ಮಕ್ಕಳ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ- ಸವಿತಾ ಅಮರಶಟ್ಟಿ.

ಮಕ್ಕಳ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ- ಸವಿತಾ ಅಮರಶಟ್ಟಿ.
ಧಾರವಾಡ : 23
ಕಲಾಲೋಕದಲ್ಲಿ ಒಂದು ಪುಟ್ಟ ಹೆಜ್ಜೆ" ಎಂಬ ಕಾರ್ಯಕ್ರಮದಲ್ಲಿ
ಮಕ್ಕಳ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರ ಸಹಕಾರಿ- ಬಿಜೆಪಿ ಮುಖಂಡರಾದ  ಸವಿತಾ ಅಮರಶೆಟ್ಟಿ
ಹೇಳಿದರು.
ಧಾರವಾಡ ಪ್ರತಿಯೊಬ್ಬರು ಮೆಚ್ಚುವಂತಹ ಸ್ಥಳವಾಗಿದ್ದು, ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮತ್ತು ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನಕ್ಕೆ ಧಾರವಾಡ ಉತ್ತಮ ಸ್ಥಳವಾಗಿದೆ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ. ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಲು ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿವೆ. ಅದರಲ್ಲೂ ಕಲಾಶಕ್ತಿ ಫೌಂಡೇಶನ್ ನ ಕಲಾಲೋಕದಲ್ಲಿ ಒಂದು ಪುಟ್ಟ ಹೆಜ್ಜೆ ಉತ್ತಮ ವೇದಿಕೆಯಾಗಿ ಮಲ್ಲನಗೌಡ  ಪಾಟೀಲ ಅವರ ಮಾರ್ಗದರ್ಶನದಲ್ಲಿ ನ ಬೆಳೆಯುತ್ತಿರುವುದು ಧಾರವಾಡಕ್ಕೆ ಒಂದು ಹೆಮ್ಮೆ ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷರು, ಬಿಜೆಪಿಯ ಮುಖಂಡರಾದ  ಸವಿತಾ ಅಮರಶೆಟ್ಟಿ ಹೇಳಿದರು.  
ಅವರು ಕಲಾಶಕ್ತಿ ಪೌಂಡೇಶನ್, ಧಾರವಾಡ ಹಾಗೂ ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡದ ವತಿಯಿಂದ  ಸಾಂಸ್ಕೃತಿಕ ವೈವಿಧ್ಯಮಯ ಮತ್ತು ಮಕ್ಕಳ ಬೇಸಿಗೆ ಶಿಬಿರದ ಸಮಾರೋಪದ ಅಂಗವಾಗಿ ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಭಾಭವನದಲ್ಲಿ ಏರ್ಪಡಿಸಿದ್ದ  "ಕಲಾಲೋಕದಲ್ಲಿ ಒಂದು ಪುಟ್ಟ ಹೆಜ್ಜೆ" ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಮಕ್ಕಳಿಗೆ ವಿಶೇಷ ಹಕ್ಕುಗಳಿದ್ದು, ಅವುಗಳನ್ನು ಅರಿತು ಪೋಷಕರು ನಡೆಯಬೇಕು. ಅವರನ್ನು ಶಿಕ್ಷಿಸುವ ಹಕ್ಕು ಪೋಷಕರಿಗಿಲ್ಲ. ರಕ್ಷಣೆ ಜತೆಗೆ ಗುಣಮಟ್ಟ ಶಿಕ್ಷಣ ನೀಡಬೇಕು. ಇದರಿಂದ ಮಾತ್ರವೇ ಉತ್ಕೃಷ್ಟ ಮಾನವ ಸಂಪನ್ಮೂಲ ನಿರ್ಮಾಣ ಮಾಡಲು ಸಾಧ್ಯ. ಮಕ್ಕಳನ್ನು ಯಾಂತ್ರಿಕವಾಗಿ ಬೆಳೆಸುತ್ತಿರುವುದು ಸರಿಯಲ್ಲ. ಪ್ರಸ್ತುತ ಅಂಕಗಳ ಆಧಾರದ ಮೇಲೆ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು. ಇತರೆ ಮಕ್ಕಳೊಂದಿಗೆ ತಮ್ಮ ಮಕ್ಕ ಳನ್ನು ಹೋಲಿಕೆ ಮಾಡುವುದು ಹೆಚ್ಚಾಗುತ್ತಿದೆ. ಮಕ್ಕಳಿಗೆ ಅಭಿವೃದ್ಧಿಗೆ ಒತ್ತು ನೀಡಿ, ಒತ್ತಾಯ ಮಾಡಬೇಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಪ್ರಧಾನಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ವಹಿಸಿ ಮಾತನಾಡುತ್ತಾ ಸಂಘ-ಸಂಸ್ಥೆಗಳು  ಆಯೋಜಿಸುವ ಶಿಬಿರಗಳು ಮತ್ತು ಇತರ ಮಾದರಿ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರಲ್ಲದೆ ಶಿಬಿರಗಳು ಸಮಾಜಕ್ಕೆ ಪೂರಕವಾಗಿ ಭವ್ಯ ಭವಿಷ್ಯ ಬರೆಯುವ ಮುನ್ನುಡಿಯಾಗಬೇಕು. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಕಾರ್ಯಚಟುವಟಿಕೆಗಳ ಬಗ್ಗೆ ಗಮನ ಹರಿಸಿ ಉತ್ತಮ ಮಾರ್ಗದತ್ತ ನಡೆಯುವಂತೆ ಸಲಹೆ ನೀಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಕೀಲರು, ಹಾಗೂ ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71 ರ ಅಧ್ಯಕ್ಷ  ಶಕ್ತಿ ಜೆ. ಹಿರೇಮಠ ಮತ್ತು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ್ ವೇದಿಕೆಯಲ್ಲಿ ಮಾತನಾಡಿದರು

