ಪುಣ್ಯ ತಿಥಿ ಅಂಗವಾಗಿ ಉಚಿತ ಆರೋಗ್ಯ ಶಿಬಿರ.

 ಪುಣ್ಯ ತಿಥಿ ಅಂಗವಾಗಿ ಉಚಿತ ಆರೋಗ್ಯ ಸಹಕರಿಸ ಜನನಗಳು

 STAR74 NEWS

              ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಗಣ್ಯರು , ಮುತ್ಸದ್ದಿ ಸಮಾಜಸೇವಕರು, ದಿವಂಗತ ಬಾಲಪ್ಪ ಭೀಮಕ್ಕನವರ ಅವರ ಪ್ರಥಮ ವರ್ಷದ ಪುಣ್ಯ ತಿಥಿಯ ಅಂಗವಾಗಿ, ಗ್ರಾಮದ ಸಿದ್ದಾರೂಢ ಮಠದಲ್ಲಿ, ಕಲ್ಪವೃಕ್ಷ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಧಾರವಾಡ ಇವರ ಆಶ್ರಯದಲ್ಲಿ, ಅಶೋಕ ಆಸ್ಪತ್ರೆ ವಿದ್ಯಾನಗರ ಹುಬ್ಬಳ್ಳಿ, ಮೆಡಿ‌ಲ್ಯಾಬ್ ಡೈಗ್ನೋಸ್ಟಿಕ್ ಸೆಂಟರ್ ಮತ್ತು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಯೋಗದೊಂದಿಗೆ, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, 



ನೇತ್ರ ತಪಾಸಣೆ, ಎಲುಬು ಕೀಲು, ಹೃದಯ ಕಾಯಿಲೆ ಥೈರಾಯ್ಡ್ ಮುಂತಾದವುಗಳನ್ನು ತಜ್ಞ ವೈದ್ಯರಿಂದ ತಪಾಸಣೆ ಮಾಡಲಾಯಿತು, ಗ್ರಾಮದ ನೂರಾರು ಜನರು ಈ ಶಿಬಿರದ ಲಾಭವನ್ನು ಪಡೆದರು, ಗಣ್ಯರಾದ ಶಿವಲೀಲಾ ವಿನಯ ಕುಲಕರ್ಣಿ, ಗೌರಮ್ಮ ನಾಡಗೌಡರ, ದೀಪಾ ಗುತ್ತೆ, ಗ್ರಾಮ ಪಂಚಾಯತಿ ಅದ್ಯಕ್ಷರಾದ ತೇಜಸ್ವಿನಿ ತಮ್ಮಾಜಿರಾವ ತಲವಾಯಿ, ಉಪಾದ್ಯಕ್ಷರಾದ ವಿಠ್ಠಲ ಇಂಗಳೆ, ಚನಬಸಪ್ಪ ಮಟ್ಟಿ,ಎಂ ಎಸ್ ಕಮ್ಮಾರ ಪ್ರಕಾಶ ಪತ್ತಾರ,  ಸೇರಿದಂತೆ, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಹಾಜರಿದ್ದು ಶಿಬಿರಕ್ಕೆ ಚಾಲನೆ ನೀಡಿದರು, ದಿವಂಗತ ಬಾಲಪ್ಪ ಭೀಮಕ್ಕನವರ ಇವರ ಮಗ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ ಭೀಮಕ್ಕನವರ ಸ್ವಾಗತಿಸಿ ವಂದಿಸಿದರು.


STAR 74 NEWS ಚಾನೆಲ್ ಗೆ SUBSCRIBE ಮಾಡಿ LIKE SHER ಮಾಡಿ ಸಹಕರಿಸ

ನವೀನ ಹಳೆಯದು

نموذج الاتصال