ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ*ದಿವ್ಯ ಪ್ರಭು.*

*ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆ*
 *ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್ ಓ) ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ(ಎಪಿಆರ್ ಓ)ಗಳಿಗೆ ಮಾತ್ರ ಏ.13 ರಂದು ನಿಗಧಿತ ಸ್ಥಳಗಳಲ್ಲಿ ಮೊದಲ ಹಂತದ ತರಬೇತಿ;: ಜಿಲ್ಲಾ ಚುನಾವಣಾಧಿಕಾರಿ ದಿವ್ಯ ಪ್ರಭು.* 

*ಧಾರವಾಡ (ಕರ್ನಾಟಕ ವಾರ್ತೆ)ಏಪ್ರಿಲ್.11:*  ಧಾರವಾಡ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ದಿನದಂದು ಮತಗಟ್ಟೆಗಳಲ್ಲಿ ಸುಗಮ ಮತ್ತು ಸುವ್ಯವಸ್ಥಿತವಾಗಿ  ಕಾರ್ಯನಿರ್ವಹಿಸಲು ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್ ಓ) ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗನ್ನು ನೇಮಿಸಿ, ಈಗಾಗಲೇ ಆದೇಶ ಪತ್ರ ನೀಡಲಾಗಿದೆ. ಏಪ್ರಿಲ್ 13 ರಂದು ಬೆಳಿಗ್ಗೆ 10 ಗಂಟೆಗೆ ತಮ್ಮ ಆದೇಶ ಪತ್ರದಲ್ಲಿ ತಿಳಿಸಿರುವ ಸ್ಥಳಗಳಿಗೆ ಹಾಜರಾಗಿ, ತರಬೇತಿ ಪಡೆಯಬೇಕೆಂದು  ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ. 
ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಲೋಕಸಭಾ ಮತಕ್ಷೇತ್ರದ ಎಂಟು ವಿಧಾನಸಭಾ ಮತಕ್ಷೇತ್ರವಾರು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಿಸಿ, ಈಗಾಗಲೇ ಆದೇಶ ಜಾರಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. 
ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್ ಓ) ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿ  ಕರ್ತವ್ಯಕ್ಕೆ ನಿಯೋಜಿಸಿ ಆದೇಶಿಸಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ಏಪ್ರಿಲ್ 13 ರಂದು ತರಬೇತಿಗೆ ಹಾಜರಾಗಬೇಕು. 

ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿ.ಆರ್ ಓ) ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ, ನವಲಗುಂದ ವಿಧಾನಸಭಾ ಮತಕ್ಷೇತ್ರ ತರಬೇತಿಯನ್ನು ನವಲಗುಂದ ಪಟ್ಟಣದ ಶ್ರೀ ಶಂಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ, ಕುಂದಗೋಳ ವಿಧಾನಸಭಾ ಮತಕ್ಷೇತ್ರ ತರಬೇತಿಯನ್ನು ಕುಂದಗೋಳ ಪಟ್ಟಣದ ಶ್ರೀ ಹರಭಟ್ಟ ಪಿಯು ಕಾಲೇಜದಲ್ಲಿ, ಧಾರವಾಡ-71 ವಿಧಾನಸಭಾ ಮತಕ್ಷೇತ್ರ ತರಬೇತಿಯನ್ನು ಧಾರವಾಡ ನಗರದ ವಿದ್ಯಾಗಿರಿಯ ಬನಶಂಕರಿ ಆರ್ಟ್ಸ ಮತ್ತು ಕಾಮರ್ಸ್  ವಿಜ್ಞಾನ ಕಾಲೇಜು ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ (ಜೆ.ಎಸ್.ಎಸ್. ಆವರಣ)ಕಾಲೇಜದಲ್ಲಿ,  ಹುಬ್ಬಳ್ಳಿ–ಧಾರವಾಡ ಪೂರ್ವ-72 ವಿಧಾನಸಭಾ ಮತಕ್ಷೇತ್ರ ತರಬೇತಿಯನ್ನು ಹುಬ್ಬಳ್ಳಿ ನಗರದಲ್ಲಿನ ವಿದ್ಯಾನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುದಲ್ಲಿ, ಹುಬ್ಬಳ್ಳಿ-ಧಾರವಾಡ ಕೇಂದ್ರ-73   ವಿಧಾನಸಭಾ ಮತಕ್ಷೇತ್ರ ತರಬೇತಿಯನ್ನು ಹುಬ್ಬಳ್ಳಿಯ ಲ್ಯಾಮಿಂಗ್‍ಟನ್ ಬಾಯ್ಸ್ ಮತ್ತು ಗರ್ಲ್ಸ ಸ್ಕೂಲ್‍ದಲ್ಲಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ-74  ವಿಧಾನಸಭಾ ಮತಕ್ಷೇತ್ರ ತರಬೇತಿಯನ್ನು ಧಾರವಾಡ ವಿದ್ಯಾಗಿರಿಯ ಜೆ.ಎಸ್.ಎಸ್. ಕಾಲೇಜಿನ ಯುಜಿ ಮತ್ತು ಪಿಜಿ ಕೇಂದ್ರದಲ್ಲಿ, ಕಲಘಟಗಿ-75 ವಿಧಾನಸಭಾ ಮತಕ್ಷೇತ್ರ ತರಬೇತಿಯನ್ನು ಕಲಘಟಗಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

********

ನವೀನ ಹಳೆಯದು

نموذج الاتصال