DHARWAD: ಪತ್ರಿಕಾ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ ಹಾಗೂ ಚರ್ಚಾಗೋಷ್ಠಿ,ಸಮಾಜ ಸೇವೆಗೆ ಪತ್ರಿಕಾರಂಗ ಅತ್ಯುತ್ತಮ ದಾರಿ, ಪತ್ರಕರ್ತರು ವೃತ್ತಿ ಗೌರವ ಬೆಳೆಸಿಕೊಳ್ಳಲಿ; ಮಲ್ಲಿಕಾರ್ಜುನ ಸಿದ್ದಣ್ಣವರ*

DHARWAD: ಪತ್ರಿಕಾ ದಿನಾಚರಣೆ ಅಂಗವಾಗಿ ವಿಚಾರ ಸಂಕಿರಣ ಹಾಗೂ ಚರ್ಚಾಗೋಷ್ಠಿ,
ಸಮಾಜ ಸೇವೆಗೆ ಪತ್ರಿಕಾರಂಗ ಅತ್ಯುತ್ತಮ ದಾರಿ, ಪತ್ರಕರ್ತರು ವೃತ್ತಿ ಗೌರವ ಬೆಳೆಸಿಕೊಳ್ಳಲಿ; ಮಲ್ಲಿಕಾರ್ಜುನ ಸಿದ್ದಣ್ಣವರ
DHARWAD: ಧಾರವಾಡ (ಕರ್ನಾಟಕ ವಾರ್ತೆ) ಜುಲೈ 25:* ಪತ್ರಕರ್ತರು ಸಮಾಜ ಪರಿವರ್ತನೆಗೆ ಮುಂದಾಗಬೇಕು. ಸಮಾಜ ಸೇವೆಗೆ ಪತ್ರಿಕಾರಂಗ ಅತ್ಯುತ್ತಮ ದಾರಿಯಾಗಿದೆ. ಪತ್ರಕರ್ತರು ವೃತ್ತಿ ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಕನ್ನಡಪ್ರಭ ದಿನಪತ್ರಿಕೆಯ ಹುಬ್ಬಳ್ಳಿ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ದಣ್ಣವರ ಹೇಳಿದರು. 
 ಇಂದು ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗ ಮತ್ತು ಧಾರವಾಡ ಜರ್ನಲಿಸ್ಟ್ ಗಿಲ್ಡ್ ಇವುಗಳ ಸಂಯುಕ್ತಾಶ್ರಯದಲ್ಲಿ ಪತ್ರಿಕಾ ದಿನಾಚರಣೆ 2024ರ ಅಂಗವಾಗಿ ಸಾಮಾಜಿಕ ಮಾಧ್ಯಮದ ಪರಿಣಾಮಗಳು ಕುರಿತು ವಿಚಾರ ಸಂಕಿರಣ ಹಾಗೂ ಚರ್ಚಾಗೋಷ್ಠಿಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 
 ಇಂದು ಸಾಮಾಜಿಕ ಮಾಧ್ಯಮಗಳಿಂದ ಮುಖ್ಯ ವಾಹಿನಿಯ ಮಾಧ್ಯಮಗಳು ನಲುಗುತ್ತಿವೆ. ಸಾಮಾಜಿಕ ಮಾಧ್ಯಮಗಳು ಇಂದು ಜಗತ್ತಿನಾದ್ಯಂತ ದೊಡ್ಡ ಕ್ರಾಂತಿಯನ್ನುಂಟು ಮಾಡುತ್ತಿವೆ. ರೈತರ ಸಮಸ್ಯೆ, ನೀಟ್, ಎಲೆಕ್ಟ್ರೋ ಬಾಂಡ್ ಸೇರಿದಂತೆ ಸಮಾಜದಲ್ಲಿನ ಅನೇಕ ಸಮಸ್ಯೆಗಳನ್ನು ಯುಟ್ಯೂಬರ್‌ಗಳು ಬಯಲಿಗೆಳೆದಿದ್ದಾರೆ. ಮಾನವೀಯ ಕಳಕಳಿ ಹಾಗೂ ಅನ್ಯಾಯದ ವಿರುದ್ಧ ಬರೆಯುವವನು ನಿಜವಾದ ಪತ್ರಕರ್ತ. ಜನಪರ ಕಾಳಜಿ ಹೊಂದಿದ ಪತ್ರಕರ್ತನಿಗೆ ಗೆಲುವು ದೊರೆಯುತ್ತದೆ. ಹೀಗಾಗಿ ಪತ್ರಿಕಾರಂಗವನ್ನು ಸಮಾಜದ ಕಾವಲು ನಾಯಿ ಎಂದು ಕರೆಯಲಾಗುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಹ ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ. ಸಾಮಾಜಿಕ ಮಾಧ್ಯಮಗಳು ದುರುಪಯೋಗವಾಗುತ್ತಿವೆ. ಯುವ ಸಮೂಹ ಸಾಮಾಜಿಕ ಮಾಧ್ಯಮಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 
