ಸಮಾಜದಲ್ಲಿ ಬಸವ ಪ್ರಜ್ಞೆ ಮೂಡಿಸಿದ ಲಿಂಗಾನಂದ ಸ್ವಾಮೀಜಿ, ಗಣ್ಯರಿಂದ ಗುಣಗಾನ

ಸಮಾಜದಲ್ಲಿ ಬಸವ  ಪ್ರಜ್ಞೆ ಮೂಡಿಸಿದ ಲಿಂಗಾನಂದ ಸ್ವಾಮೀಜಿ, ಗಣ್ಯರಿಂದ ಗುಣಗಾನ
    ಧಾರವಾಡ:--- ಲಿಂಗಾನಂದ ಮಹಾಸ್ವಾಮೀಜಿ ಸತತವಾಗಿ 4 ದಶಕಗಳ ಕಾಲ ಸಮಾಜದಲ್ಲಿ ತಮ್ಮ ವಿಶ್ವಧರ್ಮ ಪ್ರವಚನಗಳ ಮೂಲಕ ಜನರನ್ನು  ಜಾಗೃತಿಗೊಳಿಸಿ ಬಸವ ಪ್ರಜ್ಞೆ ಮೂಡಿಸಿ ಸಂಸ್ಕಾರವಂತ ಮತ್ತು ಸುಂದರ ಸಮಾಜ ಕಟ್ಟಿದರು ಎಂದು ಡಾ. ನಿತಿನ್ ಚಂದ್ರ ಹತ್ತಿಕಾಳ್ ಅಭಿಪ್ರಾಯಪಟ್ಟರು.

