ಧಾರವಾಡ ಜಿಲ್ಲಾ ಪೊಲೀಸ್ ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ
ದರೋಡೆ ಪಕರಣ ಪತ್ತೆ.
ಧಾರವಾಡ :
ದಿ ಫೇ 3 ರಂದು ರಾತ್ರಿ 10-20 ಗಂಟೆಯಿಂದ 10-45 ಗಂಟೆಯ ನಡುವಿನ ಅವದಿಯಲ್ಲಿ ಕಲ್ಲೂರ ಕೊಟಬಾಗಿ ರಸ್ತೆ ಮೇಲೆ ಪುಟೆದಾರ ಸರ್ವ ಹತ್ತಿರ ಯಾರೋ 04 ಜನ ಆರೋಪಿತರು ಮೋಟರ ಸೈಕಲ ನಿಲ್ಲಿಸಿ ಮಾರಣಾಂತಿಕವಾಗಿ ಕಬ್ಬಿಣದ ರಾಡಿನಿಂದ ಚಾಕುವಿನಂದ ಹೊಡೆದು ಅವನ ಬಳಿ ಇದ್ದ 15 ಗ್ರಾಂ ತೋಕ ಇರುವ ಅರ್ದ ಚಂದ್ರಾಕೃತಿ ಲಾಕೇಟ ಇರುವ ಬಂಗಾರದ ಚೈನು, 50,000/-ರೂ, ವಿವೋ ಕಂಪನಿಯ ಸ್ಮಾಟ ಪೋನ ಸಿಮ್ ನಂ 8897887148 ಹಾಗೂ10,000/ರೂ ಕಿಸೆಯಲ್ಲಿ ಇದ್ದ 370/-ರೂಗಳನ್ನು ಕಸಿದು ಕೊಂಡು ಹೋಗಿದ್ದರು ಸದರಿ ಆರೋಪಿತರಿಗೆ ಪತ್ತೆ ಮಾಡಿ ಕಾನೂನು ಕ್ರಮ ಕೈ ಕೊಳ್ಳಲು ನೀಡಿದ ದೂರಿನ ಅನ್ವಯ ಕ್ರಮ ಕೈ ಕೊಂಡಿದೆ.
ಸದರಿ ಪ್ರಕರಣದಲ್ಲಿ ಖಚಿತ ಮಾಹಿತಿ ಮತ್ತು ತಾಂತ್ರಿಕ ತನಿಖೆಯ ಆದರಿಸಿ ಇದರಲ್ಲಿಯ ಆರೋಪಿತರಾದ ರವಿ ತಂದೆ ಗುಂಡಬಸಪ್ಪ ದಂಡಿನ ಸಾ|| ಕಲ್ಲೂರ ತಾ| ಧಾರವಾಡ ಶಂಕರ ತಂದೆ ಪಕ್ಕೀರಪ್ಪ ಕೊಕಾಟೆ ಸಾ ಇಟಗಟ್ಟಿ ತಾ|| ಧಾರವಾಡ ಮತ್ತು ದೀಪಕ ತಂದೆ ವಸಂತ ಗೊಲ್ಲರ ಸಾ|| ಗೋಪನಕೊಪ್ಪ ಹುಬ್ಬಳ್ಳಿ, ಇವರಿಗೆ ದಸ್ತಗಿರಿ ಮಾಡಿದ್ದು ಇರುತ್ತದೆ. ಸದರಿ ಆರೋಪಿತರಿಂದ 15 ಗ್ರಾಂ ತೂಕದ ಬಂಗಾರದ ಚೈನ ಅ.ಕಿ. 60,000/ರೂಪಾಯಿ ವಿವೋ ಕಂಪನಿಯ ಮೋಬೈಲ ಅ.ಕಿ.10,000 ರೂಪಾಯಿಗಳು ಮತ್ತು ಕೃತ್ಯಕ್ಕೆ ಬಳಸಿದ ಒಂದು ಮೋಟಾರ ಸೈಕಲ ಹಾಗೂ ಒಂದು ಮೊಬೈಲ್ ಪೋನನ್ನು ವಶಪಡಿಸಿಕೊಳ್ಳಲಾಗಿದೆ.
ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಧಾರವಾಡ ಜಿಲ್ಲೆ
ಗೋಪಾಲ ಬ್ಯಾಕೋಡ .ಹೆಚ್ಚುವರು ಪೊಲೀಸ್ ಅಧೀಕ್ಷಕರು ಧಾರವಾಡ ಜಿಲ್ಲೆ ನಾರಾಯಣ ಭರಮನಿ , ಮಾನ್ಯ ಪೊಲೀಸ್ ಉಪಾಧೀಕ್ಷಕರು ಧಾರವಾಡ ಗ್ರಾಮೀಣ ಉಪವಿಭಾಗ ಎಸ್.ಎಮ್. ನಾಗರಾಜ ರವರ ಮಾರ್ಗದರ್ಶನದಲ್ಲಿಸಿಪಿಐ ಗರಗ ವೃತ್ತ ಸಮೀರ ಮುಲ್ಲಾ ನೇತೃತ್ವದಲ್ಲಿ ಪಿ.ಎಸ್.ಐ ಸಿದ್ರಾಮಪ್ಪ ಉನ್ನದ (ಕಾ&ಸು) ಹಾಗೂ ಪಿ.ಎಸ್.ಐ .ಎಫ್.ಎಮ್. ಮಂಟೂರ ಗರಗ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಜನರಾದ ಎಫ್.ಬಿ.ಪಾಟೀಲ್ , ಎಸ್.ಎ. ರಾಮನಗೌಡರ, ಮೋಹನ ಎಸ್. ಪಾಟೀಲ್ ಮಂಜುನಾಥ ಕೆಲಗೇರಿ, ಬಿ.ಪಿ.ದೂಪದಾಳ, ಉಳವೀಶ ಸಂಪಗಾವಿ , ಈರಪ್ಪ ಲಮಾಣಿ , ಪ್ರಸಾದ ಬಡಿಗೇರ , ಹಾಗೂ ತಾಂತ್ರಿಕ ವಿಭಾಗದ ಆರೀಫ ಗೋಲಂದಾಜ ಮತ್ತು ಚೇತನ ಮಾಳಗಿ ಇವರು ಆರೋಪಿತರನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇರುತ್ತದೆ. ಪ್ರಕರಣ ಬೇದಿಸಿದ ಎಲ್ಲ ಅಧಿಕಾರಿ ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಧಾರವಾಡ ಜಿಲ್ಲೆ ಧಾರವಾಡರವರು ಶ್ಲಾಘಿಸಿ ಪ್ರಸಂಶೆ ವ್ಯಕ್ತಪಡಿಸಿದರು.