ರಾಮ್ ಸೇನಾ ಜಿಲ್ಲಾಧ್ಯಕ್ಷ ವಿಜಯ ಕದಂ ಎಂಬಾತನಿಂದ ಹಾಡು-ಹಗಲೇ ಮಾರಕಾಸ್ತ್ರಗಳಿಂದ ಕೋಲೆಗೆ ಯತ್ನ

ಹಾಡು--ಹಗಲೇ ಮಾರಕಾಸ್ತ್ರಗಳಿಂದ ಕೊಲೆಗೆಯತ್ನ
     ಧಾರವಾಡ:--ನಗರದಲ್ಲಿ 
 ಹಾಡಹಗಲೇ ಮತ್ತೊಂದು ಕೊಲೆಗೆ ಯತ್ನ ನಡೆದಿದೆ.ಯುವಕನೋರ್ವ  ತನ್ನ ಪ್ರೇಯಸಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಹಾಡು ಹಗಲೇ ನಡೆದಿದೆ.
    .ರಾಮ್ ಸೇನಾ ಜಿಲ್ಲಾಧ್ಯಕ್ಷ ವಿಜಯ ಕದಂ ಎಂಬಾತನೇ ತನ್ನ ಪ್ರೇಯಸಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ . ಪದ್ಮಾ ಎಂಬಾಕೆಯೇ ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡವಳು ಎಂದು ಗುರುತಿಸಲಾಗಿದೆ.
   ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಂತರ ಆರೋಪಿ ವಿಜಯ ಕದಂ ಧಾರವಾಡ ಉಪನಗರ ಠಾಣೆಗೆ ಬಂದು ಹಾಜರಾಗಿದ್ದಾನೆ . ಇವರಿಬ್ಬರ ಮಧ್ಯೆ ಕಳೆದ ಏಳು ವರ್ಷಗಳಿಂದ ಅಕ್ರಮ ಸಂಬಂಧವಿತ್ತು ಎನ್ನಲಾಗುತ್ತಿದೆ.
     ಆಗಾಗ ಇಬ್ಬರ ಮಧ್ಯೆ ಜಗಳ ಕೂಡ ನಡೆಯುತ್ತಿತ್ತು . ಇವತ್ತು ಕೂಡ ಇಬ್ಬರ ಮಧ್ಯೆ ಜಗಳ ನಡೆದು , ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ವಿಜಯ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ . ಈ ಘಟನೆ ಧಾರವಾಡದ ಸೋನಾಪುರದಲ್ಲಿ ನಡೆದಿದೆ . ಗಂಭೀರವಾಗಿ ಗಾಯಗೊಂಡಿರುವ ಪದ್ಮಾ ಸಾವು , ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ ,  ಆಕೆಯನ್ನು ಚಿಕಿತ್ಸೆಗಾಗಿ ಕಿಮ್ಮೆ ದಾಖಲಿಸಲಾಗಿದೆ . ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ‌ ಮುಂದುವರೆಸಿದ್ದಾರೆ.
ನವೀನ ಹಳೆಯದು

نموذج الاتصال