DHARWAD:ನೀಟ್‌ನಲ್ಲಿ ರಾಮನಗೌಡರ ಸಹೋದರರ ಸಾಧನೆ ಧಾರವಾಡ

ನೀಟ್‌ನಲ್ಲಿ ರಾಮನಗೌಡರ ಸಹೋದರರ ಸಾಧನೆ 
ಧಾರವಾಡ 
ಜೂ.14: ಇತ್ತೀಚೆಗೆ ನಡೆದ ವೈದ್ಯಕೀಯ ಶಿಕ್ಷಣದ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಧಾರವಾಡದ ಇಬ್ಬರು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದ್ದು ನಗರದ ಕೀರ್ತಿ ಹೆಚ್ಚಿಸಿದ್ದಾರೆ.
ನಗರದ ಖ್ಯಾತ ವೈದ್ಯರಾದ ಡಾ. ಎಸ್. ಆರ್. ರಾಮನಗೌಡರ ಅವರ ಮೊಮ್ಮಕ್ಕಳಾದ ದಕ್ಷ ಶ್ರೀಕಂಠ ರಾಮನಗೌಡರ 720ಕ್ಕೆ 626 ಅಂಕ ಗಳಿಸುವ ಮೂಲಕ ಆಲ್ ಇಂಡಿಯಾ ನೀಟ ರ‍್ಯಾಂಕಿಂಗ್‌ನಲ್ಲಿ 318 ನೇ ಸ್ಥಾನ ಪಡೆದಿದ್ದಾರೆ. ವಿಶ್ವಾರಾಧ್ಯ ಪ್ರಕಾಶ ರಾಮನಗೌಡರ 720ಕ್ಕೆ 597 ಅಂಕ ಪಡೆಯುವ ಮೂಲಕ ಆಲ್ ಇಂಡಿಯಾ ನೀಟ್ ರ‍್ಯಾಂಕಿಂಗ್‌ನಲ್ಲಿ 1549 ನೇ ಸ್ಥಾನಗಳಿಸಿದ್ದಾರೆ. 


ಈ ಮೂಲಕ ಡಾ.ರಾಮನಗೌಡರ ಮನೆತನದ ಮೂರನೆ ತಲೆಮಾರಿನ ಮತ್ತಿಬ್ಬರು ವೈದ್ಯಕೀಯ ಕಾಲೇಜು ಪ್ರವೇಶಿಸುವುದು ಖಚಿತವಾದಂತಾಗಿದೆ. ಈಗಾಗಲೆ ಡಾ.ರಾಮನಗೌಡರ ಹಿರಿಯ ಮೊಮ್ಮಗಳು ನೀಲಸ್ಮೃತಿ ಪ್ರಶಾಂತ ರಾಮನಗೌಡರ ಎಮ್.ಬಿ.ಬಿ.ಎಸ್ ಮುಗಿಸಿದ್ದು ನೀಟ್ ಪಿಜಿ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಇಷ್ಟಿತಾ ಚಿದಾನಂದ ರಾಮನಗೌಡರ ಎಮ್.ಬಿ.ಬಿ.ಎಸ್ ಮೂರನೆ ವರ್ಷದಲ್ಲಿದ್ದು, ನಿಶಿತಾ ಚಿದಾನಂದ ರಾಮನಗೌಡರ ಎಮ್.ಬಿ.ಬಿ.ಎಸ್ ಪ್ರಥಮ ವರ್ಷದಲ್ಲಿ ಕಲಿಯುತ್ತಿದ್ದಾರೆ.
ಮಕ್ಕಳ ತಾಯಂದಿರಾದ ಡಾ.ಸುಷ್ಮಾ, ಡಾ.ಸ್ಮೀತಾ, ಡಾ.ವಾಣಿಶ್ರೀ ಹಾಗೂ ಡಾ.ದಾಕ್ಷಾಯಿಣಿ ಇವರುಗಳ  ಶ್ರಮ ಮಕ್ಕಳ ಈ ಸಾಧನೆಗೆ ಕಾರಣವಾಗಿದೆ.
ನವೀನ ಹಳೆಯದು

نموذج الاتصال