 ಬೇರೆ ಬೇರೆ ವೃತ್ತಿಗಳಿಗೆ ಹೋಲಿಸಿದರೆ ಪತ್ರಿಕೋದ್ಯಮ ವಿಭಿನ್ನವಾಗಿದೆ. ಬೇರೆ ಉದ್ಯೋಗಗಳಂತೆ ಸಂಪಾದನೆ ಬದಲು ಸಮಾಜದ ಸಮಸ್ಯೆಗಳಿಗೆ ಪತ್ರಿಕೋದ್ಯಮ ತುಡಿಯುತ್ತದೆ. ಗೌತಮ ಬುದ್ಧ, ಬಸವೇಶ್ವರರು, ಅಂಬೇಡ್ಕರ್ ಸೇರಿದಂತೆ ಹಲವಾರು ನಾಯಕರು ಸಮಾಜ ಸುಧಾರಣೆಗೆ ಶ್ರಮಿಸಿದ್ದರು. ಉತ್ತಮ ಸಮಾಜವನ್ನು ನಿರ್ಮಿಸಲು ಪಣ ತೊಟ್ಟಿದ್ದರು. ಅಂತರ್ಜಾತಿ ವಿವಾಹ ಹಾಗೂ ಸಮಸಮಾಜ ನಿರ್ಮಾಣಕ್ಕೆ ಶರಣರು ಮುಂದಾಗಿದ್ದರು. ಅಲ್ಲದೇ ಬಸವಣ್ಣನವರು ಅನುಭವ ಮಂಟಪದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ನೀಡಿ ಅಕ್ಷರಾಭ್ಯಾಸಕ್ಕೆ ಒತ್ತು ನೀಡಿದರು. ಆ ಮೂಲಕ ಸಮಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದರು.
 ಹಿರಿಯ ಪತ್ರಕರ್ತರು ಹಾಗೂ ಧಾರವಾಡ ಜರ್ನಲಿಸ್ಟ ಗಿಲ್ಡ್ ನ ಅಧ್ಯಕ್ಷ ಡಾ.ಬಸವರಾಜ ಹೊಂಗಲ ಮಾತನಾಡಿ, ಪತ್ರಿಕೆಗಳು ಸ್ವಾತಂತ್ರ‍್ಯ ಪೂರ್ವ ಹಾಗೂ ಸ್ವಾತಂತ್ರ‍್ಯ ನಂತರದಲ್ಲಿ ಬಹಳ ಬೆಳವಣಿಗೆ ಹೊಂದಿದವು. ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಪತ್ರಿಕೆಗಳಿಗೆ ಹೊಡೆತ ಬಿತ್ತು. ಆಯಾ ಕಾಲಘಟಕ್ಕೆ ಮಾಧ್ಯಮಗಳು ಬೆಳವಣಿಗೆ ಹೊಂದಿವೆ. ವರ್ಷಗಳು ಕಳೆದಂತೆ ಮಾಧ್ಯಮಗಳ ವರದಿಗಳು ಬದಲಾಗಬೇಕಿದೆ. ಸಾಮಾಜಿಕ ಮಾಧ್ಯಮವನ್ನು ಏಲ್ಲಿಯವರೆಗೆ ಸ್ವಾಗತ ಮಾಡುತ್ತೇವೆ ಎಂಬುದು ಗೊತ್ತಾಗುತ್ತಿಲ್ಲ. ಸಾಮಾಜಿಕ ಮಾಧ್ಯಮದಿಂದ ಸಮಾಜದ ಮೇಲೆ ದುಷ್ಪರಿಣಾಮಗಳು ಬೀರುತ್ತೀವೆ. ಸವಾಲುಗಳನ್ನು ಮೆಟ್ಟಿ ನಿಲ್ಲಲ್ಲು ಪತ್ರಕರ್ತರು ಸನ್ನದ್ಧರಾಗಬೇಕು. ಇಂದು ಸಮಾಜದಲ್ಲಿ ನಕಲಿ ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ. ಅವರ ಕಡಿವಾಣಕ್ಕೆ ಕಠಿಣ ಕಾನೂನುಗಳು ಜಾರಿಯಾಗಬೇಕಿವೆ. ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಹೆಚ್ಚಾಗಿ ಬರೆಯಲು ಪತ್ರಕರ್ತರು ಮುಂದಾಗಬೇಕಿದೆ. ಸಮಾಜದಲ್ಲಾಗುವ ಬದಲಾವಣೆಗಳಿಗೆ ನಾವುಗಳು ಹೊಂದಿಕೊಳ್ಳುವುದು ಮುಖ್ಯ. ಮಾಧ್ಯಮ ರಂಗದಲ್ಲಾದ ಬದಲಾವಣೆಗಳನ್ನು ಅಳವಡಿಕೆ ಮಾಡಿಕೊಳ್ಳಲು ಮಾಧ್ಯಮಗಳು ಮುಂದಾಗಬೇಕಿದೆ. ಉತ್ತಮ ಸಮಾಜವನ್ನು ಕಟ್ಟಲು ಪತ್ರಕರ್ತರು ಮುಂದಾಗಬೇಕು. ಪತ್ರಕರ್ತರಿಂದ ಸಮಾಜಕ್ಕೆ ಒಳ್ಳೆಯ ಕೆಲಸಗಳು ಆಗಬೇಕಿವೆ. ಒಳ್ಳೆಯ ಧ್ಯೇಯ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಜಗತ್ತಿನಲ್ಲಿ ಬದಲಾವಣೆ ನಿರಂತರವಾಗಿರುತ್ತದೆ, ಅದನ್ನು ನಾವು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಪತ್ರಕರ್ತರು ಮುಂದಾಗಬೇಕು. ಸಾಮಾಜಿಕ ಮಾಧ್ಯಮಗಳನ್ನು ಒಳ್ಳೆಯ ರೀತಿಯಲ್ಲಿ ಮುಂದೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿವರಿಸಿದರು. 
 ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಜೆ.ಎಂ.ಚಂದುನವರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮೊಬೈಲ್ ಇದ್ದರೆ ಸಾಕು ಎಲ್ಲರೂ ಪತ್ರಕರ್ತರಂತೆ ವರ್ತಿಸುತ್ತಿದ್ದಾರೆ. ಸಮಾಜದಲ್ಲಿನ ಸಮಸ್ಯೆಗಳ ಬಗ್ಗೆ ವರದಿ ಪ್ರಕಟಿಸುವುದು ಮುಖ್ಯವಾಗಿದೆ. ಸಾಮಾಜಿಕ ಅಸ್ವಸ್ಥತೆಗೆ ಮೊಬೈಲ್ ಕಾರಣವಾಗಿದೆ. ಮೊಬೈಲ್‌ನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು. 
 ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ ಸುಳ್ಳೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಖ್ಯಾತ ವಿಜ್ಞಾನಿ ನಿಕೋಲಸ್ ಟೆಸ್ಲಾ ಅವರು ತರಂಗಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಎಲ್ವಿನ್ ಟಾಪ್ಲರ ಅವರು ಪ್ಯೂಚರ್ ಶಾಕ್ ಎಂಬ ಪುಸ್ತಕದಲ್ಲಿ ಮುಂದಿನ ಜನಾಂಗ ಹಾಗೂ ತಂತ್ರಜ್ಞಾನ ಬೆಳವಣಿಗೆ ಬಗ್ಗೆ ವಿವರಿಸಿದ್ದಾರೆ. ಸಾಮಾಜಿಕ ಮಾಧ್ಯಮ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಯಾವ ರೀತಿಯಲ್ಲಿ ಉಪಯೋಗವಾಗಲಿದೆ ಎಂಬುದನ್ನು ಅರಿತು ವೈಯಕ್ತಿಕ ಪತ್ರಿಕೋದ್ಯಮ ಆರಂಭಿಸಲು ಮುಂದಾಗಬೇಕು. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮವನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. 
