ಎಫ್.ಪಿ.ಎ.ಇಂಡಿಯಾ ಧಾರವಾಡ ಶಾಖೆಯಲ್ಲಿ ವಿಶ್ವ ಗರ್ಭ ನಿರೋಧಕ ಮತ್ತು ಅಂತರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆ ಆಚರಣೆ
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಸ್ಪ್ರಿಂಟ್ ಯೋಜನೆ ಅಡಿಯಲ್ಲಿ ವಿವಿಧ ಜನ ಜಾಗೃತಿ ಕಾರ್ಯಕ್ರಮಗಳ ಮೂಲಕ ವಿಶ್ವ ಗರ್ಭ ನಿರೋಧಕ ಮತ್ತು ಅಂತರಾಷ್ಟ್ರೀಯ ಸುರಕ್ಷಿತ ಗರ್ಭಪಾತ ದಿನಾಚರಣೆಯನ್ನು ಆಚರಿಸಲಾಯಿತು.
ಇದರ ಕುರಿತಂತೆ ನಾಗರಿಕರಿಗೆ ಅರಿವು ಮೂಡಿಸಲು ಜಲ ಜಾಗೃತಿ ಚಟುವಟಿಕೆಗಳಾದರೆ ರ‍್ಯಾಲಿ, ಸಿಗ್ನೇಚರ್ ಕ್ಯಾಂಪೇನ್, ಸಭೆಗಳನ್ನು ಆಯೋಜಿಸಲಾಗಿತ್ತು. ಇದರ ನೇತೃತ್ವವನ್ನು ಎಫ್, ಪಿ.ಎ ಇಂಡಿಯಾ ಧಾರವಾಡ ಶಾಖಾ ವ್ಯವಸ್ಥಾಪಕೀ ಸುಜಾತಾ ವಹಿಸಿಕೊಂಡು ಮಾತನಾಡಿದ ಅವರು ಹೆಚ್ಚೆಚ್ಚು ಮಕ್ಕಳು ಬೇಕೆಂಬ ಹಂಬಲದಲ್ಲಿರುವ ದಂಪತಿಗಳು, ಅವರವರ ಕುಟುಂಬ ಆರೋಗ್ಯದ ಮೇಲೆ ಮತ್ತು ಆರ್ಥಿಕ ಪರಿಸ್ಥಿತಿ ಮೇಲಾಗುವ ದುಷ್ಪರಿಣಾಮಗಳ ಕುರಿತು ಹೇಳಿದರು. ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಸುರಕ್ಷಿತ ಗರ್ಭಪಾತ ಕಾಗಿ ಅನೇಕ ವಿನೂತನ ಉಪಕರಣಗಳು ಲಭ್ಯವಿದೆ. ಇವುಗಳ ಸದುಪಯೋಗ ಪಡಿಸಿಕೊಂಡು ಕುಟುಂಬ ಆರೋಗ್ಯ ಮತ್ತು ಆರ್ಥಿಕತೆ ಬೆಳವಣಿಗೆಗಾಗಿ ಶ್ರಮಿಸಬೇಕೆಂದು. ಎಫ್,ಪಿ,ಎ ಇಂಡಿಯಾ ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸುತ್ತಿದೆ ಸುಜಾತಾ ಆನಿಶೆಟ್ಟರ್ ತಿಳಿಸಿದರು.