DHARWAD: ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಯಾದ ಹಿನ್ನೆಲೆಯಲ್ಲಿ, ಧಾರವಾಡ ಜನತೆಯ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ನಡೆ ಖಂಡನೀಯ

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಘೋಷಣೆಯಾದ ಹಿನ್ನೆಲೆಯಲ್ಲಿ, ಧಾರವಾಡ ಜನತೆಯ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ ನಡೆ ಖಂಡನೀಯ .

ಧಾರವಾಡ  08 :
ಬಿಜೆಪಿ ಜನಪ್ರತಿನಿದಿಗಳ ಇಚ್ಚಾಶಕ್ತಿ ಕೊರತೆಯ ಕಾರಣದಿಂದ ಮರೀಚಿಕೆಯಾಗಿಯೇ ಉಳಿದಿದ್ದ ಧಾರವಾಡ ಪ್ರತ್ಯೇಕ ಪಾಲಿಕೆಯ ಘೋಷನೆಯಾಗಲು ಶಾಸಕ ವಿನಯ ಕುಲಕರ್ಣಿಯವರ ಛಲಬಿಡದ ಪ್ರಯತ್ನ ಹಾಗೂ ಉಸ್ತುವಾರಿ ಸಚಿವರಾದ  ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಹಾಗೂ ಶಾಸಕ ಎನ್ ಎಚ್ ಕೊಣರಡ್ಡಿಯವರ ಸಹಕಾರದಿಂದ  ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ ನವರು, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ರವರು ಧಾರವಾಡದ ಜನತೆಯ ಬೇಡಿಕೆಯನ್ನು ಈಡೇರಿಸಿದ್ದು ಶ್ಲಾಘನೀಯ. ಎಂದು ಅರವಿಂದ ಎಗನಗೌಡರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು

ಆದರೆ ಕೇಂದ್ರ ಸಚಿವರಾದ ಪ್ರಲ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದವರು ಧಾರವಾಡ ಜನತೆಯ ದಿಕ್ಕು ತಪ್ಪಿಸುವ ಸಲುವಾಗಿ ಬ್ಯಾನರಗಳನ್ನು ಅಳವಡಿಸಿಕೊಂಡಿದ್ದು ನೋಡಿದರೆ, ಧಾರವಾಡದ ಜನತೆ ಮುಸಿ ಮುಸಿ ನಗುತ್ತಿದ್ದಾರೆ. ತಮ್ಮ ಸರಕಾರ ಇದ್ದಾಗ ಮಾಡದವರು, ಕಾಂಗ್ರೆಸ್ ಸರಕಾರದ ಆದೇಶವನ್ನು ನಾವು ಮಾಡಿದ್ದೇವೆ ಎಂದು ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುತ್ತಿರುವದನ್ನು ನೋಡಿದರೆ ಪಾಪ ಎನಿಸುತ್ತಿದೆ ಎಂದರು.