DHARWAD:ಲಾರಿ --- ಆಟೋ ಮಧ್ಯೆ ಡಿಕ್ಕಿ- ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಲಾರಿ --- ಆಟೋ ಮಧ್ಯೆ ಡಿಕ್ಕಿ- ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು 
    ಧಾರವಾಡ 20 : ಲಾರಿ ಮತ್ತು ಆಟೋ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವಿಗೀಡಾದ ಘಟನೆ ಧಾರವಾಡದ ಸಂಪಿಗೆನಗರದ ಬಳಿ  ಇಂದು ಬೆಳಗಿನ ಜಾವ ಸಂಭವಿಸಿದೆ .

 ಆಟೋ ಚಾಲಕ ರಮೇಶ ಹಂಚಿನಮನಿ ( 35 ) ಹಾಗೂ ಮರೆವ್ವ ಹಂಚಿನಮನಿ ( 55 ) ಎಂಬುವವರೇ ಈ ಅಪಘಾತದಲ್ಲಿ ಸಾವಿಗೀಡಾದ ದುರ್ದೈವಿಗಳು ಎಂದು ಗುರುತಿಸಲಾಗಿದೆ.

  ಇನ್ನೂ  ಆಟೋದಲ್ಲಿದ್ದ ರೇಣುಕಾ , ಪ್ರಣವ್ ಮತ್ತು ಪೃಥ್ವಿ ಎಂಬುವವರು ಈ ಘಟನೆಯಲ್ಲಿ ಗಾಯಗೊಂಡಿದ್ದು , ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ .
     ಪ್ರಯಾಣಿಕರನ್ನು ಬೆಳಗಿನ ಜಾವ ಇಂಟರ ಸಿಟಿ ರೈಲಿನಿಂದ ಉರಿಗೆ ಹೂಗಲು ಧಾರವಾಡ ರೈಲು ನಿಲ್ದಾಣಕ್ಕೆ ಬಿಟ್ಟು ಬರಲು ಆಟೋ ಚಾಲಕ ಹೊರಟಿದ್ದ . ಈ ವೇಳೆ ಲಾರಿ ರಸ್ತೆಯಲ್ಲಿ ಅಡ್ಡಲಾಗಿ ಮಲಗಿದ್ದ ದನವನ್ನು ತಪ್ಪಿಸಲು ಹೋಗಿ   ಡಿಕ್ಕಿ ಹೊಡೆದಿದ್ದು , ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ . ಘಟನಾ ಸ್ಥಳಕ್ಕೆ ಧಾರವಾಡ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ನವೀನ ಹಳೆಯದು

نموذج الاتصال