      ಅವರು ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ. ಹ. ದೇಶಪಾಂಡೆ ಸಭಾಭವನದಲ್ಲಿ  ನಗರದ ರಾಷ್ಟ್ರೀಯ ಬಸವದಳ ಹಾಗೂ ಲಿಂಗಾಯತ ಧರ್ಮ ಮಹಾಸಭಾ ಅತಿಥ್ಯ ದಲ್ಲಿ  ಹಮ್ಮಿಕೊಂಡಿದ್ದ  ಶ್ರೀ ಲಿಂಗಾನಂದ ಸ್ವಾಮೀಜಿ ಒಂದು ನೆನಪು ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
     ಆದ್ಯಾತ್ಮದ  ಹಂಬಲ ಹಾಗೂ ಪ್ರತಿಭೆ ಉಳ್ಳವರನ್ನು ಆಕರ್ಷಿಸಿ ಆವರನ್ನು ಪ್ರೋತ್ಸಾಹಿಸಿ ಬೆಳೆಸುವ ಗುಣ ಶ್ರೀಗಳಲ್ಲಿತ್ತು ಎಂದರು.
      ಹಿರಿಯ ಸಾಹಿತಿ ಡಾ.ಮಾರ್ಕ0ಡೇಯ ದೊಡ್ಡಮನಿ ಮಾತನಾಡಿ  ಬಸವ ಸಂದೇಶವನ್ನು ಜನರ ಮನೆ  ಮನಕ್ಕೆ ತಲುಪಿಸಿದವರು ಲಿಂಗಾನಂದ ಶ್ರೀಗಳು ಎಂದು ಸ್ಮರಿಸಿಕೊಂಡರು.
     ಅನುಭಾವ ನೀಡಿದ ಮನಗುಂಡಿಯ ಶ್ರೀ ಗುರು ಬಸವ ಮನೆಯ  ಶ್ರೀ ಬಸವಾನಂದ ಸ್ವಾಮೀಜಿಯವರು   ಲಿಂಗಾನಂದ ಗುರುಗಳ ಪ್ರಭಾವದಿಂದ ನಾನು ಅವರ ಶಿಷ್ಯತ್ವ ಪಡೆದೆ ಅವರ ಆಶ್ರಮಕ್ಕೆ ಹೋದಮೇಲೆ ನನ್ನ ಬದುಕಿನ ಗುರಿ ಬದಲಾಯಿತು  ಬಸವ ತತ್ವ ಭೋಧನೆಯೊಂದಿಗೆ ಆರೋಗ್ಯ ಪ್ರಜ್ಞೆ ಬೆಳೆಸುವ  ಕಾಯಕ  ಕೈಗೊ0ಡೆ ಇದಕ್ಕೆ ಪೂಜ್ಯರ ಆಶೀರ್ವಾದವೇ ಕಾರಣ ಎಂದು ಸ್ಮರಿಸಿಕೊಂಡರು.
     ಸಾನ್ನಿಧ್ಯವಹಿಸಿದ್ದ  ಕೂಡಲ ಸಂಗಮದ  ಬಸವ ಧರ್ಮ ಪೀಠದ  ಶ್ರೀ ಮಹಾಜಗದ್ಗುರು ಡಾ  ಮಾತೆ ಗಂಗಾದೇವಿ ಅವರು ಆಶೀರ್ವಚನ ನೀಡಿ ವಿಶ್ವದ ಮೊದಲ ಮಹಿಳಾ ಗುರು ಪೀಠ ಧಾರವಾಡನಗರದಲ್ಲಿ ಸ್ಥಾಪನೆ ಮಾಡಿದ್ದು ಆ ಮೂಲಕ ಲಿಂಗಾಯತ ಧರ್ಮದ ಮೂಲ ಜೀವಾಳವಾದ ಮಹಿಳಾ ಸಮಾನತೆಯ ಕನಸನ್ನು ನನಸಾಗಿಸಿದವರೇ  ಲಿಂಗಾನಂದ ಶ್ರೀಗಳು  ಅವರ  ನಂತರ ಪೂಜ್ಯ ಮಾತಾಜಿ ಅವರು ಅದೇ ಪಥದಲ್ಲಿ ಸಾಗಿದರು  ಎಂದು ಗುರು ಸ್ಮರಣೆ ಮಾಡಿದರು.
       ಧಾರವಾಡದ ಜಗನ್ಮಾತಾ ಅನುಭಾವ ಪೀಠಾಧ್ಯಕ್ಷೆ  ಜಗದ್ಗುರು ಮಾತೆ ಜ್ಞಾನೇಶ್ವರಿ ಅವರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಸಂಶೋಧಕ ಡಾ. ಎಸ್. ಆರ್. ಗುಂಜಾಳ್ ಅಧ್ಯಕ್ಷತೆ ವಹಿಸಿದ್ದರು
ಹುಬ್ಬಳ್ಳಿಯ ರಾಷ್ಟ್ರೀಯ ಬಸವದಳದ  ಎಸ್. ಬಿ. ಜೋಡಳ್ಳಿ ಸ್ವಾಗತಿಸಿದರು.
    ಹೈಕೋರ್ಟ್ ನ್ಯಾಯವಾದಿ ಕೆ. ಎಸ್. ಕೋರಿಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ಎಲ್. ಗೌಡರ್ ಅವರು ದಂಪತಿಗಳಿಂದ ಗೌರವಾರ್ಪಣೆ,
ಉಪನ್ಯಾಸಕಿ ಶ್ರೀಮತಿ ಸವಿತಾ  ಕುಸುಗಲ್ ಅವರು ಸಭಾನಿರ್ವಹಣೆ ಮಾಡಿ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು.
     89 ರ ವಯಸ್ಸಿನಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ.  ಮಾರ್ಕ0ಡೇಯ ದೊಡ್ಡಮನಿ
ಧಾರವಾಡದ ಖ್ಯಾತ ವೈದ್ಯ ಡಾ ನಿತಿನ್ ಚಂದ್ರ ಹತ್ತಿಕಾಳ್ ಹಾಗೂ ಝೀ ಟಿವಿ ಕನ್ನಡದ ಡ್ರಾಮಾ ಜೂನಿಯರ್ಸ್ ದಲ್ಲಿ ಮಿಂಚಿದ ಧಾರವಾಡದ ಬಾಲಕಿ  ಕು. ತುಳಸಿ ಮೋಕಾಶಿ  ಅವರುಗಳಿಗೆ  ಶ್ರೀಗಳು,  ಗಣ್ಯರು  ಸನ್ಮಾನಿಸಿದರು.
q
ನವೀನ ಹಳೆಯದು

نموذج الاتصال