DHARWAD:ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳನ ಬಂಧನ 12 ವಾಹನ ,ನಗದು ವಷ.

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರಿಂದ ದ್ವಿಚಕ್ರ ವಾಹನ ಕಳ್ಳನ ಬಂಧನ 12 ವಾಹನ ,ನಗದು ವಷ.
ಧಾರವಾಡ :
ಇತ್ತೀಚೆಗೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನವಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿದ್ದು, ಸದರಿ ಕಳ್ಳತನ ಪ್ರಕರಣವನ್ನು ಭೇದಿಸಲು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್‌ನ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಪನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್ ಪೆಕ್ಟರ ಎಮ್.ಎಸ್.ಹೂಗಾರ ಅವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.

ಸದರಿ ತಂಡವು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಿದ ತಂಡವು, ಬೈಕ್ ಕಳ್ಳತನ ಮಾಡಿದ್ದ ಹುಬ್ಬಳ್ಳಿಯ ಆನಂದ ನಗರದ ಮಹಾಂತೇಶ ಕಲಾಲ ಎಂಬ ಆರೋಪಿತನನ್ನು ಬಂಧಿಸಿದ್ದು, ಬಂಧಿತ ಆರೋಪಿತನಿಂದ ಕಳ್ಳತನವಾಗಿದ್ದ ಬೈಕ್‌ ವಶಪಡಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆ ವೇಳೆ ಇದೇ ಆರೋಪಿತನು ಮತ್ತಷ್ಟು ಬೈಕ್‌ಗಳನ್ನು ಕಳ್ಳತನ ಮಾಡಿದ್ದರ ಬಗ್ಗೆ ತಿಳಿದುಬಂದಿದ್ದು, ಕಳ್ಳತನವಾಗಿದ್ದ 5,80,000/- ರೂ ಮೌಲ್ಯದ ವಿವಿಧ ಕಂಪನಿಗಳ 12 ಬೈಕ್‌ಗಳು ಮತ್ತು 1,10,000/- ರೂ ನಗದು ಸೇರಿದಂತೆ ಒಟ್ಟು 6,90,000/-ರೂ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಂಡು, ಆರೋಪಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಈ ಪ್ರಕರಣದ ಕಾರ್ಯಾಚರಣೆಯಲ್ಲಿ ವಿಶೇಷ ಕರ್ತವ್ಯವನ್ನು ನಿರ್ವಹಿಸಿದ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟ‌ರ್ ಎಮ್.ಎಸ್.ಹೂಗಾರ, ಪಿ.ಎಸ್.ಐ ರವರುಗಳಾದ ದೇವಿಂದ್ರ ಮಾವಿನಂಡಿ, ಮಲ್ಲಿಕಾರ್ಜುನ ಹೊಸೂರ ಮತ್ತು ಸಿಬ್ಬಂದಿ ಗೂಳೇಶ ಎಚ್.ಎಮ್, ಎಸ್.ವಿ ಯರಗುಪ್ಪಿ, ನಾಗರಾಜ ಗುಡಿಮನಿ, ಪಿ.ಎಲ್ ಗೋವಿಂದಪ್ಪನವರ, ಪ್ರಕಾಶ ಕಲಗುಡಿ, ಎಮ್.ಎಚ್ ಹಾಲವರ, ಎಸ್.ಬಿ. ಯಳವತ್ತಿ, ಡಿ.ಆರ್ ಪಮ್ಮಾರ, ಎ.ಎಚ್ ಡೊಳ್ಳಿನ, ಟಿ.ವೈ.ಗಡ್ಡದವರ, ನೆಹರೂ ಲಮಾಣಿ, ಆರ್.ಎಚ್ ಸಿಕ್ಕಲಗೇರಿ. ಜ್ಞಾನೇಶ್ವರ ಮಾಂಗ ರವರನ್ನೊಳಗೊಂಡ ತಂಡದ ಕಾರ್ಯವೈಖರಿಯನ್ನು ಮಾನ್ಯ ಪೋಲಿಸ್ ಆಯುಕ್ತರು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ

ನವೀನ ಹಳೆಯದು