DHARWAD: ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಲು ಎಲ್ಲರೂ ಮುಂದಾಗಬೇಕು - ಪರಿಸರವಾದಿ ಸುರೇಶ ಹೆಬ್ಳೀಕರ್.

ಪಶ್ಚಿಮ ಘಟ್ಟಗಳನ್ನು     ಸಂರಕ್ಷಿಸಲು ಎಲ್ಲರೂ ಮುಂದಾಗಬೇಕು -  ಪರಿಸರವಾದಿ ಸುರೇಶ ಹೆಬ್ಳೀಕರ್.      
ಧಾರವಾಡ 09 :          
ಕರ್ನಾಟಕದ ಪಶ್ಚಿಮ ಘಟ್ಟಗಳು ವೈಶಿಷ್ಟ್ಯವಾದ ಜೀವ ವೈವಿಧ್ಯತೆಯನ್ನು ಹೊಂದಿದ್ದು, ಪರಿಸರವನ್ನು ಸಂರಕ್ಷಿಸಲು ಎಲ್ಲರೂ ಮುಂದಾಗಬೇಕು ಎಂದು ಚಿತ್ರನಟ, ಪರಿಸರವಾದಿ ಸುರೇಶ ಹೆಬ್ಳೀಕರ್ ಅಭಿಪ್ರಾಯಪಟ್ಟರು. 

ಅವರು ಮಂಗಳವಾರದಂದು ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗ ಮತ್ತು ಕವಿವಿ ಎನ್.ಎಸ್.ಎಸ್ ಕೋಶದ, ಧಾರವಾಡ ಪರಿಸರಕ್ಕಾಗಿ ನಾವು ಸಂಘಟನೆ ಸಹಯೋಗದಲ್ಲಿ ಸಹಯೋಗದಲ್ಲಿ ಕವಿವಿ‌ ಸೆನೆಟ್ ಸಭಾಂಗಣದಲ್ಲಿ ಆಯೋಜಿಸಿದ 'ಸಮಕಾಲೀನ ಬಿಕ್ಕಟ್ಟಿನ ಸಂದರ್ಭದಲ್ಲಿ ಗಾಂಧಿ ಚಿಂತನೆ' ಎಂಬ ವಿಷಯದ ಕುರಿತು ರಾಜ್ಯ ಮಟ್ಟದ‌ ವಿಚಾರ ಸಂಕಿರಣದ 'ಪ್ರಸಕ್ತ ಪರಿಸರದ ಬಿಕ್ಕಟುಗಳು: ಗಾಂಧೀಜಿ ಅವರ ಸಮಕಾಲೀನ ದೃಷ್ಟಿಕೋನ' ಎಂಬ ವಿಷಯದ ಕುರಿತು ತಾಂತ್ರಿಕ ಗೋಷ್ಠಿಯಲ್ಲಿ ‌ಮಾತನಾಡಿದರು.

ರಾಣೆಬೆನ್ನೂರಿನಿಂದ ಬೆಳಗಾವಿ ಮೂಲಕ ಹರಡಿರುವ ಪಶ್ಚಿಮ ಘಟ್ಟಗಳ ಕುರುಚಲು ಕಾಡು ಜಲ ಮೂಲ‌ ಮತ್ತು ಅನೇಕ ಔಷಧೀಯ ಸಸ್ಯ ಮತ್ತು ಹುಲ್ಲುಗಾವಲು ಪ್ರದೇಶ, ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ ಎಂದ ಅವರು ಮಾನವ ಅಪರಿಮಿತ ಅಸೆಗಳಿಂದ ಹೆಚ್ಚುತ್ತಿರುವ ಕೈಗಾರಿಕೆಗಳಿಂದ ಪರಿಸರದ ಮೇಲೆ ಅಗಾಧ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದರು. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಅಲ್ಲ. ಸಮರ್ಪಕವಾದ ಯೋಜನೆ ಮೂಲಕ ಸರಕಾರಗಳು ಜೀವ ಸಂಕುಲದ ಕಾಪಾಡುವ ಹೊಣೆ ಇಂದಿನ ಯುವ ಸಮುದಾಯದ ಮೇಲೆ ಇದೆ ಎಂದರು. ಯುದ್ದಗಳು ಕೂಡ ಪರಿಸರದ ಮೇಲೆ ತೀವ್ರವಾದ ಪ್ರಭಾವ ಬೀರುತ್ತದೆ. ಬ್ರಿಟಿಷರು ತಮ್ಮ ಕಾಲಘಟ್ಟದಲ್ಲೇ ಪಶ್ಚಿಮ ಘಟ್ಟಗಳ ನಾಶಕ್ಕೆ ಮುಂದಾಗಿದ್ದರು ಎಂದರು.

