9 ರಂದು ಹೆಬ್ಬಳ್ಳಿ ವೈಭವ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ.
ಧಾರವಾಡ 06 :
ಕನ್ನಡಾಂಬೆ ಉತ್ಸವ ಸಮಿತಿ ಹೆಬ್ಬಳ್ಳಿ 09 ರಂದು ರವಿವಾರ ಬೆಳಿಗ್ಗೆ 10,30 ಗಂಟೆಗೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಹಳೆಯ ಬಸ್ ನಿಲ್ದಾಣದ ಭವ್ಯ ಹೊರಾಂಗಣದಲ್ಲಿ, ಹೆಬ್ಬಳ್ಳಿ ವೈಭವ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 2024 ನೆಯ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ, 125 ಕ್ಕೆ 125 ಅಂಕ ಗಳಿಸಿದ, ಧಾರವಾಡ ಜಿಲ್ಲೆಯ ಪ್ರತಿಭೆಗಳಿಗೆ ಹಾಗೂ ಆ ಪ್ರತಿಭೆಗಳನ್ನು ತಯಾರು ಮಾಡಿದ ಶಿಕ್ಷಕ-ಶಿಕ್ಷಕಿಯರಿಗೆ ಗೌರವ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿದೆ,ಎಂದು ಕನ್ನಡಾಂಬೆ ಉತ್ಸವ ಸಮಿತಿಯ ಅಧ್ಯಕ್ಷರಾದ ಸಂತೋಷ ಭಾವಿಕಟ್ಟಿ ಧಾರವಾಡದ ಜರ್ನಲಿಸ್ಟ ಗಿಲ್ಡನಲ್ಲಿ, ಗುರುವಾರ ಜರುಗಿದ ಮಾಧ್ಯಮ ಗೋಷ್ಠಿಯಲ್ಲಿ ತಿಳಸಿದರು. ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಹೆಬ್ಬಳ್ಳಿ ಗ್ರಾಮದ ಪರಮಪೂಜ್ಯ ಶ್ರೀ ಗುರು ದತ್ತಾವಧೂತ ಮಹಾರಾಜರು ಶ್ರೀ ಬ್ರಹ್ಮಚೈತನ್ಯಾಶ್ರಮ ಇವರು ಹಾಗೂ ಉಪ್ಪಿನಬೆಟಗೇರಿ ಗ್ರಾಮದ ಮೂರುಸಾವಿರ ವಿರಕ್ತಮಠದ ಪರಮಪೂಜ್ಯ ಶ್ರೀ ಗುರು ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ವಹಿಸಲಿದ್ದು, ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ
ಹೊರಟ್ಟಿಯವರ ಘನ ಉಪಸ್ಥಿತಿಯಲ್ಲಿ ಜರುಗಲಿರುವ, ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಉದ್ಘಾಟಿಸುವರು, ಧಾರವಾಡ ಗ್ರಾಮೀಣ ಶಾಸಕರಾದ ವಿನಯ ಕುಲಕರ್ಣಿ ಜ್ಯೋತಿ ಬೆಳಗಿಸುವರು. ಶಿಕ್ಷಕರಿಗೆ ಗೌರವ ಸನ್ಮಾನವನ್ನು ಅಖಿಲ ಭಾರತ ಶಿಕ್ಷಕರ ಪೆಡರೇಶನ್ ನವದೆಹಲಿಯ ರಾಷ್ಟ್ರೀಯ ಅಧ್ಯರಾದ ಬಸವರಾಜ ಗುರಿಕಾರ ನೆರವೇರಿಸಲಿದ್ದು, ಧಾರವಾಡದ ಸಮಾಜಸೇವಕ ಮಂಜುನಾಥ ಮಕ್ಕಳಗೇರಿ, ಹುಬ್ಬಳ್ಳಿಯ ಮತ್ತೊಬ್ಬ ಸಮಾಜಸೇವಕರು ಡಾ, ವಿ ಎಸ್ ವಿ ಪ್ರಸಾದ ಪ್ರತಿಭಾವಂತ ಮಕ್ಕಳಿಗೆ ಗೌರವ ಪುರಸ್ಕಾರ ನೆರವೇರಿಸುವರು, ಎಂದು ಭಾವಿಕಟ್ಟಿ ತಿಳಿಸಿದರು, ಸಮಿತಿಯ ಕಾರ್ಯಾಧ್ಯಕ್ಷರಾದ ಶಿವಾನಂದ ಹೂಗಾರ ಮಾತನಾಡಿ, ಶಾಸಕರಾದ ಎನ್ ಎಚ್ ಕೋನರಡ್ಡಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಎಂ ಆರ್ ಪಾಟೀಲ, ಮಹೇಶ ಟೆಂಗಿನಕಾಯಿ ಮುಂತಾದವರು ಆಗಮಿಸುವರು ಎಂದರು, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಭಜಂತ್ರಿ ಮಾತನಾಡಿ ಈ ಕಾರ್ಯಕ್ರಮ ಬೆಳಗಿನ ಸಮಯದಲ್ಲಿ ಉದ್ಘಾಟಿಸಿ,ಪ್ರತಿಭಾವಂತ ಆ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಗೌರವಿಸಿ ಸತ್ಕರಿಸಲಾಗುವುದು. ಊಟದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ಭೀಮಕ್ಕನವರ ನಮ್ಮ ಗ್ರಾಮದಲ್ಲಿ ಪ್ರತಿವರ್ಷ ಹೆಬ್ಬಳ್ಳಿ ಉತ್ಸವವನ್ನು ಎಲ್ಲರೂ ಸೇರಿ ಮಾಡುತ್ತೇವೆ, ಈ ವರ್ಷ ಕನ್ನಡಾಂಬೆ ಉತ್ಸವದ ಜೊತೆಗೆ, ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ, ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ,ಖ್ಯಾತ ಹಾಸ್ಯ ಕಲಾವಿದ ಮಲ್ಲಪ್ಪ ಹೊಂಗಲ ಖ್ಯಾತ ಬಾಲಭಾಷಣಕಾರ್ತಿ ಅನುಷಾ ಹಿರೇಮಠ, ಉಧೋ ಉಧೋ ಯಲ್ಲಮ್ಮ ಧಾರಾವಾಹಿಯಲ್ಲಿ ಪಾತ್ರ ಮಾಡಿ ಜನರ ಮೆಚ್ಚುಗೆಯನ್ನು ಗಳಿಸಿದ ಬೆಂಗಳೂರಿನ ಭೈರವಿ, ಖ್ಯಾತ ಗಾಯಕಿಯರಾದ ಪ್ರೀತಿ ದೊಡಮನಿ,ವಿದ್ಯಾ ದೇವಗಿರಿ, ಕೊರವಂಜಿ ನೃತ್ಯ ಮಾಡುವ ಹುಬ್ಬಳ್ಳಿಯ ಅಂಜಲಿ ಬಸವ ಹುಬ್ಬಳ್ಳಿಯ ಭರತನಾಟ್ಯ ಪ್ರವೀಣೆ ರಷ್ಮಿ ಪವಾರ. ಸಿದ್ಧಾರೂಢ ಹೂಗಾರ ನೇತ್ರತ್ವದ ಮಲ್ಲಗಂಬ ತಂಡ ಸೇರಿದಂತೆ ಇನ್ನೂ ಅನೇಕ ಕಾರ್ಯಕ್ರಮಗಳು ಜರುಗಲಿದ್ದು, ನಮ್ಮ ಊರಿನ ಗ್ರಾಮ ಪಂಚಾಯತಿಯ 32 ಜನ ಸದಸ್ಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವರು ಎಂದರು, ಪಂಚಾಯತ ಸದಸ್ಯ ಮಂಜುನಾಥ ವಾಸಂಬಿ, ಸಂತೋಷ ಭಾವಿಕಟ್ಟಿ, ರಾಮಚಂದ್ರ ಭಜಂತ್ರಿ, ಶಿವಾನಂದ ಹೂಗಾರ ನಾಗಪ್ಪ ಬನಪ್ಪನವರ, ಮಲ್ಲಿಕಾರ್ಜುನ ನಿಂಗಪ್ಪ ಧಾರವಾಡ, ಸಂಜೀವಕುಮಾರ ಪ್ರಕಾಶ ಹಡಪದ ಮಾಧ್ಯಮ ಗೋಷ್ಠಿಯಲ್ಲಿ ಇದ್ದರು.