ಧಾರವಾಡ ಸಂಚಾರಿ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ಮಾಡಿ ಆಟೋ ಚಾಲಕರಿಗೆ ಸಖತ್ಬಿಸಿಯನ್ನು ಮುಟ್ಟಿಸಿದ್ದಾರೆ.

ಧಾರವಾಡ ಸಂಚಾರಿ ಪೊಲೀಸರ ಮಾರುವೇಷದಲ್ಲಿ ಕಾರ್ಯಾಚರಣೆ. 
ಧಾರವಾಡ
ರೇಲ್ವೆ ನಿಲ್ದಾಣದಲ್ಲಿ ಮಾರುವೇಷದಲ್ಲಿ ಮಾಡಿದ ಕೆಲಸ ರಾಜ್ಯಕ್ಕೆ ಮಾದರಿಯಾಗಿದೆ.    ಧಾರವಾಡ ಸಂಚಾರಿ ಪೊಲೀಸರು ಮಾರುವೇಷದಲ್ಲಿ ಕಾರ್ಯಾಚರಣೆ ಮಾಡಿ ಆಟೋ ಚಾಲಕರಿಗೆ ಸಖತ್
ಬಿಸಿಯನ್ನು ಮುಟ್ಟಿಸಿದ್ದಾರೆ.ಹೌದು ನಗರದ ರೇಲ್ವೆ ನಿಲ್ದಾಣದಲ್ಲಿ
ಸಾರ್ವಜನಿಕರಿಂದ ಬಾಡಿಗೆ
ದರದಕ್ಕಿಂತ ಹೆಚ್ಚಿನ ದರವನ್ನು ವಸೂಲಿ ಮಾಡುತ್ತಿದ್ದ ಆಟೋ ಚಾಲಕ ರಿಗೆ ಮಾರುವೇಷದಲ್ಲಿ
ಕಾರ್ಯಾಚರಣೆ ಮಾಡಿ ಬಿಸಿ ಮುಟ್ಟಿಸಿ ರಾಜ್ಯಕ್ಕೆ
ಮಾದರಿಯಾಗುವ ಕಾರ್ಯಾಚರಣೆ
ಯನ್ನು ಮಾಡಿದ್ದಾರೆ.ರೇಲ್ವೆ ನಿಲ್ದಾಣಕ್ಕೆ ಬರುವ
ಸಾರ್ವಜನಿಕರಿಗೆ ನಿಗದಿ ಮಾಡಿದ ದರದಕ್ಕಿಂತ ಹೆಚ್ಚಿನ ದರವನ್ನು ಹಣವನ್ನು ವಸೂಲಿ ಮಾಡುತ್ತಿದ್ದರು
ಈ ಕುರಿತಂತೆ ಸಾಕಷ್ಟು ಪ್ರಮಾಣ ದಲ್ಲಿ ಸಾರ್ವಜನಿಕರಿಗೆ ಸಂಚಾರಿ ಪೊಲೀಸರಿಗೆ ದೂರು ಗಳು ಕೂಡಾ ಬಂದಿದ್ದವು ಇದೇಲ್ಲವನ್ನು ಅರಿತುಕೊಂಡ ಪೊಲೀಸರು ಇಂದು
ಮಾರುವೇಷವನ್ನು ಹಾಕಿಕೊಂಡು ರೇಲ್ವೆ ನಿಲ್ದಾಣದ ಒಳಗಡೆಯಿಂದ ಪ್ರಯಾಣಿಕರ ಸೋಗಿ ನಲ್ಲಿ ಬಂದು ಆಟೋ ಬಾಡಿಯನ್ನು ಪಡೆದುಕೊಂಡಿದ್ದಾರೆ, ನಗರದಲ್ಲಿ ನಿಗದಿ ಮಾಡಿದ ದರದಕ್ಕಿಂತ ಅಧಿಕ ಪ್ರಮಾಣ ದಲ್ಲಿ ವಸೂಲಿ ಮಾಡುತ್ತಿದ್ದ ಆರೇಳು ಆಟೋಗಳನ್ನು ಸೀಜ್ ಮಾಡಿ ಎಗ್ಗಿಲ್ಲದೇ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಧಾರವಾಡ
ಸಂಚಾರಿ ಪೊಲೀಸರು ಬಿಸಿ ಮುಟ್ಟಿ
ಸಿದ್ದಾರೆ.ಪೊಲೀಸ್ ಆಯುಕ್ತರ ಮತ್ತು ಧಾರವಾಡ ಸಂಚಾರಿ
ಪೊಲೀಸ್ ಇನ್ಸೆಕ್ಟರ್ ಮಲ್ಲನಗೌಡ ನಾಯ್ಕರ್ ಇವರ ಮಾರ್ಗದರ್ಶನದಲ್ಲಿ ಎಎಸ್ ಐ ವಿರೇಶ ಬಳ್ಳಾರಿ ನೇತ್ರತ್ವದಲ್ಲಿನ ಟೀಮ್ ಮಾರುವೇಷ ಹಾಕಿಕೊಂಡು ಈ ಒಂದು ಕಾರ್ಯಾಚರಣೆಯ ಮಾಡಿದ್ದಾರೆ.ಸಧ್ಯ ಆರೇಳು ಆಟೋಗಳನ್ನು ಸೀಜ್ ಮಾಡಿದ್ದು ಚಾಲಕರನ್ನು ಕೂಡಾ ವಶಕ್ಕೆ ತಗೆದುಕೊಂಡಿರುವ ಪೊಲೀಸರು ಮುಂದಿನ ಹಂತದ ಕ್ರಮಗಳನ್ನು ಕೈಗೊಂಡು ವಿಚಾರಣೆ ಮಾಡುತ್ತಿದ್ದು ಈ ಒಂದು ಮಾರುವೇಷದಲ್ಲಿ ಸಿಬ್ಬಂದಿಗಳಾದ ಶಂಕರಗೌಡ ಪಾಟೀಲ,ಶಿವಾನಂದ
ಸುತಗಟ್ಟಿ,ಬಸವರಾಜ ಉಳ್ಳಿಗೇರಿ, ಎನ್ ವಿ ಮೂಖಿ,ಮಹಾಂತೇಶ
ಶೇತ ಸಂಧಿ,ಹೆಗ್ಗಣ್ಣನವರ ಸೇರಿದಂತೆ ಹಲವರು ಪಾಲ್ಗೊಂಡಿದ್ದು ಈ ಒಂದು ಮಾರು ವೇಷದ ಕಾರ್ಯಾಚರಣೆ
ರಾಜ್ಯಕ್ಕೆ ಮಾದರಿಯಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ
ಪಾತ್ರವಾಗಿದ್ದು ಅಭಿನಂದಿಸಿದ್ದಾರೆ
ನವೀನ ಹಳೆಯದು

نموذج الاتصال