ಕಪ್ಪತಗುಡ್ಡದ ನಂದೀವೇರಿ ಸಂಸ್ಥಾನಮಠದ  ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಪರಿಸರ ಸಂರಕ್ಷಣೆ ಮತ್ತು ಗಾಂಧಿ ಮಾರ್ಗ ಎಂಬ ವಿಷಯದ ಕುರಿತುಮಾತನಾಡಿ.2009 ರಲ್ಲಿ ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ತಡೆಯುವಲ್ಲಿ ಅಲ್ಲಿನ ಸ್ಥಳೀಯ ಜನರ ಜೊತೆಗೆ ಕೂಡಿ ಯಶಸ್ಸು ಕಂಡಿದ್ದು ಕಪ್ಪತಗುಡ್ಡ ಒಂದು ಸಂರಕ್ಷಿತ ಅರಣ್ಯ ಪ್ರದೇಶದವಾಗಿದ್ದು, ಅನೇಕ ವಿವಿಧ ರೀತಿಯ ಔಷಧೀಯ ಸಸ್ಯಗಳನ್ನು ಒಳಗೊಂಡಿದೆ. ಇಂದಿನ ಯುವ ಸಮುದಾಯಕ್ಕೆ ಪರಿಸರ ಮತ್ತು ಜೀವವೈವಿಧ್ಯತೆ ಕುರಿತು ಅರಿವು ಮೂಡಿಸಬೇಕಾದ ಕಾರ್ಯ ಆಗಬೇಕು ಎಂದ ಅವರು ಊರು ಕಟ್ಟುವ ಕೆಲಸ ಆಗಬೇಕು. ಯುವಶಕ್ತಿಯ ಚಳುವಳಿ ಮೂಲಕ ಮನುಕುಲದ ಒಳಿತಿಗಾಗಿ ಎಲ್ಲರೂ ಕೂಡಿಕೊಂಡು ಪರಿಸರ ಜೀವ ವೈವಿಧ್ಯತೆಯನ್ನು ಕಾಪಾಡುವ  ಕೆಲಸ ಮಾಡುವ ಅವಶ್ಯಕತೆ ಇದೆ ಎಂದರು. 

ಕಾರ್ಯಕ್ರಮವನ್ನು ಕವಿವಿ ಪ್ರಭಾರ ಕುಲಪತಿ ‌ಪ್ರೊ.ಬಿ.ಎಮ್.ಪಾಟೀಲ ಉದ್ಘಾಟಿಸಿ ಮಾತನಾಡಿದ ಅವರು ಪ್ರಸ್ತುತ ಹವಾಮಾನ ಬದಲಾವಣೆ ಆಗುತ್ತಿರುವ ಸಂದರ್ಭದಲ್ಲಿ ಸ್ಥಿರವಾದ ಹವಾಮಾನವನ್ನು ಕಾಪಾಡಲು ಪರಿಸರದ ರಕ್ಷಣೆ ಅಗತ್ಯವಾಗಿದೆ ಎಂದ ಅವರು ಇಂದಿನ ಯುವಕರ ಪರಿಸರವನ್ನು ಸಂರಕ್ಷಿಸುವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. 

