ಪಠ್ಯೇತರ ಚಟುವಟಿಕೆ ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಪಾಲ್ಗೂಳ್ಳಲು ಸಹಕಾರ - ಪ್ರೂ ಕೆ ಬಿ ಗುಡಸಿ .

ಪಠ್ಯೇತರ ಚಟುವಟಿಕೆ ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಪಾಲ್ಗೂಳ್ಳಲು ಸಹಕಾರ - ಪ್ರೂ ಕೆ ಬಿ ಗುಡಸಿ .
ಧಾರವಾಡ  : 
ಪಠ್ಯೇತರ ಚಟುವಟಿಕೆಗಳಲ್ಲಿ ಮತ್ತು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ  ಕರ್ನಾಟಕ ವಿಶ್ವವಿದ್ಯಾಲಯ ಎಲ್ಲ ರೀತಿಯಿಂದ ಸಹಕಾರ ನೀಡಲು ಸಿದ್ದ ಎಂದು ಕವಿವಿ ಕುಲಪತಿ ಪ್ರೊ. ಕೆ.ಬಿ.ಗುಡಸಿ ಹೇಳಿದರು. 

ಅವರು ಪಂಜಾಬಿನ ಲುಧಿಯಾನದ ಪಂಜಾಬ ಕೃಷಿ ವಿಶ್ವವಿದ್ಯಾಲಯವು ಮಾರ್ಚ 28 ರಿಂದ ಏಪ್ರೀಲ್ 01 ರ ವರೆಗೆ ಆಯೋಜಿಸಿದ 37 ನೇ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯದ ಯುವ ಜನೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. 

ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಬಳಕೆ ಮಾಡಿಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದೆ ಎಂದರು. ವಿದ್ಯಾರ್ಥಿಗಳಿಗೆ ಸಾಧನೆ ಮಾಡುವ ಛಲವನ್ನು ಹೊಂದಿದಾಗ ಮಾತ್ರ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು. 

ಕವಿವಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ. ಸಿತಾರಾಂ ಪವಾರ ಮಾತನಾಡಿ ದೇಶದ ಎಂಟು ವಲಯಗಳ 117  ವಿಶ್ವವಿದ್ಯಾಲಯಗಳು  ಯುವಜೋತ್ಸವದಲ್ಲಿ ಭಾಗವಾಗಿದ್ದವು ಈ ಯುವಜನೋತ್ಸವದಲ್ಲಿ  ಕರ್ನಾಟಕ ವಿಶ್ವವಿದ್ಯಾಲಯದ ಕವಿವಿ.ಕೆಸಿಡಿ, ಜೆ.ಎಸ್.ಎಸ್ ಮತ್ತು ಕಾರವಾರದ ಶಿವಾಜಿ ಕಾಲೇಜಿನ 14 ವಿದ್ಯಾರ್ಥಿಗಳು ವಿವಿಧ ಏಳು ಸ್ಪರ್ಧೆಗಳಲ್ಲಿ  ವಿಜೇತರಾಗಿ ಕವಿವಿಗೆ ಕೀರ್ತಿ ತಂದಿದ್ದಾರೆ ಎಂದರು.   

ಯುವಜನೋತ್ಸವದ ಟೀಮ್ ಮ್ಯಾನೇಜರ್ ಡಾ. ದಿನೇಶ ನಾರಾಯಣಕರ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಕೌಶಲ್ಯಗಳನ್ನು ತರುವಲ್ಲಿ ಈ ಯುವಜನೋತ್ಸವಗಳು ಸಹಕಾರಿಯಾಗಿವೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯಾವದೇ ಒಂದು ವಿಷಯದಲ್ಲಿ ಹವ್ಯಾಸ ಬೆಳಸಿಕೊಂಡು ಸಾಧನೆಗೆ ಬಳಸಿಕೊಳ್ಳಬೇಕು ಎಂದರು.

ಯುವಜನೋತ್ಸವದಲ್ಲಿ ಭಾಗವಹಿಸಿದ ಕವಿವಿ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ಪ್ರಶಾಂತ ಬಿರಾದರ ಮಾತನಾಡಿ ಸ್ಪರ್ಧೆಯಲ್ಲಿ ಭಾಗವಹಿಸುವದು ಬಹಳ ಮುಖ್ಯ ಸಾಂಸ್ಕೃತಿಕ ವೇದಿಕೆಗಳು ವಿದ್ಯಾರ್ಥಿಗಳು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನದೆ ಆದ ಪ್ರತಿಭೆ ಹೊಂದಿರುತ್ತಾನೆ ಎಂದರು. 

ಕಾರ್ಯಕ್ರಮದಲ್ಲಿ ಕವಿವಿ ಕುಲಸಚಿವರಾದ ಡಾ. ಎ. ಚೆನ್ನಪ್ಪ, ಮೌಲ್ಯಮಾಪನ ಕುಲಸಚಿವರಾದ ಡಾ. ನಿಜಲಿಂಗಪ್ಪ ಮಟ್ಟಿಹಾಳ್, ಹಣಕಾಸು ಅಧಿಕಾರಿಗಳಾದ ಪ್ರೊ. ಸಿ.ಕೃಷ್ಣಮೂರ್ತಿ, ಡಾ. ಬಿ.ಎಚ್.ನಾಗೂರ,  ಡಾ. ನಾಗರಾಜ ಮುಗದೂರ, ಡಾ.ವಿಶ್ವನಾಥ ಚಚಡಿ ಡಾ. ಶಿವಶರಣ, ಹಾಗೂ ಯುವಜನೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ವಿದ್ಯಾರ್ಥಿಗಳು ಸೇರಿದಂತೆ ಕವಿವಿ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಹಾಜರಿದ್ದರು.   
-----

 ಫೋಟೊ ಶಿರ್ಷಿಕೆ:

ಪಂಜಾಬಿನ ಲುಧಿಯಾನದ ಪಂಜಾಬ ಕೃಷಿ ವಿಶ್ವವಿದ್ಯಾಲಯವು ಮಾರ್ಚ 28 ರಿಂದ ಏಪ್ರೀಲ್ 01 ರ ವರೆಗೆ ಆಯೋಜಿಸಿದ ೩೭ನೇ ರಾಷ್ಟ್ರಮಟ್ಟದ ಅಂತರ ವಿಶ್ವವಿದ್ಯಾಲಯದ ಯುವ ಜನೋತ್ಸವದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ವಿದ್ಯಾರ್ಥಿಗಳನ್ನು ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಿಸಿ ಸನ್ಮಾನಿಸಿದರು. ಚಿತ್ರದಲ್ಲಿ ಡಾ. ವಿಶ್ವನಾತ ಚಚಡಿ, ಡಾ. ಎಸ್.ಕೆ.ಪವಾರ, ಡಾ. ಬಿ.ಎಚ್.ನಾಗೂರ, ಡಾ. ನಿಜಲಿಂಗಪ್ಪ ಮಟ್ಟಿಹಾಳ,ಪ್ರೊ. ಸಿ.ಕೃಷ್ಣಮೂರ್ತಿ, ಡಾ. ದಿನೇಶ ನಾರಾಯಣಕರ,ಡಾ. ನಾಗರಾಜ ಮುಗದೂರ. ಆರ.ಎಸ್. ಸವಣೂರ ಇದ್ದಾರೆ.
ನವೀನ ಹಳೆಯದು

نموذج الاتصال