ಅಗ್ನಿಪಥ್ ಯೋಜನೆ ವಿರೋಧಿಸಿ,ಇಂದು ಗಂಟೆಗೆ,ಧಾರವಾಡ ಜಿಲ್ಲಾಧಿಕಾರಿಗಳವರ ಕಛೇರಿ ಎದುರಿಗೆ ಪ್ರತಿಭಟಣೆ

 ಧಾರವಾಡ- 71 ಬ್ಲಾಕ್       ಯೂತ್ ಕಾಂಗ್ರೆಸ್ ವತಿಯಿಂದ 

ಅಗ್ನಿಪಥ್ ಯೋಜನೆ ವಿರೋಧಿಸಿ,ಇಂದು ಗಂಟೆಗೆ,ಧಾರವಾಡ ಜಿಲ್ಲಾಧಿಕಾರಿಗಳವರ ಕಛೇರಿ ಎದುರಿಗೆ ಪ್ರತಿಭಟಣೆ

ಅಗ್ನಿಪಥ್ ಯೋಜನೆ ವಿರೋಧಿಸಿ,ಇಂದು ಗಂಟೆಗೆ,ಧಾರವಾಡ ಜಿಲ್ಲಾಧಿಕಾರಿಗಳವರ ಕಛೇರಿ ಎದುರಿಗೆ ಪ್ರತಿಭಟಣೆ ಹಮ್ಮಿಕೊಳ್ಳಲಾಗಿತ್ತು  ,         ನಾಲ್ಕು ವರ್ಷ ಅಲ್ಪಾವಧಿಗೆ ನೇಮಕಾತಿ ಮಾಡಿಕೊಳ್ಳುವ ಈ ಅಗ್ನಿಪಥ್ ಯೋಜನೆ ಯುವಜನತೆ ಹಾಗೂ ದೇಶದ ರಕ್ಷಣಾ ವ್ಯವಸ್ಥೆಗೆ ಮಾರಕವಾಗಿದ್ದು

 ಈ ಯೋಜನೆಯಿಂದ ಸಶಸ್ತ್ರ ಪಡೆಗಳಲ್ಲಿ ನಾಲ್ಕು ವರ್ಷಗಳ ವರೆಗೆ ಸೇವೆ ಸಲ್ಲಿಸಿದ ನಂತರ, ಯುವಜನರು ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅವಕಾಶಗಳನ್ನು ಕಳೆದುಕೊಳ್ಳುವ

ಭೀತಿಯು ಎದುರಾಗಲಿದೆ.

 ನೇಮಕಾತಿಗಾಗಿ ಹೊಸ ಯೋಜನೆಯನ್ನು ಪರಿಚಯಿಸುವ ಮೊದಲು ಭಾರತ ಸರ್ಕಾರವು ಯಾವುದೆ ಶ್ವೇತ ಪತ್ರವನ್ನು ತಯಾರಿಸಿಲ್ಲ ಹಾಗೂ ಸಂಸತ್ತಿನಲ್ಲಿ ಅಥವಾ ರಕ್ಷಣಾ ಸಂಸದಿಯ ಸಮಿತಿಯಲ್ಲಿ ಚರ್ಚೆಯಾಗಿಲ್ಲ ಯೋಜನೆ ಘೋಷಣೆಗೂ ಮುನ್ನ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.



ಈ ಯೋಜನೆಯು ಹಳೆಯ ವ್ಯವಸ್ಥೆಯಲ್ಲಿದ್ದ ದೀರ್ಘಾವದಿ, ಪಿಂಚಣಿ ಮತ್ತು ಇತರೆ ಪ್ರಯೋಜನೆಗಳನ್ನು ಒಳಗೊಂಡಿರುವುದಿಲ್ಲ.

ಮೇಲಿನ ವಿಷಯಗಳನ್ನು ಗಮನಿಸಿದಾಗ ಸೈನಿಕರನ್ನು ಅರೆಕಾಲಿಕ ಉದ್ಯೋಗಿಗಳನ್ನಾಗಿಸುವ ಹುನ್ನಾರವು ಎದ್ದು ಕಾಣುತ್ತಿದ್ದು ಕೂಡಲೆ ಈ ಯೋಜನೆಯನ್ನು ಕೈ ಬಿಡಬೇಕು. ಹಾಗೂ ಧಾರವಾಡದಲ್ಲಿ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ನಡೆದ ಹೋರಾಟದಲ್ಲಿ ಹಲವಾರು ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು ತಂಡ ಮೊಕದ್ದಮೆಗಳನ್ನು ರದ್ದು ಮಾಡಬೇಕು. ಈ

ಹಾಗೂ ಈಗಾಗಲೆ ದೈಹಿಕ, ವೈದ್ಯಕೀಯ, ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಲಿಖಿತ ಪರೀಕ್ಷೆಗೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು, ಎಂದು ಬೇಡಿಕೆ ಗಳೊಂದಿಗೆ  ,ಕಾಂಗ್ರೆಸ ಯುವ ಘಟಕ ಅರ್ಬನ ಬ್ಲಾಕ ಅದ್ಯಕ್ಷರಾದ ವಿನಯ ಬಾಬರ ಹಾಗೂ ಗ್ರಾಮೀಣ ಬ್ಲಾಕ ಅದ್ಯಕ್ಷರಾದ ಮೈಲಾರಗೌಡ ಪಾಟೀಲ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು ,ಬ್ಲಾಕ ಅದ್ಯಕ್ಷರಾದ ಅರವಿಂದ ಎಗನಗೌಡರ,ಈಶ್ವರ ಶಿವಳ್ಳಿ,ಪಾಲಿಕೆ ಸದಸ್ಯರಾದ ರಾಜು ಕಮತಿ,ಆನಂದ ಸಿಂಗನಾಥ,ಎಂ ಬಿ ನಡಟ್ಟಿ  ,ಬಸವರಾಜ ಜಾದವ,ನವಿನ ಕದಂ,ಸಂಜಯ ಲಕಮನಹಳ್ಳಿ,ಪ್ರಶಾಂತ ಕೆಕರೆ,ಸಿದ್ದಣ್ಣ ಪ್ಯಾಟಿ,ಬಸು ಇದ್ಲಿ,ನಿಜಾಮ ರಾಹಿ,ರಮೇಶ ತಳಗೇರಿ,ಕಾರ್ತಿಕ ಗೋಕಾಕ,ಈಶ್ವರ ಹಂಚನಾಳ,ಸಂಜು ಸೊಬರದ,ರಿಚರ್ಡ ಸಕ್ರಿ,ಪಕ್ರುದ್ದಿನ ನಧಾಪ, ಸಂತೊಷ ಬೀರಾದಾರ,ಸಂಜು ಗಾಯಕವಾಡ,ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

ನವೀನ ಹಳೆಯದು

نموذج الاتصال