಲಕರ, ಎಲ್ಲ ಸಂಸ್ಥೆಗಳ ಮುಖ್ಯಸ್ಥರ ಸಮ್ಮುಖದಲ್ಲಿ, ಪ್ರಾಧ್ಯಾಪಕರ ಹಾಗೂ ಸಾವಿರಾರು
ವಿದ್ಯಾರ್ಥಿಗಳ ಹಾಜರಾತಿಯಲ್ಲಿ, ದಕ್ಷಿಣ ಭಾರತ ಸಭೆಯ ಉತ್ತರ ಸಭಾಪ್ರಾಂತದ ಧರ್ಮಾಧ್ಯಕ್ಷರು ಮತು ಬಾಸೆಲ್ ಮಿಶನ್ ಉಚ್ಚ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಅದ ರೈ, ರೆ. ಡಾ. ಮಾರ್ಟಿನ ಸಿ ಬೋರ್ಗಾಯಿ ಇವರು ಧ್ವಜಾರೋಹಣ ನೆರವೇರಿಸಿದರು.