ಧಾರವಾಡ 23: ಸ್ಥಳೀಯ
ಅಂಜುಮನ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಕಾಲೇಜು, ಧಾರವಾಡದ ಭೂಗೋಳಶಾಸ್ತ್ರ 37ನೇ ವಾರ್ಷಿಕ ದಿನಾಚರಣೆ
ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾದ ಡಾ. ಬಾಳಪ್ಪ ಈರಪ್ಪ ಚಿನಗುಡಿ ಹಿರಿಯ ಸಾಹಿತಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಇವರು ವಿದ್ಯಾರ್ಥಿಗಳನ್ನು ಕುರಿತು ಮಾಾನಾಡಿ ಮಕ್ಕಳು ಮತ್ತು ಶಿಕ್ಷಕರು ಶಾಲೆ-ಕಾಲೇಜುಗಳನ್ನು ಕಾಯುವ ದೇವರು ಇದ್ದಂತೆ ಸಮಾಜದಲ್ಲಿ ವ್ಯಕ್ತಿಯ ಹುಟ್ಟು
ಕೊನೆಯವರೆಗೂ ನೆನಪಿನಲ್ಲಿ ಇರಬೇಕಾದರೆ ಗುರುತಿಸಿಕೊಳ್ಳುವ ಕಲೆ ಹೊಂದಿರುವವರಾಗಿರಬೇಕು ಹಾಗೂ ಬುದ್ಧನ ಮಾತಿನಂತೆ ವ್ಯಕ್ತಿಯ ಯೋಚನೆಗಳು ಸರಿಯಾಗಿದ್ದರೆ ಅದು ಫಲ ಅದು ತಪ್ಪು ಯೋಚನೆ ಆದರೆ ವಿಫಲ ಎನ್ನುವಂತೆ ವಿದ್ಯಾರ್ಥಿಗಳು ಸರಿಯಾದ ಯೋಚನೆ ಉಳ್ಳವರಾಗಿರಬೇಕು ಎಂದರು ,ಗಾಳಿ ಬೀಸುವ ಕಡೆ ದೋಣಿಸಾಗಿದರೆ ದಡ ಸೇರಲಾರದು , ಅಂಜುಮನ್ ಕಾಲೇಜಿನ ಸಪ್ತರ್ಷಿಗಳನ್ನು ನೆನೆಯುತ್ತಾ ವಿದ್ಯಾರ್ಥಿಗಳಿಗೆ ಆದರ್ಶ ಮಾತುಗಳನ್ನಾಡಿದರು.
ಹಾಗೂ ವಿದ್ಯಾರ್ಥಿಗಳು ತಮ್ಮ ಮೂರು ವರ್ಷ ಅನುಭವಗಳನ್ನು ವಿದ್ಯಾರ್ಥಿಗಳಾದ ರಮೇಶ್ ಹೂಗಾರ್, ನಿಖಿತಾ ಲಮಾಣಿ, ಮುಬಿನ್ ಹನಗಿ,. ಸೈಯದ್ ಸಭಾ ಹೇಳಿದರು ಅಧ್ಯಕ್ಷೀಯ ಭಾಷಣ ಡಾ. ಐ ಏ ಮುಲ್ಲಾ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೌಲ್ಯಗಳ ಜೊತೆಗೆ ತಂದೆ ತಾಯಿಯ ಸೇವೆಯನ್ನು ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ಕಾರ್ಯಕ್ರಮದಲ್ಲಿ ವಿಭಾಗದ ಅಂಜುಮ್ ಶೇಖ್, ಡಾಕ್ಟರ್ ಗಿರೀಶ್ ಚವಡಪ್ಪನವರ್ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಮಾರ ಮಾಜಿದ ರವರ ಕುರಾನ ಪಠಣ ದಿಂದ ಪ್ರಾರಂಭವಾಯಿತು ಕುಮಾರಿ ಅಕಸಾ ಮುಲ್ಲಾ ರವರು ಶ್ಲೋಕ ಹೇಳಿದರು ಹಾಗೂ ವಿಭಾಗದ ಮುಖ್ಯಸ್ಥ ಡಾಕ್ಟರ್ ಏನ್ ಬಿ ನಾಲತವಾಡ, ಅತಿಥಿ ಪರಿಚಯಿಸಿದರು ಕುಮಾರ ಯಾಸಿನ್ ಬುಕ್ಕಾಟಗಿ ನಿರೂಪಿಸಿದರು ಹಾಗೂ ಕುಮಾರಿ ಮುಬೀನ್ ಹಣಗಿ ವಂದಿಸಿದರು.