HUBALLI: ಐರಾ ಮಂಜುನಾಥ ಪಾಟೀಲ್ ಗೆ ಮಹಾಪೌರರಿಂದ ಸನ್ಮಾನ.

ಐರಾ ಮಂಜುನಾಥ ಪಾಟೀಲ್ ಗೆ ಮಹಾಪೌರರಿಂದ ಸನ್ಮಾನ. 
ಧಾರವಾಡ  : 
 ಹುಬ್ಬಳ್ಳಿ ಧಾರವಾಡ  ಮಹಾಪೌರರಾದ ರಾಮಣ್ಣ ಬಡಿಗೇರ್ ನವನಗರದಲ್ಲಿ ಇರುವ ಸರಸ್ವತಿ ವಿದ್ಯಾಲಯ ನರ್ಸರಿ ಶಾಲೆಗೆ ಭೇಟಿನೀಡಿ  ನವನಗರ, ಶಾಂತನಗರದಲ್ಲಿರುವ ಸರಸ್ವತಿ ವಿದ್ಯಾಲಯದಲ್ಲಿ ನರ್ಸರಿ ತರಗತಿಯಲ್ಲಿ ಓದುತ್ತಿರುವ (3 )ವರ್ಷದ ಈ ಮುದ್ದು ಪೋರಿ ಐರಾ ಮಂಜುನಾಥ ಪಾಟೀಲ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದ್ದಾಳೆ. ಇವಳು
ಬಾಲಕಿ 11 ಇಂಗ್ಲಿಷ್ ನರ್ಸರಿ ರೈಮ್‌ಗಳು; ಮರು ಇಂಗ್ಲೀಷ್ ವರ್ಣಮಾಲೆ,ವಾರದ ದಿನಗಳು, ವರ್ಷದ ತಿಂಗಳುಗಳು, 7 ಖಂಡಗಳು,8ಗ್ರಹಗಳು, 5 ಸಾಗರಗಳು, 15 ರಾಷ್ಟ್ರೀಯ ಚಿಹ್ನೆಗಳು, 17 ಸ್ಮಾರಕಗಳ ಸ್ಥಳಗಳು, 15 ವಿರುದ್ಧ ಪದಗಳು, ಕರ್ನಾಟಕ 31 ಜಿಲ್ಲೆಗಳು; 21 ಹಣ್ಣುಗಳು, 25 ತರಕಾರಿಗಳು, 25 ಆಹಾರ ಪದಾರ್ಥಗಳು, 16 ಆಕಾರಗಳು, 35 ಪ್ರಾಣಿಗಳು, 5 ಪಕ್ಷಿಗಳು, 15 ಬಣ್ಣಗಳು, 22 ಕ್ರಿಯೆಗಳು, 39 ವಾಹನಗಳು, 20 ಹೂವುಗಳು,ದೇಹದ 21 ಭಾಗಗಳು,15 ವಿರುದ್ಧ ಪದಗಳನ್ನು ಪಟಪಟನೆ ಹೇಳುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಆಯ್ಕೆಯಾಗಿದ್ದಾಳೆ.
ಬಾಲಕಿಯ ಸಾಧನೆಗೆ ಶುಭ ಹಾರೈಸಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ
ಹುಬ್ಬಳ್ಳಿ-ಧಾರವಾಡ ಮಹಪೌರರಾದ ರಾಮಪ್ಪ ಬಡಿಗೇರ, ಉಣಕಲ್ಲಿನ ಪಾಲಿಕೆ ಸದಸ್ಯರಾದ  ರಾಜಣ್ಣ ಕೊರವಿ ಹಾಗೂ  ಶಾಲೆಯ ಅಧ್ಯಕ್ಷರಾದ  ವಿಜಯ್ ದೀಕ್ಷಿತ್ ಹಾಗೂ ಪ್ರಾಂಶುಪಾಲರಾದ  ಸವಿತಾ ದೀಕ್ಷಿತ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ನವೀನ ಹಳೆಯದು

نموذج الاتصال