ಬೃಹತ್ ಉದ್ಯೋಗ ಮೇಳ 24
ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು-ಸುಹಾಸ ರಜಪೂತ .
ನಗರದ ಪ್ರತಿಷ್ಠಿತ ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಶ್ರೀಮತಿ ಕಲ್ಲವ್ವ ಶಿವಪ್ಪಣ್ಣ ಜಗಳೂರ ಕಲಾ ಹಾಗೂ (ಶ್ರೀಮತಿ) ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಧಾರವಾಡದಲ್ಲಿ ದಿ 09 ರಂದು “ಉದ್ಯೋಗ ಮೇಳ 24" ಉದ್ಯೋಗ ಮೇಳವನ್ನು ಉದ್ಯೋಗ ಆಕಾಂಕ್ಷಿಗಳಿಗೆ ಅನುಕೂಲ ಕಲ್ಪಸುವ ನಿಟ್ಟಿನಲ್ಲಿ ಮಹಾವಿದ್ಯಾಲಯದ ಅವರಣದಲ್ಲಿ ಆಯೋಜಿಸಲಾಗಿತ್ತು. ಈ ಮೇಳದಲ್ಲಿ ಅನೇಕ ಖಾಸಗಿ ಕಂಪನಿಗಳಾದ ಸಿಐಇ ಅಟೋ , ಟಿಡಿಪಿಎಸ್, ಇನ್ ಫೈನಾಯಿಟ ಎಚ್ ಆರ್ , ಕ್ರೀಂಟೂರಸ್ ಅಟೋಮೇಷನ್ ಆಂಡ್ ಟೆಕ್ನೋಮ್ಯಾನ್ ಮಾಣಿಕಬಾಗ ಭಾಗವಹಿಸಿದ್ದವು. ಈ ಸಂದರ್ಭದಲ್ಲಿ ಸಂದರ್ಶನಕ್ಕೆ ಬಂದ ಸುಮಾರು 280-300 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಸಂತೋಷವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಎಚ್ ಆರ್ ಪ್ರೂಫಿಸೆಂಟ ಮೈಂಡಸ್ ಸುಹಾಸ ರಜಪೂತ ಇವರು ಆಗಮಿಸಿದ್ದರು. ವಿದ್ಯಾರ್ಥಿಗಳು ಬಹುಮುಖ ಕೌಶಲ್ಯಗಳನ್ನು ಬೆಳಸಿಕೊಳ್ಳುವುದರಿಂದ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಇಂತಹ ಸ್ಪರ್ಧಾವೇದಿಕೆಗಳಲ್ಲಿ ಹಲವಾರು ಅವಕಾಶಗಳದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳ ಎಂದು ವಿದ್ಯಾರ್ಥಿಗಳಿಗೆ ಅವಶ್ಯಕ ಮಾಹಿತಿಯನ್ನು ನೀಡಿದರು. ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ, ಗೌರವ ಕಾರ್ಯದರ್ಶಿ ದಯಾನಂದ ಎಂ. ಬಂಡಿ ಇವರು ಅಧ್ಯಕ್ಷ ಸ್ಥಾನವನ್ನು ವಹಿಸಿದ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು, ಧೈರ್ಯಶಾಸ್ತ್ರಗಳಾಗಿ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಉತ್ತಮ ಗುಣ, ಚಾರಿತ್ರ್ಯ ನಿರ್ಮಾಣದೆಡೆಗೆ ಗಮನ ಹರಿಸಬೇಕು. ಕಲತ ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತರಬೇಕು ಎಂದು ಕಿವಿಮಾತು ಹೇಳಿದರು. ಈ ಉದ್ಘಾಟನಾ ಸಮಾರಂಭವನ್ನು ಮಹಾವಿದ್ಯಾಲಯದ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಸಸಿಗಳಿಗೆ ನೀರು ಹಾಕುವುದರ ಮೂಲಕ ಉದ್ಯೋಗ ಮೇಳವನ್ನು ಅತಿಥಿಗಳಿಂದ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ, ಸದಸ್ಯರಾದ ಡಾ. ನಿರ್ಮಲಾ ಹಿರೇಗೌಡರ, ಆಡಳಿತಾಧಿಕಾರಿಗಳಾದ ಎಸ್. ಕೆ. ಹೊಸಂಗಡಿ, ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಅನಿತಾ ಜಿ. ಕಡಪಟ್ಟಿ ಹಾಗೂ ಪ್ರೊ. ಶಾಂತಾ ಎಸ್. ಪಾಟೀಲಕುಲಕರ್ಣಿ, ವಿದ್ಯಾರ್ಥಿ ಒಕ್ಕೂಟದ ಉಪಾಧ್ಯಾಕ್ಷರಾದ ಡಾ. ಅಶ್ವಿನಿ ಎಸ್. ಪಾಟೀಲ ಮತ್ತು ಅನೇಕ ಖಾಸಗಿ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು, ದೈಹಿಕ ಶಿಕ್ಷಕರಾದ ಶಕುಂತಲಾ ಎಸ್. ಚಿರಾದಾರ, ಎಲ್ಲ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ. ರಾಜೇಶ್ವರಿ ಎಂ. ಶೆಟ್ಟರ ಎಲ್ಲರನ್ನು ಸ್ವಾಗತಿಸಿದರು. ಉದ್ಯೋಗ ಮೇಳವನ್ನು ಆಯೋಜಿಸಿದ ಡಾ. ದತ್ತ ಕಾಮಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಅನಿತಾ ಜಿ. ಕಡಪಟ್ಟ ಇವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.ಡಾ. ಅಶ್ವಿನಿ ಎಸ್. ಪಾಟೀಲ ವಂದನಾರ್ಪಣೆಯನ್ನು ಮಾಡಿದರು.