SHIRUR: ಈಶ್ವರ ಮಲ್ಪೆ - ಇವರ ಸಾಧನೆಗೆ ಬರೀ ಶ್ಲಾಘನೆ ಸಾಕಾಗುವುದಿಲ್ಲ!! ಪ್ರಕೃತಿ ವಿಕೋಪದಲ್ಲಿ ಆಪತ್ ಕಾಲದ ಆಪತ್ ಬಾಂಧವ.

ಈಶ್ವರ ಮಲ್ಪೆ - ಇವರ ಸಾಧನೆಗೆ ಬರೀ ಶ್ಲಾಘನೆ ಸಾಕಾಗುವುದಿಲ್ಲ!! 
ಶಿರೂರು ಬೆಟ್ಟ ಕುಸಿತದ ಪ್ರಕೃತಿ ವಿಕೋಪದಲ್ಲಿ ಆಪತ್ ಕಾಲದ ಆಪತ್ ಬಾಂಧವ ಈಶ್ವರ್ ಮಲ್ಪೆ ಅವರನ್ನು "ದಡ ಸೇರಿದ ಮೇಲೆ ಅಂಬಿಗನ ಹಂಗ್ಯಾಕೆ?"ಎನ್ನುವ ರೀತಿಯಲ್ಲಿ ಅಲ್ಲಿನ ಜಿಲ್ಲಾಆಡಳಿತ ಅವರನ್ನು ದೂರ ತಳ್ಳಿ ಅವಮಾನಿಸಿರುವುದು ಅಧಿಕಾರಿ ವರ್ಗದ ಬಗ್ಗೆ ಅಸಹ್ಯ ಮೂಡಿಸುತ್ತಿದೆ. ಪ್ರಕೃತಿ ವಿಕೋಪದಲ್ಲಿ ಅಧಿಕಾರಿ ವರ್ಗ ಹೆಣಗಳನ್ನು ತೋರಿಸಿ ಪರಿಹಾರ ಹಣದ ಲೂಟಿ ಮಾಡುವುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಇಲ್ಲ. ಒಂದು ಕಡೆ, ಗುಡ್ಡದ ಅಡಿಗೆ ಮತ್ತು ಪ್ರವಾಹದ ನೀರಲ್ಲಿ ಸಿಲುಕಿದ ಕಳೆಬರಹ ಹೊರತೆಗೆಯಲು ಒಂದು ಕೋಟಿಗೂ ಅಧಿಕ ವೆಚ್ಚದ ವ್ಯರ್ಥವಾದ ಮಷಿನ್ ಬಳಸಿದ ಸರ್ಕಾರ, ಇನ್ನೊಂದೆಡೆ ಜೀವದ ಹಂಗು ತೊರೆದು ಒಂದು ರೂಪಾಯಿ ಅಪೇಕ್ಷೆ ಇಲ್ಲದೇ ತನ್ನ ದುಡ್ಡು ಖರ್ಚು ಮಾಡಿ ಸಿಲುಕಿದ ಹೆಣ ಮತ್ತು ವಾಹನಗಳ ಅವಶೇಷ ಪತ್ತೆ ಹಚ್ಚಿದ ಈಶ್ವರ್ ತಂಡ. ಕೊನೆಗೆ ಈ ಸೇವೆಯೇ ದಂಡ ಎನ್ನುವ ರೀತಿಯಲ್ಲಿ ಜಿಲ್ಲಾ ಆಡಳಿತ ನಡೆದುಕೊಂಡಿದ್ದು ನೋಡಿ ರಾಜ್ಯದ ಜನ ಆಕ್ರೋಶ ಗೊಂಡಿದ್ದಾರೆ. ಇದಕ್ಕೆ ಕೋಟಿಯಷ್ಟು ಹಣ ಪಾವತಿಯ ಕಮಿಷನ್ ಪಡೆಯುವುದು ಒಂದು ಕಾರಣವಾದರೆ, ವೀರೇಂದ್ರ ಹೆಗ್ಗಡೆ ಎನ್ನುವ ಪುಕ್ಕಟೆ ಪ್ರಚಾರಪ್ರಿಯ ರಾಜ್ಯಸಭಾ ಸದಸ್ಯರ ಡೋಂಗಿತನವನ್ನು ಈಶ್ವರ್ ಮಲ್ಪೆ ಅವರು ಪ್ರಶ್ನೆ ಮಾಡಿದ್ದು ಬಹುಮುಖ್ಯ ಕಾರಣ. ಬಡವರಿಂದ ಸಾವಿರಾರು ಕೋಟಿ ಬಡ್ಡಿ ಹೀರುವ ವೀರೇಂದ್ರ ಹೆಗ್ಗಡೆ ಎನ್ನುವ ಹೇಸಿಗೆ ತರಿಸುವ ಧನದಾಹಿ ಶಿರೂರಿಗೆ ಬಂದಾಗ ಸಂತ್ರಸ್ತರಿಗೆ ಧನ ಸಹಾಯ ಮಾಡದೆ, ಅವರದೇ ಬಡ್ಡಿ ಸಂಘದ ಸಾಲ.. ಅಲ್ಲ ಬಡ್ಡಿಯನ್ನು ಮನ್ನಾ ಮಾಡದೆ, ಪುನರ್ವಸತಿ ಕಲ್ಪಿಸದೆ " ಹೆಂಚು ಕೊಡ್ತೇವೆ, ಚಾಪೆ ಕೊಡ್ತೇವೆ, ಚಮಚ ಕೊಡ್ತೇವೆ " ಎಂದು ಮಾಧ್ಯಮಗಳ ಮುಂದೆ ಚೊಂಬು ಕೊಟ್ಟು ಬಿಟ್ಟಿ ಪ್ರಚಾರ ಗಿಟ್ಟಿಸಿ ಓಡಿಹೋಗಿದ್ದನ್ನು ಈಶ್ವರ್ ಮಲ್ಪೆ ಧೈರ್ಯವಾಗಿ ಪ್ರಶ್ನೆ ಮಾಡಿದ್ದರು. ಅಷ್ಟೇ ಅಲ್ಲ ಸಂತ್ರಸ್ತರಿಗೆ ತಮ್ಮ ಮಟ್ಟಿಗೆ ಆದ ಧನ ಸಹಾಯವನ್ನು ಮಾಡಿದರು. ಇದನ್ನು ಅರಗಿಸಿಕೊಳ್ಳಲಾಗದ ನರಿ ಬುದ್ಧಿಯ ಧರ್ಮೋದ್ಯಮಿ ತಮ್ಮ ಪ್ರಭಾವ ಬಳಸಿ ಈಶ್ವರ್ ಮಲ್ಪೆ ಅವರನ್ನು ಅವಮಾನಿಸುವ ಕೊಳಕು ಕೆಲಸ ಮಾಡಿರುವುದು ಸ್ಪಷ್ಟ. ಕಡಲ ತೀರದ ಜನರ ಒಡಲಾಳದ ಕೂಗು ಕೇಳದ ಅಧಿಕಾರಿಗಳು ಒಬ್ಬ ಡೋಂಗಿ ದೇವಮಾನವನ ದುರಹಂಕಾರವನ್ನು ಕೇಳುವ ಸ್ಥಿತಿಗೆ ಬಂದಿದ್ದಾರೆ. ಇದು ಅಸಹ್ಯ ಮತ್ತು ಅಸಹನೀಯ. 
ಸರ್ಕಾರದ ಆಡಳಿತ ಸೌಜನ್ಯಕ್ಕಾದರೂ ಈಶ್ವರ್ ತಂಡಕ್ಕೆ ಶ್ಲಾಘನೆ ಹೇಳಲಿಲ್ಲ. ಆದರೆ ಈಶ್ವರ್ ಮಲ್ಪೆ ಮತ್ತು ಅವರ ತಂಡ ಮಾಡುತ್ತಿರುವ ಸೇವೆ ಸಾಹಸಗಾಥೆ ಶ್ಲಾಘನೆಯನ್ನು ಮೀರಿದೆ. ಬಕೆಟ್ ಹಿಡಿಯುವವರನ್ನು ಬದಿಗಿಟ್ಟು ಈಶ್ವರ್ ಮಲ್ಪೆ ಅವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು ಸನ್ಮಾನಿಸಿ ಸರ್ಕಾರ ತನ್ನ ಮಾನ ಉಳಿಸಿ ಕೊಳ್ಳಲಿ. ಇಲ್ಲವಾದರೆ ಧರ್ಮೋದ್ಯಮಿಯ ಗುಲಾಮಗಿರಿಗೆ ನಮ್ಮದೊಂದು ಧಿಕ್ಕಾರ. 
ಏನೇ ಆದರೂ ಈ ಮಣ್ಣಿನ ಪ್ರತಿಯೊಬ್ಬ ನಾಗರಿಕನ, ಪ್ರಕೃತಿ ದೇವಿಯ, ಗಂಗಾಮಾತೆಯ ಹಾರೈಕೆ, ಆಶೀರ್ವಾದ ಸದಾ ಈಶ್ವರ್ ಮಲ್ಪೆ ತಂಡಕ್ಕೆ ಇದ್ದೇ ಇರುತ್ತದೆ. 
ಈಶ್ವರ್ ಮಲ್ಪೆ ಮತ್ತು ತಂಡಕ್ಕೆ ನಮ್ಮ ಗೌರವದ ಸೆಲ್ಯೂಟ್ .
ನವೀನ ಹಳೆಯದು

نموذج الاتصال