 ವಿದ್ಯಾರ್ಥಿಗಳಾದ ಆದಿತ್ಯ ಯಲಿಗಾರ, ಮಡಿವಾಳೆಪ್ಪ, ವಿನಾಯಕ ಹಾಗೂ ಮಾಳೇಶ ಅವರು ಸಾಮಾಜಿಕ ಮಾಧ್ಯಮದ ಕುರಿತಾಗಿ ಪ್ರಶ್ನೆಗಳನ್ನು ಕೇಳಿ, ಅತಿಥಿಗಳಿಂದ ಪ್ರತ್ಯುತ್ತರ ಪಡೆದುಕೊಂಡರು. 
 ನೇತ್ರಾ ಎನ್.ವಿ. ವಚನ ಗೀತೆ ಪ್ರಸ್ತುತ ಪಡಿಸಿದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಡಾ.ಸಂಜಯಕುಮಾರ ಮಾಲಗತ್ತಿ ವಂದಿಸಿದರು. *
USymposium and discussion as part of Press Day celebrations,
Journalism is the best way to serve society, let journalists develop professional respect; Mallikarjuna Siddanna*

*Dharwad (Karnataka News) July 25:* Journalists should be involved in social transformation. Journalism is the best avenue for social service. Mallikarjuna Siddannavara, Hubli local editor of Kannadaprabha daily, said that journalists should develop professional respect.
 He spoke by lighting a lamp to inaugurate a seminar and discussion on the effects of social media as part of Press Day 2024 at the joint campus of Journalism and Mass Communication Department of Karnataka University, Department of News and Public Relations, Karnataka University Journalism and Mass Communication Department and Dharwad Journalist Guild today.
 Today the mainstream media is being shaken by social media. Social media is revolutionizing the world today. YouTubers have exposed many problems in the society including farmers problem, NEET, Electro Bond. A true journalist is one who writes against humanitarian concerns and injustice. A journalist with public concern will win. Thus the press is known as the watch dog of the society. It is normal to make small mistakes even on social media. Social media is being misused. He said that the youth should make good use of social media.
 Journalism is different compared to other professions. Journalism deals with social issues instead of editing like other jobs. Many leaders including Gautama Buddha, Basaveshwara, Ambedkar worked hard for social reform. He was committed to building a better society. Sharans were in favor of inter-caste marriage and the construction of an egalitarian society. Also, Basavanna gave free opportunity to everyone in Anubhav Mantapa and emphasized on literacy. He said that he was leading to the construction of an equal society.
 Senior journalist and president of Dharwad Journalist Guild Dr. Basavaraja Hongala said that newspapers developed a lot in pre-independence and post-independence period. Newspapers were hit by electronic media and social media. Media has evolved over time. Media reports have changed over the years. It is not known how long we will welcome social media. Social media has negative effects on society. Journalists should be prepared to face challenges. Fake journalists are increasing in society today. Strict laws should be implemented to curb them. Journalists should write more reports that shed light on human values. It is important that we adapt to changes in society. The media has to adapt to the changes in the media arena. Journalists should take initiative to build a better society. Journalists should do good things for the society. One should act with a good intention. Change in the world is constant, we need to adapt to it. Journalists should take initiative to utilize technology adequately. He explained that it is the responsibility of all of us to take social media forward in a good way.
 Head of Journalism and Mass Communication Department, Dr. J.M. Chandunavar presided over and said that if a mobile phone is enough, everyone is acting like a journalist. It is important to report on issues in society. Mobile is the cause of social malaise. He said that mobile should be used properly.
 Manjunatha Sulloli, Senior Assistant Director of News and Public Relations Department welcomed and gave an introductory speech saying that students are using social media more and more. The famous scientist Nicholas Tesla studied waves. Elvin Topler in his book Future Shock describes the next generation and technological development. Realizing how social media journalism will benefit students, they should start personal journalism. He said that students should make good use of social media.
 Students Aditya Yaligara, Madiwaleppa, Vinayaka and Malesha asked questions about social media and got responses from the guests.
 Nethra N.V. Vachan Gita presented. Professor of Journalism and Mass Communication Dr. Sanjayakumar Malagatti gave the felicitation.
ನವೀನ ಹಳೆಯದು

نموذج الاتصال