ಬಾಕಿ ವೇತನ ಬಿಡುಗಡೆಗಾಗಿ ಪ್ರತಿಭಟನೆ

 ಹಾಸ್ಟೆಲ್ ಕಾರ್ಮಿಕರಿಗೆ ಕೂಡಲೇ 6ತಿಂಗಳ ಬಾಕಿ ವೇತನ ಬಿಡುಗಡೆ ಮಾಡಲು ಆಗ್ರಹಿಸಿ AIUTUC ಪ್ರತಿಭಟನೆ           ದಿನಾಂಕ 13-07-2022
ಹುಬ್ಬಳ್ಳಿ

ಇಂದು ಎಐಯುಟಿಯುಸಿ ಕೇಂದ್ರ ಕಾರ್ಮಿಕ ಸಂಘಟನೆ ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಹುಬ್ಬಳ್ಳಿ ತಾಲೂಕ ಘಟಕದ ವತಿಯಿಂದ ಕಳೆದ 6 ತಿಂಗಳಿನ ಬಾಕಿ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಯಿತು.
 ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಬಿಸಿಎಂ ಇಲಾಖೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಬೆಲೆ ಏರಿಕೆಯ ದಿನಗಳಲ್ಲಿ ನಿಯಮಿತವಾಗಿ ವೇತನ ಬರುವವರೇ ಕಷ್ಟ ಪಡುತ್ತಿರುವಾಗ  6 ತಿಂಗಳಿನಿಂದ  ವೇತನವಿಲ್ಲದ್ದರಿಂದ ಬಾಡಿಗೆ ಕಟ್ಟಲಾರದೆ ಬೀದಿ ಪಾಲಾಗುವ ಆತಂಕದಲ್ಲಿ ಈ ಕಾರ್ಮಿಕರ ಕುಟುಂಬಗಳಿವೆ. ಶಿಕ್ಷಣಕ್ಕೆ ಹಣ ಕಟ್ಟಲಾರದೆ ಇವರ ಮಕ್ಕಳು ಪ್ರತಿನಿತ್ಯ ಅವಮಾನ ಅನುಭವಿಸಬೇಕಾಗಿದೆ.
ಕುಟುಂಬದ ಸದಸ್ಯರ ಆರೋಗ್ಯ ಹೊರೆಯಾಗಿ ಕಾಡುತ್ತಿದೆ. ವಸತಿ ನಿಲಯದ ಮಕ್ಕಳಿಗೆ ಪ್ರತಿನಿತ್ಯ ಅನ್ನ ಹಾಕುವ ಇವರ  ಮಕ್ಕಳು ಮತ್ತು ಕುಟುಂಬಗಳನ್ನು  ಇಲಾಖೆ ಉಪವಾಸಕ್ಕೆ ನೂಕಿದೆ. ಕೇಳಿದಾಗೊಮ್ಮೆ ಬಂದಾಗ ಹಾಕುತ್ತೇವೆ ಎನ್ನುವ ಸಿದ್ಧ ಉತ್ತರವನ್ನು ಇಲಾಖೆ ನೀಡುತ್ತಿದೆ. ಸರ್ಕಾರ ಈಗಲಾದರೂ ಇವ ಬಾಕಿ ವೇತನವನ್ನು ಈ ಕೂಡಲೇ ಪಾವತಿಸಬೇಕು. ಅಲ್ಲದೆ  ಈ ಸಮಸ್ಯೆಯ ವಿರುದ್ಧ ಕಾರ್ಮಿಕರು ರಾಜಿ ರಹಿತ ಹೋರಾಟಕ್ಕೆ ಸಜ್ಜಾಗಬೇಕು, ಎಂದರು.
ಪ್ರತಿಭಟನೆಯಲ್ಲಿ ರತ್ನ ಮಠಪತಿ,ಲಕ್ಷ್ಮಿ ಬಾರಕಿ,ಭಾಗ್ಯಶ್ರೀ ಗಮನಗಟ್ಟಿ,ಶಾರದಾ ಮೇಲ್ಮನಿ,ಶಿವಲೀಲಾ, ಬಸಮ್ಮ ಮುಳ್ಳಳ್ಳಿ,ಲಕ್ಷ್ಮೀ ದಿವಟಗಿ ಮುಂತಾದವರು ಇದ್ದರು. ಮನವಿ ಪತ್ರವನ್ನು ಸ್ವೀಕರಿಸಿದ ಬಿಸಿಎಂ ತಾಲೂಕ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ನವೀನ ಹಳೆಯದು

نموذج الاتصال