ಪರಿಸರ ತಜ್ಞ, ಪತ್ರಕರ್ತ ಹರ್ಷವರ್ಧನ ಶೀಲವಂತ ಮಾತನಾಡಿ ಇಕೊ ವಿಲೇಜ್ ನ ಸಹಯೋಗದಲ್ಲಿ ಇಕೊ ಎಜ್ಯುಕೇಶನ್ ಪಾರ್ಕ್ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಯುವ ಸಮುದಾಯಕ್ಕೆ ಪರಿಸರದ ಮಹತ್ವವನ್ನು ತಿಳಿಸುವ ಪ್ರಕ್ರಿಯೆಯನ್ನು ಇಕೊ ವಿಲೇಜ್ ನಿಂದ ಮಾಡಲಾಗುತ್ತಿದೆ ಎಂದ ಅವರು ಇಂದು ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅಗತ್ಯವಿದೆ. ಅಳಿವಿನ ಅಂಚಿನಲ್ಲಿರುವ ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು ಅಗತ್ಯವಾಗಿದೆ ಎಂದ ಅವರು ಇಂದು ವಿದ್ಯಾರ್ಥಿಗಳಿಗೆ ಮತ್ತು ಯುವ ಸಮುದಾಯಕ್ಕೆ ಪರಿಸರ ಸಂರಕ್ಷಣೆ ಮಾಡುವಲ್ಲಿನ ಮಾರ್ಗದರ್ಶನ ನೀಡುವುದು ಸೂಕ್ತವಾಗಿದೆ ಎಂದರು.

ಬೆಂಗಳೂರಿನ ಐಸೆಕ್ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಗೋಪಾಲ ಕಡೆಕೋಡಿ ಮಾತನಾಡಿ ಮಹಾತ್ಮ ಗಾಂಧಿಯವರ ತತ್ವಗಳಲ್ಲಿ ಪರಿಸರ ಕಾಳಜಿಯನ್ನು ಕಾಣುತ್ತವೆ. ಗಾಂಧಿಯವರು ಪರಿಸರದ ಉಳಿವಿಗಾಗಿ ಅನೇಕ ಕ್ರಮಗಳನ್ನು ಆಗಿನ ಸಮಯದಲ್ಲಿ ಚಳುವಳಿ ಮೂಲಕ‌ ಕೈಗೊಂಡಿದ್ದರು ಎಂದರು.

ಗಾಂಧೀಜಿ ಜನ್ಮದಿನಾರಣೆಯ ಅಂಗವಾಗಿ ಆಯೋಜಿಸಿದ ಅಂತರ ಕಾಲೇಜು ಸಿದ್ದ ಭಾಷಣ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನವನ್ನು ಪೂರ್ವಿ.ಜೆ, ದ್ವೀತಿಯ ಪೂಜಾ ಚವ್ಹಾನ, ಶಿವಾನಂದ ತೇಗೂರ ಮತ್ತು ಮೂರನೇ ವಿಜೇತ ಅರ್ಚನಾ ವೆಂಕಟೇಶ ಜಯಗಳಿಸಿದವರು

ಕಾರ್ಯಕ್ರಮದಲ್ಲಿ ಡಾ.ಶಿವಾನಂದ ಶೆಟ್ಟಿರ, ಭಾಲಚಂದ್ರ ಜಾಬಶೆಟ್ಟಿ, ಡಾ.ಎಂ.ಬಿ.ದಳಪತಿ, ಡಾ.ಎಸ್.ಬಿ.ಬಶೆಟ್ಟಿ, ಗಂಗಯ್ಯ ಗುಡ್ಡದಮಠ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರು ವಿಚಾರ ಸಂಕಿರಣದಲ್ಲಿ ಹಾಜರಿದ್ದರು.

 ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಕವಿವಿ ಪ್ರಭಾರ ಕುಲಪತಿ ಡಾ.ಬಿ.ಎಮ್.ಪಾಟೀಲ ಉದ್ಘಾಟಿಸಿದರು.
ನವೀನ ಹಳೆಯದು

نموذج الاتصال