ರಾಜ್ಯದಲ್ಲಿಯೇ ಅರ್ಜಿ ವಿಲೇವಾರಿಯಲ್ಲಿ-- ಧಾರವಾಡ ಜಿಲ್ಲೆ ಪ್ರಥಮ ಸ್ಥಾನ

( ನಡೆದ ಡಿಸಿ ಅವರೊಂದಿಗೆ ಪತ್ರಕರ್ತರ  ಸಂವಾದ)
    
ರಾಜ್ಯದಲ್ಲಿಯೇ  ಅರ್ಜಿ  ವಿಲೇವಾರಿಯಲ್ಲಿ-- ಧಾರವಾಡ ಜಿಲ್ಲೆ ಪ್ರಥಮ ಸ್ಥಾನ
    ಧಾರವಾಡ:-- ಇಡೀ ರಾಜ್ಯದಲ್ಲಿಯೇ ಸಾರ್ವಜನಿಕರ ವಿವಿಧ ಅರ್ಜಿಗಳನ್ನು  ಅತೀ ಶೀಘ್ರದಲ್ಲೇ ವಿಲೇವಾರಿಗಳನ್ನು ಮಾಡುವದರಲ್ಲಿ ಧಾರವಾಡ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಇದೆ ಎನ್ನುವದು ಹೆಮ್ಮೆಯ ಸಂಗತಿ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇಂದಿಲ್ಲಿ ತಿಳಿಸಿದರು.
      ಧಾರವಾಡ ಜರ್ನಲಿಸ್ಟ್ ಗಿಲ್ಡ್  ದವರು ರಂಗಾಯಣ ಸಭಾಭವನದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರೊಂದಿಗೆ  ಪತ್ರಿಕಾ ಸಂವಾದ ಗೋಷ್ಠಿ ಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
      ಕಂದಾಯ ಇಲಾಖೆಯಲ್ಲಿ ತಹಶಿಲ್ದಾರ, ತಲಾಟಿ ಕಚೇರಿಯಲ್ಲಿ ಏಜೆಂಟ್ ರ ಹಾವಳಿ ಸಾಕಷ್ಟು ಪ್ರಮಾಣದಲ್ಲಿ ಇದೆ ಎನ್ನುವ ಪ್ರಶ್ನೇಗೆ ಉತ್ತರಿಸಿದ ಜಿಲ್ಲಾಧಿಕಾರಿ ಹೆಗಡೆ ಅವರು ಎಲ್ಲಾ ಸೇವೆಗಳು ಆನ್ ಲೈನ್ ದಲ್ಲಿಯೇ ಅರ್ಜಿಗಳನ್ನು ಕಳಿಸುವ ವ್ಯವಸ್ಥೆ ಮಾಡಿರುವದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
     ಜಿಲ್ಲೆಯನ್ನು ಪ್ರವಾಸೋದ್ಯಮಕ್ಕೆ ವಿಶೇಷ ಒತ್ತುನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಿವೆ ಎಂದರು.
       ಸಿಮೆಂಟ್ ರಸ್ತೆಯ ನಿರ್ಮಾಣ ಕಾರ್ಯದಲ್ಲಿ ದ್ವಿಚಕ್ರ ನಿಲುಗಡೆ, ಪಾದಚಾರಿ ಸಂಚಾರಕ್ಕೆ ಒತ್ತುಕೊಡಲು ಗಮನ ಹರಿಸಲಾಗುವದು ಎಂದರು.
    ಸರ್ಕಾರದ ಎಲ್ಲಾ ಯೋಜನೆ, ಕಾರ್ಯಕ್ರಮಗಳನ್ನು ಜಿಲ್ಲಾಮಟ್ಟದಲ್ಲಿ ಸರಿಯಾಗಿ ಕಟ್ಟುನಿಟ್ಟಾಗಿ
 ಅನುಷ್ಠಾನಕ್ಕೆ ತರಲು ಪ್ರಮಾಣಿಕವಾಗಿ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
      
      ಧಾರವಾಡ ಜಿಲ್ಲೆಯ ಧಾರವಾಡ ನಗರದಲ್ಲಿಯೇ ನನ್ನ ವಿದ್ಯಾಭ್ಯಾಸ ಮಾಡಿದ್ದು ಅಷ್ಟೇ ಅಲ್ಲದೆ ಇಲ್ಲಿಯ ಪ್ರತಿಯೊಂದು ಪ್ರದೇಶದ ಮಾಹಿತಿಯು ಇರುವದರಿಂದ ನಗರದ ಹಾಗೂ  ಜಿಲ್ಲೆಯ ಅಭಿವೃದ್ಧಿ ಯೋಜನೆಗೆ ಹೆಚ್ಚಿನ ಆಸಕ್ತಿವಹಿಸುತ್ತಿರುವುದಾಗಿ ಹೇಳಿದರು.
     ಗಿಲ್ಡ್ ಅಧ್ಯಕರಾದ ಬಸವರಾಜ ಹೊಂಗಲ ಸ್ವಾಗತಿಸಿದರು. ಕಾರ್ಯದರ್ಶಿ ಸುಧೀಂದ್ರ ಪ್ರಸಾದ ಕಾರ್ಯಕ್ರಮ ನಿರ್ವಹಿಸಿದರು. ಗಿಲ್ಡ್ ಸದಸ್ಯರು ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال