*ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ನ ಅಭೂತಪೂರ್ವ ಕಾರ್ಯಚರಣೆ ಮೆಚ್ಚಿ ಹೊಗಳಿದ ಡಿವಾಯಸ್ಪಿ ಗಣೇಶ ಕೆ ಎಲ್ ಮತ್ತು ಸಿಪಿಆಯ್ ಜೆ ಬಿ ಸೀತಾರಾಮ*
ನಿನ್ನೆ ಸಿದ್ದಾಪುರ ತಾಲೂಕಿನ ವಾಟೆಹಳ್ಳದಲ್ಲಿ ನಡೆದ ದುರ್ಘಟನೆಯಲ್ಲಿ ಸುಮಾರು 20 ಅಡಿ ಎತ್ತರದಿಂದ ಕಾಲು ಜಾರಿ ನೀರಿನ ಗುಂಡಿಗೆ ಬಿದ್ದು ಮೃತಪಟ್ಟ ಈರ್ವರ ಶವವನ್ನು ಹುಡುಕಾಡಿ ಮೇಲಕ್ಕೆತ್ತಿದೆ ಯಶೋಗಾತೆ ಇದು.ಇದನ್ನು ಕಡುಕತ್ತಲ ಕಾಡಿನ ಮದ್ಯದಲ್ಲಿರುವ ವಾಟೆಹಳ್ಳದಲ್ಲಿ ಬ್ಯಾಟರಿ ಸಹಾಯದಿಂದ ಶವವನ್ನು ಹುಡುಕಿದರಲ್ಲದೆ ಆ ಶವವನ್ನು ಮತ್ತೆ 20 ಅಡಿ ಎತ್ತರಕ್ಕೆ ಎರಿ ಎರುತ್ತ ಸಾಗಿ ವಾಹನದವರೆಗೂ ತಲುಪಿಸಿದ ಸಾಹಸಿಗರು ಶ್ರೀ ಮಾರಿಕಾಂಬಾ ಹೆಲ್ಫ ಗಾರ್ಡ್ ತಂಡದ ಗೋಪಾಲ ನಾರಾಯಣ ಗೌಡಾ ಹಿರೆಕಳವೆ,ತಿರುಮಲ
ಮಡಿವಾಳ,ನಾಗೇಶ ಕಬ್ಬೆ,ಅನಂತ ಹನುಮಂತಿ,ವಸಂತ ಲಂಬಾಣಿ ಹಾಗು ಮಣಿಕಂಠ ಮಡಿವಾಳ.ಇವರು ಯಾವುದೇ ಆಧುನಿಕ ಸಾಧನ ಇಲ್ಲದೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮೃತ ದೇಹವನ್ನು ತೆಗೆದು ಪೋಲಿಸರಿಗೆ ಒಪ್ಪಿಸಿದ್ದಾರೆ.ಆದರೆ ಸುದ್ದಿಯಲ್ಲಿ ಇಂತಹ ಪುಣ್ಯದ ಕೆಲಸಮಾಡಿದರು ಹೈಲೆಟ್ ಆಗುವದಿಲ್ಲ ಎನ್ನುವುದೇ ಅತ್ಯಂತ ಬೇಸರದ ಸಂಗತಿಯಾಗಿದೆ.ನಿಜಕ್ಕೂ ಇಂತವರಿಗೆ ಪ್ರೋತ್ಸಾಹ ನೀಡಿದರೆ ಇವರಿಂದ ಇನ್ನಷ್ಟು ಇಜು ತಜ್ಚರು ಮುಳುಗು ತಜ್ಷರು ಬರುತ್ತಾರೆ.ಶಿರಸಿಯಲ್ಲಿ ಬಹಳಷ್ಟು ದಾನಿಗಳಿದ್ದಾರೆ.ಇವರೆಲ್ಲರೂ ಮಾರಿಕಾಂಬಾ ಹೆಲ್ಪ್ ಲೈನ್ ತಂಡವನ್ನು ಒಮ್ಮೆ ಕಣ್ಣೆತ್ತಿ ನೋಡಿ ಪೋಷಿಸುವಂತಾಗಲೆನ್ನುವುದೇ ನಮ್ಮ ಆಶಯವಾಗಿದೆ.