ಜುಲೈ 9 ಕ್ಕೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ, ಪೋಸ್ಟರ್ ಬಿಡುಗಡೆ.
ಧಾರವಾಡ 27 : 10 ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ಜುಲೈ 9 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ದ ಅಂಗವಾಗಿ ಇಂದು ಎಐಯುಟಿಯುಸಿ ಕಚೇರಿಯಲ್ಲಿ JCTU ವತಿಯಿಂದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಾರ್ಮಿಕ ವಿರೋಧಿ 4 ಲೇಬರ್ ಕೋಡ್ ರದ್ದುಗೊಳಿಸಲು, ಸಾರ್ವಜನಿಕ ವಲಯಗಳು ಮತ್ತು ಸರ್ಕಾರಿ ಉದ್ಯಮಗಳ ಖಾಸಗೀಕರಣವನ್ನು ಮಾಡುವ NMPಯನ್ನು ರದ್ದುಗೊಳಿಸಲು, ಟ್ರೇಡ್ ಯೂನಿಯನ್ ಹಕ್ಕುಗಳನ್ನು ಖಚಿತಪಡಿಸಲು, NPS / UPS ರದ್ದು ಮಾಡಿ, OPS ಜಾರಿಗೊಳಿಸಲು,ಗುತ್ತಿಗೆ-ಹೊರಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಲು ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರಾಗಿ ಖಾಯಂಗೊಳಿಸಲು, ಪ್ರತಿದಿನ ಕೆಲಸದ ಅವಧಿ 8 ಗಂಟೆ ಮೀರದಂತೆ ಖಚಿತಪಡಿಸಲು ಇತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಲು ಈ ಮುಷ್ಕರ ಇದೆ.
ಇದರ ಅಂಗವಾಗಿ ಬ್ಯಾಂಕ್, ವಿಮಾ, ಕೈಗಾರಿಕಾ ಕ್ಷೇತ್ರ, ಇತ್ಯಾದಿ ಎಲ್ಲ ಕಾರ್ಮಿಕರ ಮಧ್ಯೆ ಪ್ರಚಾರ ಹಮ್ಮಿಕೊಳ್ಳಲಾಗಿದೆ. ಅಂದು ಜುಲೈ 9 ರಂದು ಧಾರವಾಡದಲ್ಲಿ ಕಲಭಾವನ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದು ಎಲ್ಲ ಸಂಘಟಿತ, ಅಸಂಘಟಿತ ಕ್ಷೇತ್ರದ ಎಲ್ಲ ನೌಕರರು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಲಾಯಿತು.
ಸಭೆಯಲ್ಲಿ, ಎಐಯುಟಿಯುಸಿ ಯ ಗಂಗಾಧರ ಬಡಿಗೇರ, ಸಿಐಟಿಯು ನ ಬಿ. ಎನ್ ಪೂಜಾರಿ, ವಿಮಾ ಕ್ಷೇತ್ರದ ಎಐಐಇಎ ನ ಎ ಎಂ ಖಾನ್, ಉದಯ ಗದಗಕರ್, ಬ್ಯಾಂಕ್ ಕ್ಷೇತ್ರದ ಎ ಐ ಬಿ ಇ ಎ ನಾಯಕರಾದ ಸ್ಟೇಫನ್ ಜಯಚಂದ್ರ, ರಾಜು ಕಲಾಲ್, ಸಂದೀಪ್ ಮೇತ್ರಿ, ರವಿ ಕಟ್ಟಿ, ಎಐ ಕೆ ಕೆ ಎಂ ಎಸ್ ರೈತ ಸಂಘದ ದೀಪಾ ಧಾರವಾಡ, ಶರಣು ಗೊನವಾರ, ರಾಜ್ಯ ರೈತ ಸಂಘದ ರವಿರಾಜ ಕಾಂಬ್ಳೆ ಮುಂತಾದ ವಿವಿಧ ಕಾರ್ಮಿಕ, ರೈತ ಸಂಘದ ನಾಯಕರು ಸಭೆಯಲ್ಲಿ ಇದ್ದರು.