ಭಾರತೀಯ ವೈದ್ಯಕೀಯ ಸಂಘ ಧಾರವಾಡ ಕ್ರೀಡಾ ವಾರ್ಷಿಕೋತ್ಸವ .
ಧಾರವಾಡ :
ರವಿವಾರದಂದು ಭಾರತೀಯ ವೈದ್ಯಕೀಯ ಸಂಘ ಧಾರವಾಡ ವಿಭಾಗ ಇವರು ಕ್ರೀಡಾ ವಾರ್ಷಿಕೋತ್ಸವವನ್ನು ಮಲ್ಲ ಸಜ್ಜನ ವ್ಯಾಯಾಮ ಶಾಲೆಯ ಆವರಣದಲ್ಲಿ ನೆರವೇರಿಸಲಾಗಿತ್ತು ಡಾII ಶಶಿ ಪಾಟೀಲ್ ಜಿಲ್ಲಾ ವೈದ್ಯಾಧಿಕಾರಿಗಳು ಹಾಗೂ ಶ್ರೀ ಅಭಿಷೇಕ್ ಯಲಿಗಾರ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಇವರುಗಳು ಕ್ರೀಡೆಗೆ ಚಾಲನೆ ನೀಡಿದರು. ಡಾII ಶಶಿ ಪಾಟೀಲ್ ವೈದ್ಯರು ಮತ್ತು ಅವರ ಪರಿವಾರ ವೃಂದದವರು ಭಾಗವಹಿಸಿದ್ದಕ್ಕಾಗಿ ಅಭಿನಂದಿಸಿ ಈ ತರಹದ ಕ್ರೀಡಾಕೂಟಗಳು ವೈದ್ಯರಿಗೆ ತಮ್ಮ ದೈನಂದಿನ ಒತ್ತಡ ನಿವಾರಿಸಲು ಹಾಗೂ ಸಹ ವೃತ್ತಿಪರೊಡನೆ ಉತ್ತಮ ಬಾಂಧವ್ಯ ಬೆಳೆಸಲು ಸಹಾಯಕವಾಗುತ್ತದೆ.
ಇನ್ನೋರ್ವ ಅತಿಥಿ ಅಭಿಷೇಕ್ ಯಲಿಗಾರ ಒಬ್ಬನೋಡನೆ ಒಂದು ವರ್ಷ ಮಾತನಾಡುವುದಕ್ಕಿಂತಲೂ ಅವನೋಡನೆ ಒಂದು ಗಂಟೆ ಆಟವಾಡುವುದರಿಂದ ಅವನನ್ನು ಹೆಚ್ಚು ಅರ್ಥಮಾಡಿಕೊಳ್ಳಬಹುದು ಎನ್ನುತ್ತಾ ಎಲ್ಲಾ ವೈದ್ಯರಿಗೆ ಮುಖ್ಯವಾಗಿ 65 ವರ್ಷ ಮೇಲ್ಪಟ್ಟ ವೈದ್ಯರು ಈ ಕ್ರೀಡೆಯಲ್ಲಿ ಭಾಗವಹಿಸಿದ್ದು ಒಂದು ವಿಶೇಷತೆ ಆಗಿದೆ ಎಂದು ಎಲ್ಲರಿಗೂ ಶುಭ ಕೋರಿದರು.