ಕಲಾಶಕ್ತಿ ಫೌಂಡೇಶನ್ ಅಧ್ಯಕ್ಷರಾದ  ಅನ್ನಪೂರ್ಣ ಜಿ ಪಾಟೀಲ್ ಕಲಾಶಕ್ತಿ ಪೌಂಡೇಶನ್ ನ ಕಾರ್ಯದರ್ಶಿ ಮಲ್ಲನಗೌಡ ಜಿ ಪಾಟೀಲ ಗೌರವ ಉಪಸ್ಥಿತರಿದ್ದರು.

ನಂತರ ಬೇಸಿಗೆ ಶಿಬಿರದ ಮಕ್ಕಳಿಂದ ಕಲಾಲೋಕದಲ್ಲಿ ಒಂದು ಪುಟ್ಟ ಹೆಜ್ಜೆಗಳ ಕಾರ್ಯಕ್ರಮ ಮತ್ತು ಜಾನಪದನೃತ್ಯ, ಹಾಡುಗಳ ರಂಜಮಂಜರಿ, ಸಾಂಸ್ಕೃತಿಕ ಕಲಾ ಪ್ರಕಾರಗಳ ನೃತ್ಯಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಅಮೃತಾ ಪಾಟೀಲ, ಪ್ರೇಮಾನಂದ ಶಿಂದೆ, ಸಂದೀಪ ಯಾದಗಿರಿ, ವೆಂಕಟೇಶ ಮನ್ನಿಕೇರಿ, ಸುನೀಲ ಅರಳಿಕಟ್ಟಿ, ಕೃಷ್ಣ ಮೂರ್ತಿ ಗೊಲ್ಲರ ಮುಂತಾದವರು ಇದ್ದರು.

ಶ್ರೀಮತಿ  ಪೂಜಾ ಪಾಟೀಲ ನಿರೂಪಿಸಿದರು. ರೇಖಾ ಯಾದಗಿರಿ    ಪ್ರಾರ್ಥಿಸಿದರು. ವಿನಾಯಕ ಕಲ್ಲೂರ ಸ್ವಾಗತಿಸಿದರು.    ಅನ್ನಪೂಣ ಪಾಟೀಲ  ವಂದಿಸಿದರು.
ನವೀನ ಹಳೆಯದು

نموذج الاتصال