DHARWAD:ಸಂವಿಧಾನ ಓದು ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಹುಟ್ಟುಹಬ್ಬ ಆಚರಣೆ.
ಹಾನಗಲ್ ಕ್ಷೇತ್ರದ ಶಾಸಕರಾದ ಶ್ರೀನೀವಾಸ್ ಮಾನೆಯವರ 50 ನೇ ಹುಟ್ಟು ಹಬ್ಬವನ್ನು ಧಾರವಾಡದ ಹ್ಯುಮ್ಯಾನಿಟಿ ಪೌಂಡೆಷನ್ ಸಂಸ್ಥೆಯವರು, ನ್ಯಾಯಮೂರ್ತಿ ಎಚ್.ಎನ್ ನಾಗಮೋಹನ ದಾಸ್ ರವರು ಬರೆದ "ಸಂವಿಧಾನ ಓದು " ಪುಸ್ತಕಗಳನ್ನು ವಿದ್ಯಾರ್ಥಿ - ಯುವ ಜನರಿಗೆ ವಿತರಿಸುವ ಮೂಲಕ ಅತ್ಯಂತ ವಿಶಿಷ್ಠವಾಗಿ ಆಚರಿಸಿದರು.
ಈ ಸಂಧರ್ಭದಲ್ಲಿ ಹ್ಯುಮಾನೀಟಿ ಪೌಂಡೆಷನ್ ಸಂಸ್ಥೆ ಅದ್ಯಕ್ಷರಾದ ಸ್ವಾತಿ ಮಳಗಿ, ಧಾರವಾಡ -74 ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ದೀಪಕ್ ಚಿಂಚೋರೆ, ಪಿ.ಕೆ.ನೀರಲಕಟ್ಟಿ ಆನಂದ ಜಾದವ, ಸಾಮಾಜಿಕ ಹೋರಾಟಗಾರ ನಾಗರಾಜ ಗುರಿಕಾರ, ವಿರಶೈವ ಲಿಂಗಾಯತ ಮಾಹಾಸಭಾದ ಧಾರವಾಡ ಜಿಲ್ಲಾದ್ಯಕ್ಷರಾದ ಪ್ರಧಿಪ ಪಾಟೀಲ, ವಕೀಲರಾದ ಮಹೇಬೂಬ್ ರಾಮದುರ್ಗ,ಮಾನವ ಬಂದುತ್ವ ವೇದಿಕೆ ಧಾರವಾಡ ಜಿಲ್ಲಾ ಸಂಚಾಲಕಾರಾದ ವಿರಣ್ಣ ಶೆಟ್ಟರ, ಕೃಷಿ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯರಾದ ರವೀ ಮಾಳಿಗೆರ ,MICE ಸಂಸ್ಥೆಯ ಮುಖ್ಯಸ್ಥರಾದ ಮಂಜುನಾಥ ಭೊವಿ ಹಾಗೂ ಇತರರು ಉಪಸ್ಥಿತರಿದ್ದರು.
-ಸಂವಿಧಾನ ಓದು ಅಭಿಯಾನ-ಕರ್ನಾಟಕ.