ರಾಜ್ಯದ ಮೊಟ್ಟ ಮೊದಲ ಮಹಿಳಾ ಕ್ಲಬ್ ಎಂಬ ಖ್ಯಾತಿ ಹೊಂದಿರುವ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಪದಾಧಿಕಾರಿಗಳ 16ನೇ ಪದಗ್ರಹಣ ಸಮಾರಂಭ
ಜು. 6 ರಂದು ಸಂಜೆ 5ಕ್ಕೆ ಧಾರವಾಡದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾವ್ ಭವನದಲ್ಲಿ ನಡೆಯಲಿದೆ.
ರೋಟರಿ ಸೆವೆನ್ ಹಿಲ್ಸ್ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಗೌರಿ ಮದಲಭಾವಿ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಸ್ಮಿತಾ ಮಂತ್ರಿ ಆಯ್ಕೆಯಾಗಿದ್ದಾರೆ. ಇವರ ನೇತೃತ್ವದಲ್ಲಿ ಇತರ ಪದಾಧಿಕಾರಿಗಳು ಶನಿವಾರ ಪದಗ್ರಹಣ ಮಾಡಲಿದ್ದಾರೆ. ಈ ವೇಳೆ ರೋಟರಿ ಇಂಡಿಯಾದ ಜಿಲ್ಲಾ ಫೆಲಿಸಿಟೆಟರ್ ಹಾಗೂ ಮಾಜಿ ಗವರ್ನರ್ ರೋ.ಗೌರೀಶ ಧೋಂಡ ಆಗಮಿಸಲಿದ್ದು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಿಸಲಿದ್ದಾರೆ. ಸಹಾಯಕ ಗವರ್ನರ್ ಡಾ. ಆನಂದ ತಾವರಗೇರಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಳೆದ 15 ವರ್ಷಗಳಿಂದ ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಸಾಮಾಜಿಕವಾಗಿ ಕೆಲಸಗಳನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಮುಂದೆಯೂ
ಕಾರ್ಯ ಮಾಡಲಾಗುವುದು. ಪ್ರಸಕ್ತ ವರ್ಷದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ಗ್ರಾಮೀಣ ಭಾಗದ ಮಹಿಳೆಯ ಆರೋಗ್ಯ ತಪಾಸಣೆಗೆ ಶಿಬಿರಗಳನ್ನು ಆಯೋಜಿಸಲಾಗುವುದು. ಜತೆಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ, ಮಹಿಳಾ ಸಬಲೀಕರಣ, ಪರಿಸರ ರಕ್ಷಣೆಗಾಗಿ ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ನಡೆಸಲಾಗುವುದು.
ಪ್ರಸ್ತುತ ಕ್ಲಬ್‌ನಲ್ಲಿ 38 ಜನ ಸಕ್ರಿಯ ಸದಸ್ಯೆಯರಿದ್ದು. ಎಸ್ ಡಿ ಎಮ್ ಆಸ್ಪತ್ರೆಯಲ್ಲಿ ತಾಯಿ ಹಾಲಿನ ಬ್ಯಾಂಕ್, ಶಾಲೆಗಳಿಗೆ ಶೌಚಾಲಯ, ರೋಟರಿ ಹ್ಯಾಪಿ ಸ್ಕೂಲ್, ರೋಟರಿ ಫಾರೆಸ್ಟ್, ಮಹಿಳೆಯರ ಆರೋಗ್ಯ ಸ್ವಾಸ್ಥ್ಯ ಕಾಪಾಡು ವಲ್ಲಿ ಕ್ಲಬ್ ಶ್ರಮಿಸಿದ್ದು ಬರುವ ದಿನಗಳಲ್ಲೂ ಇದೇ ಕಾರ್ಯ ಮುಂದುವರೆಸಿಕೊಂಡು ಹೋಗಲಿದೆ.