ಮಾನ್ಯರೇ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ರಾಯಾಪುರದಲ್ಲಿರುವ ಶಾಸಕರಾದ ಅರವಿಂದ್ ಬೆಲ್ಲದ ಶೋ ರೂಂ ಒಳಗಡೆ ಇರುವ ಮಲಪ್ರಭಾ ಮುಖ್ಯ ಕುಡಿಯುವ ನೀರಿನ ಪೈಪಲೈನ್ ದುರಸ್ತಿ ಕಾಮಗಾರಿ ನಡೆದಿತ್ತು.
ಈ ವೇಳೆ ಕಾಂಗ್ರೆಸ್ ಮುಖಂಡರ ತಂಡ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಈ ಮುಖ್ಯ ನೀರಿನ ಪೈಪಲೈನ ಹೋಗಿರುವ ಜಾಗ ಶಾಸಕ ಅರವಿಂದ್ ಬೆಲ್ಲದ ರವರದೋ ಅಥವಾ ಸರಕಾರದ್ದೋ ಎಂದು ವಿಚಾರಿಸಿದೆವು ಈ ಸಂದರ್ಭದಲ್ಲಿ ಶಾಸಕ ಅರವಿಂದ್ ಬೆಲ್ಲದ ರವರು ತಮ್ಮ ಶೋರೂಂ ಗಾಗಿ ಸಾರ್ವಜನಿಕ ಆಸ್ತಿಯನ್ನು ನುಂಗಿರುವುದು ಸಾಕ್ಷಿಸಮೇತ ಸಿಕ್ಕು
ಶಾಸಕರ ಭೂ ಕಬಾಳಿಕೆಯ ವಿಷಯ ಬಾಟಬಯಲಾಗಿದೆ ಈ ಹಿಂದೆ ಮಾಧ್ಯಮದಮೂಲಕ ವಿಷಯ ಪ್ರಸ್ತಾಪಿಸಿದ್ದು ಹಾಗೂ ಜಿಲ್ಲಾಧಿಕಾರಿಗಳಿಗೆ, ಜಲಮಂಡಳಿಯವರಿಗೆ ದಿನಾಂಕ 30-05-2022 ರಂದು ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ
ಇಂದು ಕೂಡಾ ದೂರವಾಣಿಯ ಮುಖಾಂತರ ಪಾಲಿಕೆ ಹಾಗೂ ಜಲಮಂಡಳಿಯ ಅಧಿಕಾರಿಗಳಿಗೆ ಎಚ್ಚರಿಸಿ ಕೂಡಲೇ ಶಾಸಕರು ತಾವು ಅತಿಕ್ರಮಿಸಿದ ಜಾಗವನ್ನು ಮರಳಿ ಪಡೆವುವಂತೆ ರಾಣಿ ಚನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ನಾಗರಾಜ ಗೌರಿ ಯವರ ನೇತೃತ್ವದಲ್ಲಿ ಒತ್ತಾಯಿಸಿದೇವು ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ, ಮಂಜುನಾಥ್ ಕಟ್ಟಿ, ಚಿದಾನಂದ್ ಶೀಶನಲ್ಲಿ, ಬಸವರಾಜ ಮನಗುಂಡಿ, ನಿಂಗಪ್ಪ ಅಪ್ಪಣ್ಣವರ ಇನ್ನಿತರರು ಉಪಸ್ಥಿತರಿದ್ದರು
ಧನ್ಯವಾದಗಳು