ಭಾರತೀಯ ವೈದ್ಯಕೀಯ ಸಂಘ ಧಾರವಾಡ ಘಟಕದ ಅಧ್ಯಕ್ಷರಾದ ಡಾII ಸತೀಶ್ ಇರಕಲ್ ಅವರು ಎಲ್ಲರಿಗೂ ಆಹ್ವಾನಿಸಿ ನ್ಯಾಯ ಸಮ್ಮತ ಸೊಗಸಾದ ಆಟವು ಒಳ್ಳೆಯ ನಡತೆಯ ಒಂದು ರೀತಿಯಾಗಿದ್ದು ಅದರಲ್ಲಿ ತನಗೆ ಎದುರಿನವರಿಗೆ ಗೌರವ ನೀಡುವುದನ್ನು ಕಲಿಸುವುದು ಆರೋಗ್ಯ ಆಟದ ಎದುರಿನಲ್ಲಿಯೂ ಗಾಂಭೀರ್ಯ ತಾಳವು ಮತ್ತು ಗೆಲುವು ಸೋಲುಗಳೆರಡರಲ್ಲೂ ಸೌಜನ್ಯವಾಗಿರುವುದನ್ನು ಕಲಿಸುತ್ತದೆ ಹಾಗಾಗಿ ಎಲ್ಲರೂ ಯಾವುದಾದರೂ ಕ್ರೀಡೆಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವಿಭಾಗದ ಚೇರಮನ್ನರಾದ ಡಾII ಕವಿತಾ ಮಂಕಣಿ ಮಕ್ಕಳು ಹಾಗೂ ಮಹಿಳೆಯರು ತಮ್ಮ ದಿನನಿತ್ಯದ ಕಾರ್ಯವೈಖರಿಯಲ್ಲಿ ಕ್ರೀಡೆ ಸಮಯವನ್ನು ಬದಿಗಿಟ್ಟು ಆರೋಗ್ಯವಂತರಾಗಿ ಇರಬೇಕೆಂದು ಕೋರಿದರು.
ಈ ಕ್ರೀಡೆಯ ಮುಖ್ಯ ವೈಖರಿಯಾದ ಡಾII ವಾಣಿ ಇರಕಲ್ ಕ್ರೀಡೆಯ ನಿಯಮಾವಳಿ ಹಾಗೂ ಬೇರೆ ಬೇರೆ ಸ್ಪರ್ಧೆಗಳ ಮಾಹಿತಿಗಳನ್ನು ತಿಳಿಹೇಳಿ ಎಲ್ಲರಿಗೂ ಶುಭ ಕೋರಿದರು ಮೂರು ವರ್ಷದ ಮಗುವಿನಿಂದ ಹಿಡಿದು 75 ವರ್ಷದ ವಯಸ್ಕರರು ಭಾಗವಹಿಸಿದ್ದು ಈ ಕ್ರೀಡಾ ಕೂಟದ ವೈಶಿಷ್ಟವಾಗಿತ್ತು.
ಅನೇಕ ವೈದ್ಯರುಗಳಾದ ಡಾII ಸಪ್ಪನ್ ಡಿ ,ಡಾII ದಿಲೀಪ್ ಕುಲಕರ್ಣಿ, ಡಾII ವಿಠಲ್ ಖೋಡೆ ಡಾII ಆಲೂರ, ಡಾII ಜಗದೀಶ್ ನಿರಡಿ, ಡಾII ಅಮೃತ ಮಹಾಬಲಶೆಟ್ಟಿ, ಡಾII ತೃಪ್ತಿ ತೋರ್ಕ ಡಾII ಮೃದುಲಾ, ಡಾII ಎಂ ಎಂ ಹಿರೇಮಠ ,ಡಾII ವಿಜಯಾ ನಾಡಕರ್ಣಿ ಇನ್ನಿತರ ಅನೇಕ ಧಾರವಾಡದ ಖ್ಯಾತ ವೈದ್ಯರು ಮತ್ತು ಅವರ ಪರಿವಾರದವರು ಅನೇಕ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದರು ಡಾಕ್ಟರ್ ಕಿರಣ್ ಕುಲಕರ್ಣಿ ಕಾರ್ಯದರ್ಶಿಗಳು ಎಲ್ಲರಿಗೂ ವಂದಿಸಿ ಕಾರ್ಯಕ್ರಮದ ನಿರೂಪಣೆ ಮಾಡಿ ವಂದಿಸಿದರು.