ರಸ್ತೆ ಸಂಚಾರ ನಿಯಮ ಪಾಲಿಸಿ : ಡಾ ವೀಣಾ ಬಿರಾದಾರ

ರಸ್ತೆ ಸಂಚಾರ ನಿಯಮ ಪಾಲಿಸಿ : ಡಾ ವೀಣಾ ಬಿರಾದಾರ 
ಧಾರವಾಡ: ಕರ್ನಾಟಕ ರಾಜ್ಯ ಪೊಲೀಸ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್, ಧಾರವಾಡ ಸಂಚಾರ ಪೊಲೀಸ್ ಠಾಣೆ ಹಾಗೂ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಧಾರವಾಡ ಇವರ ಸಹಯೋಗದೊಂದಿಗೆ "ರಸ್ತೆ ಸಂಚಾರ ಮತ್ತು ಸುರಕ್ಷತೆ ಅರಿವು ಮೂಡಿಸುವ ಕಾರ್ಯಕ್ರಮ" ವನ್ನು ನಗರದ ಶ್ರೀ ಸಾಯಿ ಕಾಲೇಜಿನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಸಂಚಾರಿ ಪೊಲೀಸ್ ಠಾಣೆಯ ಸಿ.ಪಿ.ಐ ಆದ ಶ್ರೀನಿವಾಸ ಸಿ. ಮೇಟಿ ಇವರು ವಿದ್ಯಾರ್ಥಿಗಳಿಗೆ (ಟ್ರಾಫಿಕ್) ಸಂಚಾರ ನಿಯಮಗಳ ಕುರಿತು ತಿಳಿಸಿದರು. ಚಾಲಕರ ನಿರ್ಲಕ್ಷತನದಿಂದ ಉಂಟಾಗುವ ಅಪಘಾತಗಳನ್ನು ತಡೆಗಟ್ಟಲು ಅನುಸರಿಸುವ ಕ್ರಮಗಳ ಕುರಿತು ವಿವರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಡಾ.  ವೀಣಾ ಬಿರಾದಾರ ಅವರು ಪೊಲೀಸ್ ಇಲಾಖೆ ನಮ್ಮೆಲ್ಲರ ಹೆಮ್ಮೆ ಮತ್ತು ಗೌರವ. 24 ಗಂಟೆಯೂ ನಮ್ಮ ರಕ್ಷಣೆಗಾಗಿಯೇ ಇರುವ ಇಲಾಖೆ ಇದಾಗಿದೆ. ನಮಗಾಗಿ ನಮ್ಮ ಕುಟುಂಬದವರಿಗಾಗಿ ಈ ಸಂಚಾರ ನಿಯಮಗಳನ್ನು ನಾವು ಪಾಲಿಸಲೇಬೇಕು ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ಆದ  ವೀರೇಶ ಬಳ್ಳಾರಿ,  ಮಹೇಶ ಕಿತ್ತೂರ, ಡಾ. ಬಾಪು ಮೊರಂಕರ,  ಕೆ.ಬಿ. ಮೇಟಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  ಮೌನೇಶ ಬಡಿಗೇರ ಕಾರ್ಯಕ್ರಮವನ್ನು ನಿರೂಪಿಸಿದರು.

ನವೀನ ಹಳೆಯದು

نموذج الاتصال