ಹೆಗ್ಗೇರಿ ಗ್ರಾಮದಲ್ಲಿ ಬಾರ್ ತೆರೆಯಲು ವಿರೋಧಿಸಿ ಗ್ರಾಮದ ಮಹಿಳೆಯರಿಂದ ಪ್ರತಿಭಟನೆ.

ಹೆಗ್ಗೇರಿ ಗ್ರಾಮದಲ್ಲಿ ಬಾರ್ ತೆರೆಯಲು ವಿರೋಧಿಸಿ ಗ್ರಾಮದ ಮಹಿಳೆಯರಿಂದ ಪ್ರತಿಭಟನೆ.
.ಹೆಗ್ಗೇರಿ ಗ್ರಾಮದಲ್ಲಿ ಬಾರ್ ತೆರೆಯಲು ವಿರೋಧಿಸಿ ಗ್ರಾಮದ ಮಹಿಳೆಯರಿಂದ ಪ್ರತಿಭಟನೆ.
       
ಧಾರವಾಡ ತಾಲೂಕಿನ ಹೆಗ್ಗೇರಿ ಗ್ರಾಮದಲ್ಲಿ ಬಾರ್ ತೆರೆಯಲು ವಿರೋಧಿಸಿ ಗ್ರಾಮದ ಮಹಿಳೆಯರಿಂದ ಪ್ರತಿಭಟನೆ ನಡೆಸಲಾಯಿತು.
ರವಿವಾರ ಪೂಜೆಯೊಂದಿಗೆ
ಬಾರ್ ಆರಂಭಕ್ಕೆ  ಸ್ಥಳೀಯರ ವಿರೋಧ
ವ್ಯಕ್ತವಾಗಿತ್ತು.

ಆದರೆ, ಬಾರ್ ಮಾಲೀಕ ನಾರಾಯಣ ಕಲಾಲ ಇದ್ಯಾವದಕ್ಕೂ ಮಣಿಯದೇ, ತಮಗೆ ಸರಕಾರದ ಪರವಾನಗಿ ಇದೆ. ಈ ಹಿನ್ನೆಲೆಯಲ್ಲಿ ಬಾರ್ ಆರಂಭಿಸುತ್ತಿರುವುದಾಗಿ ಹೇಳಿದ್ದರು.
ಇಂದು ಕೂಡ ಗ್ರಾಮದ ಮಹಿಳೆಯರು ಬಾರ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕಡಿಮೆ ಜನಸಂಖ್ಯೆ ಇರುವ ಪ್ರದೇಶದಲ್ಲಿ ಬಾರ್ ಆರಂಭ ಮಾಡಬಾರದು.
ಆದರೂ ಸಹ ಬಾರ್ ಆರಂಭಿಸಿ ಜನರನ್ನು ಕುಡುಕರನ್ನಾಗಿ ಮಾಡಲು ಯತ್ನುಸಲಾಗುತ್ತಿದೆಇದರಿಂದ ಬಡ ಕುಟುಂಬಗಳು
ಬೀದಿಗೆ ಬೀಳಲಿವೆ.
ಈ ಕಾರಣದಿಂದ ಯಾವುದೇ ಪರಿಸ್ಥಿತಿಯಲ್ಲಿಯೂ ಬಾರ್ ಆರಂಭಿಸಲು ಬಿಡುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ ಪಿ ಎಸ್ ಐ ಎಫ್.ಎಂ.ಮಂಟೂರ ನೇತೃತ್ವದಲ್ಲಿ
ಪೊಲೀಸರು ಸ್ಥಳಕ್ಕೆ   ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
 ಮಹಿಳೆಯರ ಒತ್ತಾಯಕ್ಕೆ‌ ಮಣಿದು ಬೋರ್ಡ್ ಇನ್ನಿತರ ಸಾಮಗ್ರಿಗಳನ್ನು ಮಳಿಗೆಯಿಂದ ಬೇರೆ ಕಡೆಗೆ ಸಾಗಿಸಲಾಗಿದೆ.
ನವೀನ ಹಳೆಯದು

نموذج الاتصال